ಬರಗಾಲದಿಂದ ರೈತರು ತತ್ತರ, ಸಾಲ ಮನ್ನಾಕ್ಕೆ ಆಗ್ರಹ

KannadaprabhaNewsNetwork |  
Published : Mar 12, 2024, 02:09 AM IST
ಫೋಟೊ ಶೀರ್ಷಿಕೆ: 11ಆರ್‌ಎನ್‌ಆರ್1ರಾಣಿಬೆನ್ನೂರಿನಲ್ಲಿ ಆಮ್ ಆದ್ಮಿ ಪಕ್ಷದ ಕಾರ್ಯಕರ್ತರು ಸಾಲ ಮನ್ನಾಕ್ಕೆ ಆಗ್ರಹಿಸಿ ತಹಸೀಲ್ದಾರ್ ಗುರುಬಸವರಾಜ ಅವರಿಗೆ ಮನವಿ ಸಲ್ಲಿಸಿದರು.  | Kannada Prabha

ಸಾರಾಂಶ

ಜಿಲ್ಲಾಡಳಿತ ಬ್ಯಾಂಕ್, ಸ್ವಸಹಾಯ ಸಂಘ ಸೇರಿ ಇತರ ಫೈನಾನ್ಸ್‌ನವರು ಸಾಲದ ಕಂತುಗಳನ್ನು 3 ತಿಂಗಳ ಕಾಲ ವಸೂಲಿ ಮಾಡುವುದನ್ನು ತಡೆಯಬೇಕು ಎಂದು ಒತ್ತಾಯಿಸಿ ಆಮ್ ಆದ್ಮಿ ಪಕ್ಷದ ಕಾರ್ಯಕರ್ತರು ಸೋಮವಾರ ತಹಸೀಲ್ದಾರ್ ಕೆ. ಗುರುಬಸವರಾಜ ಮೂಲಕ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದರು.

ರಾಣಿಬೆನ್ನೂರು: ಜಿಲ್ಲೆಯಲ್ಲಿ ಬರಗಾಲದಿಂದ ರೈತರು ಹಾಗೂ ಮಹಿಳೆಯರು ದುಡಿಮೆ ಇಲ್ಲದೆ ಆರ್ಥಿಕವಾಗಿ ಸಂಕಷ್ಟಕ್ಕೆ ಸಿಲುಕಿದ್ದಾರೆ. ಆದ್ದರಿಂದ ಜಿಲ್ಲಾಡಳಿತ ಬ್ಯಾಂಕ್, ಸ್ವಸಹಾಯ ಸಂಘ ಸೇರಿ ಇತರ ಫೈನಾನ್ಸ್‌ನವರು ಸಾಲದ ಕಂತುಗಳನ್ನು 3 ತಿಂಗಳ ಕಾಲ ವಸೂಲಿ ಮಾಡುವುದನ್ನು ತಡೆಯಬೇಕು ಎಂದು ಒತ್ತಾಯಿಸಿ ಆಮ್ ಆದ್ಮಿ ಪಕ್ಷದ ಕಾರ್ಯಕರ್ತರು ಸೋಮವಾರ ತಹಸೀಲ್ದಾರ್ ಕೆ. ಗುರುಬಸವರಾಜ ಮೂಲಕ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದರು.

ಈ ಸಮಯದಲ್ಲಿ ಆಮ್ ಆದ್ಮಿ ಪಕ್ಷದ ಜಿಲ್ಲಾಧ್ಯಕ್ಷ ಹನುಮಂತಪ್ಪ ಕಬ್ಬಾರ ಮಾತನಾಡಿ, ಜಿಲ್ಲೆಯಲ್ಲಿ ಈಗಾಗಲೇ ಒಂದೊಂದು ಕುಟುಂಬದಲ್ಲಿ 3-4 ಸಂಘಗಳಲ್ಲಿ ಸಾಲ ತೆಗೆದುಕೊಂಡು ಒಂದೊಂದು ಕುಟುಂಬದಲ್ಲಿ ಒಂದು ತಿಂಗಳಿಗೆ 25ರಿಂದ 50 ಸಾವಿರ ರು.ಗಳವರೆಗೂ ಕಂತು ಕಟ್ಟುವ ಪರಿಸ್ಥಿತಿ ನಿರ್ಮಾಣ ಮಾಡಿಕೊಂಡಿದ್ದು ಈವರೆಗೂ ಎಲ್ಲರೂ ಸಾಲದ ಕಂತುಗಳನ್ನು ಕಟ್ಟುತ್ತ ಬಂದಿದ್ದಾರೆ. ಆದರೀಗ ಬರಗಾಲದಿಂದ ತತ್ತರಿಸಿ ಹೋಗಿದ್ದು, ಜೀವನ ನಡೆಸುವುದೆ ದುಸ್ತರವಾಗಿದೆ. ಇಂತಹ ಪರಿಸ್ಥಿತಿಯಲ್ಲಿ ಆತ್ಮಹತ್ಯೆ ಪ್ರಕರಣಗಳು ಹೆಚ್ಚಾಗಿವೆ. ಆದ್ದರಿಂದ ಸ್ತ್ರೀ ಶಕ್ತಿ ಸಂಘಗಳಿಂದ ಮತ್ತು ಧರ್ಮಸ್ಥಳ ಸಂಘ ಹಾಗೂ ಫೈನಾನ್ಸ್‌ಗಳಲ್ಲಿ 3 ತಿಂಗಳ ಯಾವುದೇ ರೀತಿ ಒತ್ತಡ ಹಾಕಿ ಹಣ ವಸೂಲಿ ಮಾಡದಂತೆ ಜಿಲ್ಲಾಡಳಿತ ಆದೇಶ ಮಾಡಬೇಕು ಎಂದರು.

ಧರ್ಮಸ್ಥಳ ಸಂಘದ ಧರ್ಮಾಧಿಕಾರಿಗಳು ಸಾಲ ಮನ್ನಾ ಮಾಡಲಿಕ್ಕೆ ಸಾರ್ವಜನಿಕರ ಪರವಾಗಿ ನೊಂದ ಬಡ ಕುಟುಂಬಗಳ ಮಹಿಳೆಯರ ಪರವಾಗಿ ಪತ್ರವನ್ನು ಬರೆದು ಸಾಲ ಮನ್ನಾ ಮಾಡಲು ಜಿಲ್ಲಾಡಳಿತ ಮನವಿ ಮಾಡಿಕೊಳ್ಳಬೇಕು ಎಂದು ಒತ್ತಾಯಿಸಿದರು.

ಲಲಿತವ್ವ ಲಮಾಣಿ, ಮಂಜುಳಾ ಆರ್.ಸಿ., ಗಂಗವ್ವ ಲಮಾಣಿ, ಲಕ್ಷö್ಮವ್ವ ಲಮಾಣಿ, ಬಸಮ್ಮ ಮಾಳಮ್ಮನವರ, ಗಜೇಂದ್ರ ಬಾಲಬಸವರ, ಸುರೇಶ ಕುಲಕುಂಟಗಿ, ನಾರಾಯಣ ಲಮಾಣಿ, ಬಸಪ್ಪ ಬಾರ್ಕಿ, ಶಿವಾನಂದ ಕೆಳಗಿನಮನಿ, ನಾಗರಾಜ ಕೆಳಗಿನಮನಿ ಮತ್ತಿತರರು ಪಾಲ್ಗೊಂಡಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ನೇಮಕಾತಿ ಪ್ರಕ್ರಿಯೆ ಇನ್ನು ಸುಗಮ-ಒಳಮೀಸಲು ಬಿಲ್‌ಗೆ ಕೊನೆಗೂ ಗೌರ್ನರ್‌ ಗೆಹಲೋತ್‌ ಅಂಕಿತ
ಡಿಕೆಶಿ ಬಣದ 18 ಶಾಸಕರು, ಸಚಿವರಿಂದ ಡಿನ್ನರ್‌ ಪಾರ್ಟಿ