ಧಾರವಾಡ:
ಬಾಷ್ ಬ್ರಿಡ್ಜ್ ಮತ್ತು ಜನತಾ ಶಿಕ್ಷಣ ಸಮಿತಿ ಜಂಟಿಯಾಗಿ ಹಮ್ಮಿಕೊಂಡಿದ್ದ ಉದ್ಯೋಗ ಮೇಳವನ್ನು ಉದ್ಘಾಟಿಸಿ ಮಾತನಾಡಿದರು.
ನಾವು ನಿರ್ವಹಿಸುತ್ತಿರುವ ಕೆಲಸದಲ್ಲಿ ಪ್ರಾಮಾಣಿಕತೆ, ನಂಬಿಕೆ, ಪರಿಶ್ರಮ ಹಾಗೂ ಸಾಧಿಸುವ ಛಲವಿದ್ದಾಗ ಮಾತ್ರ ನಮ್ಮ ಕ್ಷೇತ್ರದಲ್ಲಿ ಸಾಧನೆ ಮಾಡಬಹುದು. ಮೊದಲು ಉದ್ಯೋಗ ಅರಸಿಕೊಂಡು ಹೋಗುವ ಕಾಲಮಾನವಿತ್ತು. ಆದರೆ, ಈಗ ಉದ್ಯೋಗದಾತರೇ ಉದ್ಯೋಗಮೇಳಗಳಲ್ಲಿ ಭಾಗವಹಿಸಿ ನಿಮ್ಮನ್ನು ಉದ್ಯೋಗಕ್ಕೆ ಆಹ್ವಾನಿಸುತ್ತಿದ್ದಾರೆ. ಇಂತಹ ಉತ್ತಮ ಅವಕಾಶಗಳನ್ನು ಸದುಪಯೋಗಪಡಿಸಿಕೊಳ್ಳಿ. ಸಂದರ್ಶನ ನೀಡುವ ಮುನ್ನ ನಿಮ್ಮ ಅಗತ್ಯತೆಗಳನ್ನು ಮನಗಂಡು, ಕೌಶಲ್ಯ ಬೆಳೆಸಿಕೊಳ್ಳಿ. ಸರಿಯಾದ ಸಮವಸ್ತ್ರ ನಿಮ್ಮದಾಗಿರಲಿ, ನಮ್ಮ ಗುರಿ ಹಾಗೂ ಮಾತಿನಲ್ಲಿ ಸ್ಪಷ್ಟತೆಯಿರಲಿ. ಯಾವುದೇ ಹಿಂಜರಿಕೆಯಿಲ್ಲದೇ ಸಂದರ್ಶನ ನೀಡಿ ಎಂದರು.ಬಾಷ್ ಬ್ರಿಡ್ಜ್‌ನ ಉದ್ಯೋಗಾಧಿಕಾರಿ ಖಲೀಮ್ ಮಾತನಾಡಿ, ಉದ್ಯೋಗಾವಕಾಶಗಳು ಹೇರಳವಾಗಿವೆ. ನಮ್ಮ ಸುತ್ತಮುತ್ತಲಿ ಆರಾಮದಾಯಕ ವಲಯದಲ್ಲಿಯೇ ಉದ್ಯೋಗವನ್ನು ಅರಸುತ್ತಾ ಹೋದರೆ, ನಿಮಗೆ ಉದ್ಯೋಗ ದೊರಕುವುದು ಕಷ್ಟಕರ. ಕಾರಣ ನಮಗೆ ಸಿಗುವ ಉದ್ಯೋಗವಲಯದಲ್ಲಿಯೇ ಆಸಕ್ತಿವಹಿಸಿ ದುಡಿದು ಅದನ್ನೆ ನಮ್ಮ ಆರಾಮದಾಯಕ ವಲಯವನ್ನಾಗಿಸಿಕೊಳ್ಳಬೇಕು ಎಂದು ಹೇಳಿದರು.
ಬಾಷ್ ಕಂಪನಿಯ ಕೋ-ಆರ್ಡಿನೇಟರ್ ಸುಧೀರ ಪಿಡ್ಡಿ ನಿರೂಪಿಸಿದರು. ಮೇಳದಲ್ಲಿ 30 ಕಂಪನಿಗಳು, 1500ಕ್ಕೂ ಹೆಚ್ಚು ಅಭ್ಯರ್ಥಿಗಳು ಭಾಗವಹಿಸಿದ್ದರು.