ಖಾಸಗಿ ಫೈನಾನ್ಸ್‌ಗಳ ಕಿರುಕುಳ ಖಂಡಿಸಿ ಮಹಿಳೆಯರಿಂದ ಮನವಿ

KannadaprabhaNewsNetwork |  
Published : Sep 21, 2024, 01:53 AM IST
ಫೋಟೊ ಶೀರ್ಷಿಕೆ: 20ಆರ್‌ಎನ್‌ಆರ್1ರಾಣಿಬೆನ್ನೂರು ನಗರದಲ್ಲಿ ಖಾಸಗಿ ಫೈನಾನ್ಸ್ಗಳ ಕಿರುಕುಳ ಖಂಡಿಸಿ ಕರ್ನಾಟಕ ರಾಜ್ಯ ರೈತ ಸಂಘದ ನೇತೃತ್ವದಲ್ಲಿ ಮಹಿಳೆಯರು ತಹಸೀಲ್ದಾರ ಆರ್.ಎಚ್.ಭಾಗವಾನ ಅವರಿಗೆ ಮನವಿ ಸಲ್ಲಿಸಿದರು. | Kannada Prabha

ಸಾರಾಂಶ

ಖಾಸಗಿ ಫೈನಾನ್ಸ್‌ಗಳ ಕಿರುಕುಳ ಖಂಡಿಸಿ ಕರ್ನಾಟಕ ರಾಜ್ಯ ರೈತ ಸಂಘದ ನೇತೃತ್ವದಲ್ಲಿ ಮಹಿಳೆಯರು ಶುಕ್ರವಾರ ತಹಸೀಲ್ದಾರ್‌ ಆರ್.ಎಚ್. ಭಾಗವಾನ ಹಾಗೂ ಶಹರ ಪಿಎಸ್‌ಐ ಗಡ್ಡೆಪ್ಪ ಗುಂಜುಟಗಿ ಅವರಿಗೆ ಮನವಿ ಸಲ್ಲಿಸಿದರು.

ರಾಣಿಬೆನ್ನೂರು: ಖಾಸಗಿ ಫೈನಾನ್ಸ್‌ಗಳ ಕಿರುಕುಳ ಖಂಡಿಸಿ ಕರ್ನಾಟಕ ರಾಜ್ಯ ರೈತ ಸಂಘದ ನೇತೃತ್ವದಲ್ಲಿ ಮಹಿಳೆಯರು ಶುಕ್ರವಾರ ತಹಸೀಲ್ದಾರ್‌ ಆರ್.ಎಚ್. ಭಾಗವಾನ ಹಾಗೂ ಶಹರ ಪಿಎಸ್‌ಐ ಗಡ್ಡೆಪ್ಪ ಗುಂಜುಟಗಿ ಅವರಿಗೆ ಮನವಿ ಸಲ್ಲಿಸಿದರು.

ಈ ಸಮಯದಲ್ಲಿ ರೈತ ಮುಖಂಡ ಹನುಮಂತಪ್ಪ ಕಬ್ಬಾರ ಮಾತನಾಡಿ, ಇತ್ತೀಚಿಗೆ ನಗರದಲ್ಲಿ ನಾಯಿಕೊಡೆಯಂತೆ ಹುಟ್ಟಿಕೊಂಡಿರುವ ಖಾಸಗಿ ಫೈನಾನ್ಸ್‌ಗಳು ನಗರ ಹಾಗೂ ಗ್ರಾಮೀಣ ಭಾಗದ ರೈತ ಕಾರ್ಮಿಕರು, ಕೂಲಿ ಕಾರ್ಮಿಕರು, ಮಧ್ಯಮ ವರ್ಗದ ಬಡವರಿಗೆ ಲೋನ್ ಕೊಟ್ಟು ಅವರಿಂದ ದುಪ್ಪಟ್ಟು ಬಡ್ಡಿಯನ್ನು ವಸೂಲಿ ಮಾಡುತ್ತಿದ್ದಾರೆ. ಸಾಲ ಪಡೆದವರ ಮನೆಯ ಮುಂದೆ ಸಂಜೆ 7ರಿಂದ ರಾತ್ರಿ 11ರ ವರೆಗೆ ಹಣ ಮತ್ತು ಅದರ ಬಡ್ಡಿಯನ್ನು ಕಟ್ಟುವಂತೆ ಅವಮಾನಗೊಳಿಸುತ್ತ ಮನೆ ಬೀಗ ಹಾಕುತ್ತೇವೆ, ಹರಾಜು ಮಾಡುತ್ತೇವೆ ಎಂದು ಬೆದರಿಕೆ ಹಾಕುತ್ತಿದ್ದಾರೆ. ಸಾಲ ಮರುಪಾವತಿಸಲು ಸಮಯ ಕೇಳಿದರೂ ಒಪ್ಪುತ್ತಿಲ್ಲ. ಈಗಾಗಲೇ ಜಿಲ್ಲಾಧಿಕಾರಿಗಳಿಗೆ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ಮನವಿ ಸಲ್ಲಿಸಲಾಗಿದೆ. ಆದರೂ ಖಾಸಗಿ ಫೈನಾನ್ಸ್‌ಗಳಿಂದ ಸಾಲ ವಸೂಲಾತಿಗೆ ಕಿರುಕುಳ ಮುಂದುವರಿದಿದೆ. ಆದ್ದರಿಂದ ಸಂಬಂಧಪಟ್ಟ ಅಧಿಕಾರಿಗಳು ಖಾಸಗಿ ಫೈನಾನ್ಸ್ ವ್ಯಕ್ತಿಗಳನ್ನು ಕರೆಯಿಸಿ ಅವರ ನಿಯಮಾವಳಿಗಳ ಪ್ರಕಾರ ವಸೂಲಿ ಮಾಡುವಂತೆ ಮತ್ತು ಕಾಲಾವಕಾಶಗಳನ್ನು ಕೊಡಿಸಿ ಹಣ ವಸೂಲಿ ಮಾಡಿಕೊಳ್ಳಲಿಕ್ಕೆ ಆದೇಶಿಸಬೇಕು ಎಂದರು.

ಬಸವರಾಜ ಕಡೂರ, ಶ್ರೀಕಾಂತ ಸಣ್ಮನಿ, ನಾರಾಯಣ ಲಮಾಣಿ, ಹನುಮಂತಪ್ಪ ಹಲವಾಗಲ, ಉಚ್ಚಂಗೆವ್ವ ಪಕ್ಕಜ್ಜಿ, ಗೌರವ್ವ ಹಲವಾಗಲ, ಬಸವ್ವ ಮೈದೂರ, ಶಿಲ್ಪಾ ಸಣ್ಮನಿ, ಗಾಯತ್ರವ್ವ ಉಳ್ಳೇರ, ರೇಣುಕಾ ವರವಜ್ಜನವರ, ರತ್ನವ್ವ ಚಳಗೇರಿ, ಬಸವ್ವ ಮುದೇನೂರ, ಮಂಜವ್ವ ಕರೇತಿಮ್ಮಣ್ಣನವರ, ಹೊನ್ನವ್ವ ಮೂಕಮ್ಮನವರ, ಅಂಜನಾ ಬ್ಯಾಡಗಿ, ರಂಜಿತಾ ಹರಿಜನ, ಅಂಬಿಕಾ ಮರಿಯಮ್ಮನವರ, ಶಾಂತಮ್ಮ ಕಡಚಿ, ಮಂಜವ್ವ ಕಡಚಿ, ಲಕ್ಷ್ಮವ್ವ ಗಂಗಣ್ಣನವರ ಮತ್ತಿತರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಪತ್ರಕರ್ತ ತಗಡೂರಿಗೆ ಲೋಹಿಯಾ ಪ್ರಶಸ್ತಿ ಪ್ರದಾನ
ಕನ್ನಡದಲ್ಲಿ ರೈಲ್ವೆ ಪರೀಕ್ಷೆಗೆ ಇಲಾಖೆ : ಕರವೇ