-ಕರ್ನಾಟಕ ಅಕೌಂಟೆಂಟ್ ಜನರಲ್ ಕಛೇರಿಯ ನಿವೃತ್ತ ಅಧಿಕಾರಿ ಬಿ.ವಿ. ಶ್ರೀನಿವಾಸ ಮಾತು
ಕನ್ನಡಪ್ರಭ ವಾರ್ತೆ ಬಸವಕಲ್ಯಾಣ:
ವೃತ್ತಿಗೆ ಸಂಬಂಧಿಸಿದ ಮತ್ತೊಂದು ಮಹತ್ವದ ದಾರಿ ವೈಯಕ್ತಿಕ ಹಣಕಾಸಿನ ನಿರ್ವಹಣೆ, ಆರ್ಥಿಕ ಪ್ರಜ್ಞೆ, ಬದುಕಿನ ಮತ್ತು ಸಮಾಜದ ಭದ್ರತೆಗೆ ದಾರಿಯಾಗಿದೆ ಎಂದು ಬೆಂಗಳೂರಿನ ಕರ್ನಾಟಕ ಅಕೌಂಟೆಂಟ್ ಜನರಲ್ ಕಛೇರಿಯ ನಿವೃತ್ತ ಅಧಿಕಾರಿ ಬಿ.ವಿ. ಶ್ರೀನಿವಾಸ ಹೇಳಿದರು.ಅವರು ನಗರದ ಬಸವೇಶ್ವರ ಪದವಿ ಕಾಲೇಜಿನಲ್ಲಿ ಐಕ್ಯುಎಸಿ ಯಿಂದ ಆಯೋಜಿಸಿದ್ದ ‘ವೈಯಕ್ತಿಕ ಹಣಕಾಸಿನ ನಿರ್ವಹಣೆ’ ಕುರಿತ ಉಪನ್ಯಾಸ ಸಮಾರಂಭ ಉದ್ಘಾಟಿಸಿ ಮಾತನಾಡಿದ ಅವರು, ಮಹಿಳೆಯರು ಹೆಚ್ಚಾಗಿ ವೈಯಕ್ತಿಕ ಆರ್ಥಿಕ ನಿರ್ವಹಣೆಗೆ ಒಲವು ತೋರಬೇಕು. ಗಳಿಕೆ ಜೊತೆಗೆ ಉಳಿತಾಯದಿಂದ ಆರ್ಥಿಕತೆಯ ಸುಧಾರಣೆ ಸಾಧ್ಯ ಎಂದರು.
ಬೆಂಗಳೂರಿನ ಅಕೌಂಟೆಂಟ್ ಜನರಲ್ ಕಛೇರಿಯ ನಿವೃತ್ತ ಅಧಿಕಾರಿ ವಿರುಪಾಕ್ಷ ಮಾತನಾಡಿ, ಪರ್ಸನಲ್ ಫೈನಾನ್ಸ್ ಹೊರದೇಶದ ಎಲ್ಲ ವಿಶ್ವವಿದ್ಯಾಲಯಗಳಲ್ಲಿ ಪಠ್ಯವಾಗಿ ಓದುತ್ತಾರೆ. ಹಣದ ಉಳಿತಾಯಕ್ಕೆ ಹಲವು ದಾರಿಗಳಿವೆ. ಆರ್ಥಿಕ ಮೌಲ್ಯದ ಬಗೆಗೆ ಹೆಚ್ಚು ಒತ್ತು ನೀಡುವ ಮೂಲಕ ವೈಯಕ್ತಿಕ ಆರ್ಥಿಕ ಸ್ಥಿತಿ ಸುಧಾರಿಸಬಹುದು ಎಂದರು.
ಗುಜರಾತನಲ್ಲಿ ಹತ್ತನೇ ತರಗತಿ ಮುಗಿದ ನಂತರವೇ ಸ್ಟಾಕ್ ಮಾರ್ಕೆಟ್, ಷೇರುಪೇಟೆ ಬಗೆಗೆ ತರಬೇತಿ ನೀಡುತ್ತಾರೆ. ಗಳಿಕೆ ಜತೆಗೆ ಉಳಿಕೆಗೆ ಪ್ರಾಮುಖ್ಯತೆ ನೀಡಿದರೆ ವೈಯಕ್ತಿಕ ಹಣಕಾಸು ನಿರ್ಹಹಣೆ ಚನ್ನಾಗಿ ಆಗುತ್ತದೆ ಎಂದರು.
ಪ್ರಾಚಾರ್ಯ ಡಾ. ಭೀಮಾಶಂಕರ ಬಿರಾದಾರ ಮಾತನಾಡಿ, ಆರ್ಥಿಕ ಪ್ರಜ್ಞೆ ಎಂಬುದು ವ್ಯವಹಾರ ಜ್ಞಾನ ಮತ್ತು ಲೋಕಜ್ಞಾನವಾಗಿರುತ್ತದೆ. ಪ್ರತಿಯೊಬ್ಬರ ಕೆಲಸಕ್ಕೂ ಸಮಾಜದಲ್ಲಿ ಒಂದು ಮೌಲ್ಯವಿರುತ್ತದೆ. ಕೃಷಿಕರ, ಜನಪರ, ಮನುಷ್ಯತ್ವದ ಪರವಾದ ಆರ್ಥಿಕ ನೀತಿಗಳು ಜನರ ಬದುಕು ಸುಧಾರಿಸುತ್ತವೆ. ಹಣದ ಜತೆಗೆ ಅದರ ವಿನಿಮಯದ ಬಗೆಗೆ ವಿವೇಕ ಮತ್ತು ಪ್ರಜ್ಞೆ ಬೆಳೆಸಿಕೊಳ್ಳಬೇಕಾದ ಅಗತ್ಯವಿದೆ ಎಂದರು.
ಗಂಗಾಧರ ಸಾಲಿಮಠ ಸ್ವಾಗತಿಸಿದರು. ಸಂಗೀತಾ ಮಹಾಗಾಂವೆ ನಿರೂಪಿಸಿದರೆ ಡಾ. ಶಾಂತಲಾ ಪಾಟೀಲ ವಂದಿಸಿದರು.
ಚಿತ್ರ 27ಬಿಡಿಆರ್51
--