ಎನ್‌ಪಿಎಸ್‌ ರದ್ದುಗೊಳಿಸಲು ಮನವಿ

KannadaprabhaNewsNetwork | Published : Jan 19, 2024 1:52 AM

ಸಾರಾಂಶ

ಕಾಂಗ್ರೆಸ್‌ ಪ್ರಣಾಳಿಕೆಯಲ್ಲಿ ಹೇಳಿದಂತೆ 2006ರ ನಂತರ ಸೇವೆಗೆ ಸೇರಿದ ನೌಕರರಿಗೆ ಕೂಡಲೇ ಹಳೆ ಪಿಂಚಣಿ ವ್ಯವಸ್ಥೆ ಮಾಡಲು ಸಚಿವ ಸಂಪುಟದಲ್ಲಿ ನಿರ್ಧಾರ ಕೈಗೊಳ್ಳಬೇಕೆಂದು ಮನವಿ ಮಾಡಿದರು.

ಹರಪನಹಳ್ಳಿ: ಹೊಸ ಪಿಂಚಣಿ ಯೋಜನೆ ರದ್ದುಗೊಳಿಸಿ ಹಳೆ ಪಿಂಚಣಿ ಯೋಜನೆಯನ್ನು ಮರುಜಾರಿಗೆ ತರಬೇಕೆಂದು ಸರ್ಕಾರದ ಮೇಲೆ ಒತ್ತಡ ತರಬೇಕೆಂದು ಇಲ್ಲಿಯ ಶಾಸಕಿ ಎಂ.ಪಿ. ಲತಾ ಮಲ್ಲಿಕಾರ್ಜುನ ಅವರಿಗೆ ತಾಲೂಕು ಎನ್‌ಪಿಎಸ್‌ ನೌಕರರ ಸಂಘದಿಂದ ಬುಧವಾರ ಮನವಿ ಪತ್ರ ಸಲ್ಲಿಸಲಾಯಿತು.

ಸುಮಾರು 35ಕ್ಕೂ ಹೆಚ್ಚು ಇಲಾಖೆಗಳ 200ಕ್ಕೂ ಹೆಚ್ಚು ನೌಕರರು ಶಾಸಕರ ನಿವಾಸಕ್ಕೆ ತೆರಳಿ ಸಲ್ಲಿಸಿದ ಮನವಿಗೆ ಶಾಸಕಿ ಎಂ.ಪಿ. ಲತಾ ಅವರು, ಜಿಲ್ಲಾ ಉಸ್ತುವಾರಿ ಸಚಿವ ಜಮೀರ್‌ ಅಹಮದ್‌ ಖಾನ್‌ ಅವರಿಗೆ ದೂರವಾಣಿ ಕರೆ ಮಾಡಿ, ಕಾಂಗ್ರೆಸ್‌ ಪ್ರಣಾಳಿಕೆಯಲ್ಲಿ ಹೇಳಿದಂತೆ 2006ರ ನಂತರ ಸೇವೆಗೆ ಸೇರಿದ ನೌಕರರಿಗೆ ಕೂಡಲೇ ಹಳೆ ಪಿಂಚಣಿ ವ್ಯವಸ್ಥೆ ಮಾಡಲು ಸಚಿವ ಸಂಪುಟದಲ್ಲಿ ನಿರ್ದಾರ ತೆಗೆದುಕೊಳ್ಳುವಂತೆ ಮನವಿ ಮಾಡಿದರು.

ಆಗ ಸಚಿವ ಜಮೀರ್‌ ಅಹ್ಮದ್‌ ಖಾನ್‌ ಅವರು ಆರನೇ ಗ್ಯಾರಂಟಿಯಾಗಿ ಹಳೆ ಪಿಂಚಣಿ ವ್ಯವಸ್ಥೆ ಜಾರಿಗೆ ತರಲು ಸರ್ಕಾರ ಬದ್ಧವಾಗಿದೆ ಎಂದು ಉತ್ತರಿಸಿದರು.

ಈ ಸಂದರ್ಭದಲ್ಲಿ ಎನ್‌ಪಿಎಸ್‌ ನೌಕರರ ಸಂಘದ ತಾಲೂಕು ಅಧ್ಯಕ್ಷ ಪಿ. ಅಂಜಿನಪ್ಪ, ಪ್ರದಾನ ಕಾರ್ಯದರ್ಶಿ ಸೊಪ್ಪಿನ ಹನುಮಂತಪ್ಪ ಮಾತನಾಡಿದರು.

ಶಿಕ್ಷಕರ ಸಂಘದ ವಿಜಯನಗರ ಜಿಲ್ಲಾಧ್ಯಕ್ಷ ಬಸವರಾಜ ಸಂಗಪ್ಪನವರ್‌, ರಾಜ್ಯ ಘಟಕದ ಉಪಾದ್ಯಕ್ಷೆ ಜಿ. ಪದ್ಮಲತಾ, ನೌಕರರ ಸಂಘದ ಅಧ್ಯಕ್ಷ ಎಸ್‌. ರಾಮಪ್ಪ, ಶಿಕ್ಷಕರ ಸಂಘದ ತಾಲೂಕು ಅಧ್ಯಕ್ಷ ಬಿ. ರಾಜಶೇಖರ, ಕಾರ್ಯದರ್ಶಿ ನಟರಾಜ, ದೇವೇಂದ್ರಗೌಡ, ಬಿ. ಮಂಜುನಾಥ, ದಯಾನಂದ, ರಮೇಶ, ಪದ್ಮರಾಜ್‌ಜೈನ್, ಷರೀಪ ಸಾಹೇಬ್, ಉಸ್ಮಾನ್‌ , ಚಂದ್ರಮೌಳಿ, ಎ.ಎಂ. ಗುರುಪ್ರಸಾದ್‌, ನೌಕರರ ಸಂಘದ ಖಜಾಂಚಿ ಚಂದ್ರಪ್ಪ, ಅಶೋಕ, ಬುಳ್ಳನಗೌಡ, ಮುಸ್ತಪಾ, ಮಂಜುನಾಥ, ಬಂದಮ್ಮ, ರತ್ನಮ್ಮ, ಕೊಟ್ರಮ್ಮ, ಅರ್ಜುಮುನ್ನೀಸ ಇತರರು ಇದ್ದರು.

Share this article