ಕನ್ನಡಪ್ರಭ ವಾರ್ತೆ ಉಪ್ಪಿನಂಗಡಿ
ರಾಜ್ಯಾದ್ಯಂತ ಸರ್ಕಾರಿ ಪದವಿ ಪೂರ್ವ ಕಾಲೇಜುಗಳಲ್ಲಿ ೪,೬೫೯ ಮಂದಿ ಅತಿಥಿ ಉಪನ್ಯಾಸಕರು ಕಾರ್ಯ ನಿರ್ವಹಿಸುತ್ತಿದ್ದು, ಮಾಸಿಕ ೧೨ ಸಾವಿರ ರು. ವೇತನ ನೀಡಲಾಗುತ್ತಿದೆ. ಇಂದಿನ ದಿನಮಾನಗಳಲ್ಲಿ ೧೨ ಸಾವಿರ ರು. ಸಂಬಳಕ್ಕೆ ಜೀವನ ನಡೆಸುವುದು ಕಷ್ಟವಾಗಿರುತ್ತದೆ. ಇದೇ ಸಂಬಳ ಪಡೆದು ಜೀವನ ನಿರ್ವಹಣೆಯೊಂದಿಗೆ ಮಕ್ಕಳ ಭವಿಷ್ಯ ರೂಪಿಸಬೇಕಾಗಿದೆ. ಜೊತೆಗೆ ಯಾವುದೇ ಸೇವಾ ಭದ್ರತೆಯೂ ಇಲ್ಲದಂತಾಗಿದೆ.
ಹಲವು ವರ್ಷಗಳಿಂದ ಅನೇಕ ರೀತಿಯಲ್ಲಿ ಹೋರಾಟದ ಮೂಲಕ ಸಮಸ್ಯೆಗಳನ್ನು ಸರ್ಕಾರದ ಗಮನಕ್ಕೆ ತರಲಾಗಿದೆ. ಆದರೆ ಯಾರೂ ಸಕಾರಾತ್ಮಕವಾಗಿ ಸ್ಪಂದಿಸಿರುವುದಿಲ್ಲ. ಆದ್ದರಿಂದ ಮುಂಬರುವ ಬಜೆಟ್‌ನಲ್ಲಿ ಅತಿಥಿ ಉಪನ್ಯಾಕರಿಗೆ ಕನಿಷ್ಠ ವೇತನ ೩೦ ಸಾವಿರ ರು.ಗೆ ಹೆಚ್ಚಳ ಮಾಡುವ ಕುರಿತು ಸರ್ಕಾರದ ಅಥವಾ ಮುಖ್ಯಮಂತ್ರಿಗಳ ಗಮನ ಸೆಳೆಯುವಂತೆ ಮನವಿಯಲ್ಲಿ ಆಗ್ರಹಿಸಲಾಗಿದೆ.ಶಾಸಕ ಅಶೋಕ್ ಕುಮಾರ್ ರೈಗೆ ಮನವಿ ನೀಡಿದ ನಿಯೋಗದಲ್ಲಿ ಉಪ್ಪಿನಂಗಡಿ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಅತಿಥಿ ಉಪನ್ಯಾಸಕರಾದ ತನುಜಾಕ್ಷಿ, ಪ್ರಜ್ಞಾ, ನವ್ಯಶ್ರೀ, ಅಕ್ಷತಾ ಮೊದಲಾದವರು ಇದ್ದರು.