ಕನ್ನಡಪ್ರಭ ವಾರ್ತೆ ವಿಜಯಪುರ
ನಗರದ ಬಿ.ಎಲ್.ಡಿ.ಇ ಸಂಸ್ಥೆಯ ಎಸ್.ಎಸ್.ಎಂ ಔಷಧ ವಿಜ್ಞಾನ ಮಹಾವಿದ್ಯಾಲಯ ಮತ್ತು ಸಂಶೋಧನ ಕೇಂದ್ರದಲ್ಲಿ ನಡೆದ ಪದವಿ ಪ್ರದಾನ ಕಾರ್ಯಕ್ರಮದಲ್ಲಿ ಮಾತನಾಡಿದರು. ಆರೋಗ್ಯ ರಕ್ಷಣೆಯಲ್ಲಿ ವೈದ್ಯರ ಜೊತೆ ಫಾರ್ಮಸಿಸ್ಟ್‌ರು ಸಮಾನ ಸೇವೆ ಸಲ್ಲಿಸುತ್ತಾರೆ. ಆದ್ದರಿಂದ ಫಾರ್ಮಸಿ ವಿದ್ಯಾರ್ಥಿಗಳು ಕೂಡ ಹೊಸ ಸಂಶೋಧನೆಗಳು ಮತ್ತು ತಂತ್ರಜ್ಞಾನವನ್ನು ಬಳಸಿಕೊಂಡು ಜನರ ಆರೋಗ್ಯದ ಗುಣಮಟ್ಟವನ್ನು ಸುಧಾರಿಸಲು ಶ್ರಮಿಸಬೇಕು ಎಂದು ಹೇಳಿದರು.
ರಾಜೀವಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯದ ಫಾರ್ಮಸಿ ವಿಭಾಗದ ಅಧ್ಯಯನ ಮಂಡಳಿ ಅಧ್ಯಕ್ಷ ಡಾ.ಸಲೀಮುಲ್ಲಾ ಖಾನ್ ಮಾತನಾಡಿ, ಕೋರೋನಾ ಸಂದರ್ಭದಲ್ಲಿ ಫಾರ್ಮಸಿಸ್ಟ್‌ಗಳು ಪ್ರಾಣರಕ್ಷಕ ಔಷಧಿಗಳನ್ನು ತಯಾರಿಸಿ, ರೋಗಿಗಳಿಗೆ ವಿತರಿಸುವ ಮೂಲಕ ಉತ್ತಮ ಕೆಲಸ ಮಾಡಿದ್ದಾರೆ. ಇತ್ತೀಚಿನ ದಿನಗಳಲ್ಲಿ ಫಾರ್ಮಸಿ ವೃತ್ತಿ ಮಹತ್ತರ ಬದಲಾವಣೆಗಳನ್ನು ಕಂಡಿದ್ದು, ಆಸ್ಪತ್ರೆಗಳು ಮತ್ತು ಔಷಧಿ ಉದ್ಯಮವಷ್ಟೇ ಅಲ್ಲ, ಸಾಫ್ಟ್‌ವೇರ್ ಕ್ಷೇತ್ರಗಳಲ್ಲಿಯೂ ಉದ್ಯೋಗಾವಕಾಶಗಳನ್ನು ಹೆಚ್ಚಿಸಿದೆ ಎಂದು ತಿಳಿಸಿದರು.ಈ ಸಂದರ್ಭದಲ್ಲಿ ಬಿ.ಫಾರ್ಮ, ಎಂ.ಫಾರ್ಮ ಹಾಗೂ ಫಾರ್ಮ್ ಡಿ ಪದವೀಧರರಿಗೆ ಪದವಿ ಪ್ರಮಾಣ ಪತ್ರಗಳನ್ನುವಿತರಿಸಲಾಯಿತು.
ಈ ಕಾರ್ಯಕ್ರಮದಲ್ಲಿ ಕಾಲೇಜಿನ ನಿರ್ದೇಶಕ ಡಾ.ಆರ್.ಬಿ.ಕೋಟ್ನಾಳ, ಪ್ರಾಚಾರ್ಯ ಡಾ.ಸಿ.ಮಲ್ಲಿಕಾರ್ಜುನ ಶೆಟ್ಟಿ, ಶೈಕ್ಷಣಿಕ ನಿರ್ವಾಹಕ ಡಾ.ಎಸ್.ಆರ್. ಕರಜಗಿ, ಐ.ಕ್ಯೂ.ಎ.ಸಿ ಸಂಯೋಜಕ ಡಾ.ಬಸವರಾಜ ಹುಣಸಗಿ ಮತ್ತು ಸಾಂಸ್ಕೃತಿಕ ಸಮಿತಿ ಸಂಯೋಜಕ ಸಂಗಪ್ಪ ತೇಲಿ, ಡಾ.ಶ್ರೀಪಾದ ಪೋತದಾರ ಸೇರಿದಂತೆ ಮುಂತಾದವರು ಇದ್ದರು.