ಕನ್ನಡಪ್ರಭ ವಾರ್ತೆ ಗುಂಡ್ಲುಪೇಟೆ
ಹೆದ್ದಾರಿಗಳಲ್ಲಿ ಪೆಟ್ರೋಲ್ ಬಂಕ್ ಆರಂಭಿಸುವ ಮುನ್ನ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಆದೇಶದಂತೆ ಬಂಕ್ ಮುಂದೆ ಸರ್ವೀಸ್‌ಗೆ ಡಿವೈಡರ್ ಮಾಡಲಾಗಿತ್ತು. ಬಂಕ್ ಮುಂದಿನ ಸರ್ವೀಸ್ ರಸ್ತೆಗೆ ಡಿವೈಡರ್ ಹಾಕಿರುವ ಕಾರಣ ಹೆದ್ದಾರಿಯಲ್ಲಿ ತೆರಳುವ ಬಹುತೇಕ ವಾಹನಗಳು ಸರ್ವೀಸ್ ರಸ್ತೆ ಇದ್ದರೆ ವಾಹನಗಳು ಬರುವುದಿಲ್ಲ ಎಂದು ಬಂಕ್ ಮಾಲೀಕರು ಸರ್ವೀಸ್ ರಸ್ತೆಗೆ ಹಾಕಲಾಗಿದ್ದ ಕೆಲ ದೂರ ಡಿವೈಡರ್ ತೆಗೆದು ಹಾಕಿದ್ದರು.
ಸರ್ವೀಸ್ ರಸ್ತೆಗೆ ಹಾಕಲಾದ ಡಿವೈಡರ್‌ಗೆ ರಿಪ್ಲೆಕ್ಟರ್ ಹಾಕಿಲ್ಲ. ಬಣ್ಣ ಬಳಿದು ಬಿಟ್ಟಿದ್ದಾರೆ. ಸರ್ವೀಸ್ ರಸ್ತೆ ಎರಡು ತುದಿಯಲ್ಲಿ ವಾಹನಗಳು ಬರಲು ಸಿಗ್ನಲ್ ಹಾಕಿದ್ದಾರೆ. ಸರ್ವೀಸ್ ರಸ್ತೆಯ ಡಿವೈಡರ್ ತೆಗೆದಿರುವ ಕಾರಣವೇ ಬಂಕ್‌ಗೆ ತೆರಳುವ ಭರದಲ್ಲಿ ವಾಹನಗಳು ಯಾವುದೇ ಮುನ್ಸೂಚನೆ ಇಲ್ಲದೆ ನುಗ್ಗುವ ಕಾರಣ ಅಪಘಾತಗಳು ನಡೆಯುತ್ತಿವೆ.ಬಂಕ್ ಆರಂಭದಲ್ಲಿ ಬಂಕ್ ಓಪನ್ ಗಾಗಿ ಸರ್ವೀಸ್ ರಸ್ತೆ ಮಾಡಿ ಡಿವೈಡರ್ ಹಾಕುತ್ತಾರೆ. ಓಪನ್ ಆದ ಕೆಲ ದಿನಗಳಲ್ಲಿ ಸರ್ವೀಸ್ ರಸ್ತೆಯ ಡಿವೈಡರ್ ಮದ್ಯದಲ್ಲಿ ತೆಗೆಯಲು ಅವಕಾಶವಿಲ್ಲದಿದ್ದರೂ ಬಂಕ್ ಮಾಲೀಕರು ಬಂಕ್‌ಗೆ ವಾಹನಗಳು ಬರಲು ಅವಕಾಶ ಮಾಡಿದ್ದಾರೆ. ಗುಂಡ್ಲುಪೇಟೆ ಬಳಿಯ ಅಮರ್ ಪೆಟ್ರೋಲ್ ಬಂಕ್ ಮುಂದಿನ ಡಿವೈಡರ್ ಓಪನ್ ಮಾಡಲಾಗಿದೆ ಜೊತೆಗೆ ಪಂಜನಹಳ್ಳಿಗೆ ತೆರಳುವ ಸಂಪರ್ಕ ರಸ್ತೆಯು ಇರುವ ಕಾರಣ ಪಂಜನಹಳ್ಳಿಗೆ ತೆರಳುವ ಜನರಿಗೆ ಡಿವೈಡರ್ ಓಪನ್ ನಿಂದ ದಿಢೀರ್ ಹೋಗುವ ಕಾರಣ ಗುಂಡ್ಲುಪೇಟೆ ಹಾಗೂ ನಂಜನಗೂಡು ಕಡೆಯಿಂದ ಬರುವ ವಾಹನಗಳ ನಡುವೆ ರಸ್ತೆ ದಾಟುವಾಗ ಅಪಘಾತಕ್ಕೆಡೆ ಮಾಡಿ ಕೊಟ್ಟಿದೆ.
ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಪ್ರಕಾರ ಸರ್ವೀಸ್ ರಸ್ತೆಗೆ ಹಾಕಲಾದ ಡಿವೈಡರ್ ತೆಗೆದು ಹಾಕಲು ಅವಕಾಶವಿಲ್ಲ. ವ್ಯಾಪಾರಕ್ಕಾಗಿ ಓಪನ್ ಮಾಡಿಕೊಳ್ಳುತ್ತಿದ್ದಾರೆ ಇದನ್ನು ಕೇಳಬೇಕಾದ ಗುಂಡ್ಲುಪೇಟೆ ಹಾಗೂ ಬೇಗೂರು ಪೊಲೀಸರು ಕೇಳುತ್ತಿಲ್ಲ!ಅಪಘಾತ ತಡೆಯುವ ಉದ್ದೇಶದಿಂದಲೇ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಬಂಕ್ ಮುಂದೆ ಸರ್ವೀಸ್ ರಸ್ತೆ ನಿರ್ಮಿಸಬೇಕು ಹಾಗೂ ಸರ್ವೀಸ್ ರಸ್ತೆಯ ತನಕ ಡಿವೈಡರ್, ಡಿಪ್ಲೆಕ್ಟರ್, ಸೂಚನಾ ಫಲಕ ಹಾಕಬೇಕು ಎಂದು ಕಂಡೀಷನ್ ಹಾಕಿದ್ದಾರೆ.
ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ನಿಯಮ ಪಾಲನೆಯಾಗುವ ತನಕ ಬಂಕ್ ಓಪನ್ ಗೆ ಎನ್‌ಒಸಿ ಕೊಟ್ಟಿರುವುದಿಲ್ಲ. ಆದರೂ ಬಂಕ್ ಓಪನ್ ಆದ ಬಳಿಕ ಸರ್ವೀಸ್ ರಸ್ತೆಯ ಡಿವೈಡರ್ ತೆಗೆದಿದ್ದಾರೆ. ಈ ಬಗ್ಗೆ ಜಿಲ್ಲಾಡಳಿತ ನಿಗಾ ವಹಿಸಬೇಕಿದೆ.ಸುಗಮ ಸಂಚಾರಕ್ಕೆ ಪೊಲೀಸರು ಕ್ರಮ ಕೈಗೊಳ್ಳಲಿ!
ಗುಂಡ್ಲುಪೇಟೆ: ಪೆಟ್ರೋಲ್ ಬಂಕ್ ಗಳು ಮುಂದೆ ಅಪಘಾತ ತಡೆಯಲು ಇರುವ ಸರ್ವೀಸ್ ರಸ್ತೆಯ ಡಿವೈಡರ್ ತೆಗೆದು ಅಪಘಾತಕ್ಕೆ ಕಾರಣರಾಗುತ್ತಿರುವ ಪೆಟ್ರೋಲ್ ಬಂಕ್‌ಗಳ ಮೇಲೆ ಸ್ಥಳೀಯ ಪೊಲೀಸರು ಕ್ರಮ ತೆಗೆದುಕೊಳ್ಳುತ್ತಿಲ್ಲವೇಕೆ ಎಂಬ ಪ್ರಶ್ನೆ ಎದುರಾಗಿದೆ.ಹೆದ್ದಾರಿ ಬದಿಯ ಬಂಕ್‌ಗಳ ಮುಂದಿರುವ ಸರ್ವೀಸ್ ರಸ್ತೆಯ ಡಿವೈಡರ್ ತೆಗೆದ ಕಾರಣಕ್ಕೆ ಅಪಘಾತಗಳಾಗುತ್ತಿರುವುದು ಪೊಲೀಸರ ಗಮನಕ್ಕೂ ಬಂದಿದೆ.ಪೊಲೀಸರು ಎಚ್ಚರಿಕೆ ನೀಡಿದರೆ ಖಂಡಿತ ಡಿವೈಡರ್ ತೆಗೆಯುವುದಿಲ್ಲವೇನೋ?
ಹೊಸದಾಗಿ ಆರಂಭವಾದ ಪೆಟ್ರೋಲ್ ಬಂಕ್ ಗಳ ಮುಂದೆ ಸರ್ವೀಸ್ ರಸ್ತೆಗೆ ಹಾಕಲಾದ ಡಿವೈಡರ್ ಓಪನ್ ಮಾಡಲು ಬಂಕ್ ಮಾಲೀಕರು ಶುರು ಮಾಡಿದ್ದಾರೆ. ಡಿವೈಡರ್ ಮಧ್ಯೆ ವಾಹನಗಳ ಹೋಗಲು ಓಪನ್ ಆದರೆ ಅಪಘಾತಗಳು ಮತ್ತಷ್ಟ ಹೆಚ್ಚಾಗಲಿವೆ. ಪೊಲೀಸರು ಸವಾರರ ಹಿತದೃಷ್ಟಿಯಿಂದ ಓಪನ್ ಆದ ಡಿವೈಡರ್ ಮುಚ್ಚಿಸಲಿ.-ಮಹದೇವು ಗುಂಡ್ಲುಪೇಟೆ