ರಾಣಿಬೆನ್ನೂರು: ರಾಣಿಬೆನ್ನೂರಿನಿಂದ ಹರಿಹರಕ್ಕೆ ತೆರಳುವ ಪ್ರತಿಯೊಂದು ಬಸ್‌ಗಳನ್ನು ತಾಲೂಕಿನ ಮಾಕನೂರ ಕ್ರಾಸ್ ಬಳಿ ನಿಲುಗಡೆ ಮಾಡುವಂತೆ ಆಗ್ರಹಿಸಿ ಸ್ವಾಭಿಮಾನಿ ಕರ್ನಾಟಕ ರಕ್ಷಣಾ ವೇದಿಕೆ ಕಾರ್ಯಕರ್ತರು ಶುಕ್ರವಾರ ಡಿಪೋ ಮ್ಯಾನೇಜರ್ ಹಾಗೂ ಶಾಸಕ ಪ್ರಕಾಶ ಕೋಳಿವಾಡ ಆಪ್ತ ಕಾರ್ಯದರ್ಶಿ ಮಹೇಶ ಕೆಂಚರೆಡ್ಡಿ ಅವರಿಗೆ ಮನವಿ ಸಲ್ಲಿಸಿದರು.
ತಾಲೂಕು ಅಧ್ಯಕ್ಷ ಚಂದ್ರಪ್ಪ ಬಣಕಾರ ಮಾತನಾಡಿ, ಮಾಕನೂರು ಕ್ರಾಸ್ ಸುಮಾರು 15 ಹಳ್ಳಿಯ ಸಂಪರ್ಕ ಹೊಂದಿರುವ ಸ್ಥಳವಾಗಿದೆ. ಈ ಭಾಗದಿಂದ ದಾವಣಗೆರೆ ಚಿಗಟೇರಿ ಆಸ್ಪತ್ರೆ, ಶಿವಮೊಗ್ಗ ಮಂಗಳೂರು, ಮಣಿಪಾಲ ಮುಂತಾದ ಕಡೆಗಳಲ್ಲಿರುವ ಆಸ್ಪತ್ರೆಗಳಿಗೆ ಪ್ರಯಾಣಿಕರು ತೆರಳುತ್ತಾರೆ. ಇದಲ್ಲದೆ ವಿವಿಧ ಕೆಲಸಗಳಿಗಾಗಿ ಸಾರ್ವಜನಿಕರು, ರೈತರು, ವಿದ್ಯಾರ್ಥಿಗಳು ಪರಸ್ಥಳಗಳಿಗೆ ತೆರಳುತ್ತಾರೆ. ಆದ್ದರಿಂದ ಶಾಸಕರು ಸಂಬಂಧಪಟ್ಟ ಇಲಾಖೆ ಅಧಿಕಾರಿಗಳಿಗೆ ಸೂಚನೆ ನೀಡಿ ಮಾಕನೂರು ಕ್ರಾಸ್ ಬಳಿ ಬಸ್ ನಿಲುಗಡೆಗೆ ಸೂಚಿಸಿ ಸಾರ್ವಜನಿಕರಿಗೆ ಅನುಕೂಲ ಕಲ್ಪಿಸಬೇಕು ಎಂದು ಆಗ್ರಹಿಸಿದರು.
ಸಿದ್ಧಾರೂಢ ಗುರುಂ, ಮರಡೆಪ್ಪ ಚಳಗೇರಿ, ಆನಂದ ಲಮಾಣಿ, ರಾಜು ಲಮಾಣಿ ಮತ್ತಿತರರಿದ್ದರು.