ಕನ್ನಡಪ್ರಭ ವಾರ್ತೆ ಶಹಾಪುರ
ಇಲ್ಲಿನ ಲಕ್ಷ್ಮೀ ನಗರದ ಆಂಜನೇಯ ದೇವಸ್ಥಾನ ಆವರಣದಲ್ಲಿ ಶಿವರಾತ್ರಿ ಪ್ರಯುಕ್ತ ಆಯೋಜಿಸಿದ್ದ ಶಿವ ಸ್ಮರಣೆ ಸಂಗೀತ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಕತ್ತಲೆಂಬ ಅಜ್ಞಾನ ತೊರೆದು ಬೆಳಕಿನ ಸುಜ್ಞಾನದಡೆಗೆ ನಡೆಯ ಮಾರ್ಗ ಕಂಡುಕೊಳ್ಳುವದೇ ಶಿವರಾತ್ರಿ. ತೋರಿಕೆ ಮತ್ತು ಆಡಂಬರದ ಪೂಜೆಯನ್ನು ಯಾವುದೇ ದೇವರು ಬಯಸುವುದಿಲ್ಲ. ಆಡಂಬರಗಳಿಂದ ಮುಕ್ತರಾಗಿ ಸರಳತೆಯಿಂದ ಪರಶಿವನ ಧ್ಯಾನಿಸಿದರೆ ಸಾಕು. ಕಾಯಕ ದಾಸೋಹಿ ಪರಿಕಲ್ಪನೆ ನೀಡಿ ಸಕಲ ಜೀವಾತ್ಮರಿಗೆ ಲೇಸನ್ನೆ ಬಯಸಿ ಸಮಾನತೆ ಭ್ರಾತೃತ್ವ ಭಾವನೆ ನೀಡಿ ಇವನಾರವ ಎನ್ನದೆ ಎಲ್ಲರೂ ನಮ್ಮವರೇ ಎಂದು ಸಾರಿದ ಬಸವಣ್ಣನ ಭಕ್ತಿಯೂ ಅದೇ ಸರಳತೆಯಿಂದ ಕೂಡಿತ್ತು. ಆ ಕಾರಣಕ್ಕೆ ಆತನನ್ನು ಭಕ್ತಿ ಭಂಡಾರಿ ಬಸವಣ್ಣ ಎಂದು ಸಂಬೋಧಿಸಲಾಯಿತು ಎಂದರು.ಪ್ರಸ್ತುತ ಅಣ್ಣ ಬಸವಣ್ಣನವರನ್ನು ಈ ನಾಡಿನ ಸಾಂಸ್ಕೃತಿಕ ನಾಯಕವೆಂದು ಘೋಷಿಸಿರುವುದು ಸಂತಸ ಸಂಗತಿಯಾಗಿದೆ. ಸರ್ವರ ಏಳಿಗೆ ಬಯಸಿದ ಶರಣ ಸಂಕುಲದಂತೆ ನಾವೆಲ್ಲ ಒಂದಾಗಿ ನಡೆಯಬೇಕಿದೆ. ಲಕ್ಷ್ಮೀ ನಗರದಲ್ಲಿ ಸರ್ವರೂ ಜನಾಂಗದವರು ಕೂಡಿ ಸಾಹಿತ್ಯ, ಸಂಗೀತ, ಯೋಗ, ಸಾಮಾಜಿಕ ಪ್ರಮುಖರನ್ನು ಕರೆಯಿಸಿ ಉತ್ತಮ ಕಾರ್ಯಕ್ರಮ ಏರ್ಪಡಿಸಿದ್ದ ಸಂಘಟಕರಿಗೆ ಅನಂತ ಧನ್ಯವಾದಗಳು ಎಂದು ಪ್ರೇರಣಾತ್ಮಕ ನುಡಿಗಳನ್ನಾಡಿದರು.
ಕರವೇ ಉತ್ತರ ಕರ್ನಾಟಕ ಅಧ್ಯಕ್ಷ ಶರಣು ಗದ್ದುಗೆ, ಬಡವಾಣೆಯ ಹಿರಿಯ ಕೆಂಚಪ್ಪ ನಗನೂರ, ಜೇವರ್ಗಿ ಪುರಸಭೆ ಮುಖ್ಯಾಧಿಕಾರಿ ಶಂಭುಲಿಂಗ ದೇಸಾಯಿ ಮಾತನಾಡಿದರು.
ಕಾರ್ಯಕ್ರಮ ಸಂಘಟಕ ಸಂಗನಗೌಡ ಪಾಟೀಲ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಶಿವಕುಮಾರ ಕರದಳ್ಳಿ ಸ್ವಾಗತಿಸಿದರು. ಲಕ್ಷ್ಮಣ ಲಾಳಸಗೇರಿ ನಿರೂಪಿಸಿದರು. ಚಂದ್ರು ಜೀನಕೇರಿ ವಂದಿಸಿದರು.