ಬೇಂದ್ರೆ ಸಾಹಿತ್ಯದಲ್ಲಿದೆ ದಾರ್ಶನಿಕತೆ

KannadaprabhaNewsNetwork |  
Published : Feb 01, 2026, 03:00 AM IST
31ಕೆಕೆಆರ್1:ಕುಕನೂರು ಪಟ್ಟಣದ ಟ್ರೀನಿಟಿ ಅಗ್ಲಮಾಧ್ಯಮ ಶಾಲೆಯಲ್ಲಿ ಶನಿವಾರ ಕನ್ನಡ ಸಾಹಿತ್ಯ ,ಸಂಸ್ಕೃತಿ, ಅಭಿವೃದ್ದಿ ಟ್ರಸ್ಟ ವತಿಯಿಂದ ವರಕವಿ ದ.ರಾ.ಬೇಂದ್ರೆಯವರ 131ನೇ ಜನ್ಮ ದಿನಾಚರಣೆ ಜರುಗಿತು. | Kannada Prabha

ಸಾರಾಂಶ

ವಿದ್ಯಾರ್ಥಿಗಳು ಇಂತಹ ದಾರ್ಶನಿಕ ಕೃತಿ ಓದುವ ಮೂಲಕ ಬದುಕಿನಲ್ಲಿ ಉತ್ತಮ ಮೌಲ್ಯ ಕಲಿಯಬಹುದಾಗಿದೆ

ಕುಕನೂರು: ಜ್ಞಾನಪೀಠ ಪುರಸ್ಕೃತ ದ.ರಾ. ಬೇಂದ್ರೆ ಕಾವ್ಯವೇ ಜೀವನವಾಗಿತ್ತು. ಬೇಂದ್ರೆ ತಮ್ಮ ಜೀವನದಲ್ಲಿ ದುಃಖ,ನೋವು ಅನುಭವಿಸುತ್ತಲೇ ಸಹೃಯದರಿಗೆ ಸಾಹಿತ್ಯದ ಸವಿಯುಣಿಸುತ್ತಿದ್ದರು ಎಂದು ಕನ್ನಡ ಸಾಹಿತ್ಯ ಸಂಸ್ಕೃತಿ ಅಭಿವೃ್ದ್ಧಿ ಟ್ರಸ್ಟ್ ಅಧ್ಯಕ್ಷ ರುದ್ರಪ್ಪ ಭಂಡಾರಿ ಹೇಳಿದರು.

ಪಟ್ಟಣದ ಟ್ರೀನಿಟಿ ಅಗ್ಲಮಾಧ್ಯಮ ಶಾಲೆಯಲ್ಲಿ ಶನಿವಾರ ಕನ್ನಡ ಸಾಹಿತ್ಯ, ಸಂಸ್ಕೃತಿ, ಅಭಿವೃದ್ಧಿ ಟ್ರಸ್ಟ ಆಯೋಜಿಸಿದ್ದ ವರಕವಿ ದ.ರಾ.ಬೇಂದ್ರೆಯವರ 131ನೇ ಜನ್ಮ ದಿನಾಚರಣೆ ಕಾರ್ಯಕ್ರಮದಲ್ಲಿ ಅವರ ಭಾವಚಿತ್ರಕ್ಕೆ ಮಾಲಾರ್ಪಣೆ ನೆರವೇರಿಸಿ ಮಾತನಾಡಿದ ಅವರು, ಎನ್ನ ಪಾಡೆನಗಿರಲಿ, ಅದರ ಹಾಡನ್ನಷ್ಟೇ ನೀಡುವೆನು ರಸಿಕ, ಕಲ್ಲು ಸಕ್ಕರೆಯಂತಹ ನಿನ್ನೆದೆಯು ಕರಗಿದರೆ ಅದರ ಸವಿಯುಣಿಸು ನನಗೆ ಎಂಬುದನ್ನು ವರಕವಿ ತಮ್ಮ ಕವನದಲ್ಲೆ ದೇಸಿ ಸೊಗಡಿನಲ್ಲಿ ಕಾವ್ಯ ಮಾಡಿರುವ ಬೇಂದ್ರೆಯವರು ಸಾಹಿತ್ಯದಲ್ಲಿ ದಾರ್ಶನಿಕತೆ ಇದೆ. ದಾರ್ಶನಿಕ ಕೃತಿಗಳು ಮೌಲ್ಯ ಶಿಕ್ಷಣ ನೀಡುತ್ತವೆ. ವಿದ್ಯಾರ್ಥಿಗಳು ಇಂತಹ ದಾರ್ಶನಿಕ ಕೃತಿ ಓದುವ ಮೂಲಕ ಬದುಕಿನಲ್ಲಿ ಉತ್ತಮ ಮೌಲ್ಯ ಕಲಿಯಬಹುದಾಗಿದೆ ಎಂದು ತಿಳಿಸಿದರು.

ಅಧ್ಯಕ್ಷತೆ ವಹಿಸಿದ್ದ ಶಾಲಾ ಮುಖ್ಯೋಪಾಧ್ಯಾಯ ಗಣೇಶ ಕಮ್ಮಾರ ಮಾತನಾಡಿ, ವಿದ್ಯಾರ್ಥಿಗಳು ಬೇಂದ್ರೆಯವರು ಧಾರವಾಡದಲ್ಲಿ ವಾಸಿಸಿದ ಮನೆಗೆ ಭೇಟಿ ನೀಡಿದರೆ ಸಾಕು ಸಾಹಿತ್ಯದ ದಶ೯ನ ಪಡೆದಂತೆ ಅನುಭವ ಆಗುತ್ತದೆ, ವಿದ್ಯಾರ್ಥಿಗಳು ಶಾಲಾ ಅವಧಿಯಲ್ಲಿಯೇ ಸಾಹಿತ್ಯ ದಿಗ್ಗಜರ ಸಾಹಿತ್ಯ ಗ್ರಹಿಸಬೇಕು. ಕೃತಿಯ ವರ್ಣನೆಗಳಿಂದ ಹಿಡಿದು ಸಾಮಾಜಿಕ ಪ್ರಜ್ಞೆಯ ಕವಿತೆಗಳು ಓದುಗರ ಮನಗೆದ್ದಿವೆ. ಶಬ್ದಗಾರುಡಿಗಾರ ಬೇಂದ್ರೆ ತಮ್ಮ ಕವಿತೆಗಳ ಮೂಲಕ ಹೊಸಗನ್ನಡ ಕಾವ್ಯಕ್ಕೆ ಹೊಸತನ ನೀಡಿದೆ ಎಂದರು.

ಶಿಕ್ಷಕರಾದ ನೇತ್ರಾವತಿ, ಮಲ್ಲಿಕಾಜು೯ನ, ಹೇಮಾ, ಇಟಗಿ ಆದರ್ಶ ಶಾಲೆ ಸಂಗೀತ ಶಿಕ್ಷಕ ಮುರಾರಿ ಭಜಂತ್ರಿ, ಆರೋಗ್ಯ ಕೇಂದ್ರದ ಆಪ್ತ ಸಮಾಲೋಚಕ ಕನಕರಾಯ ಇತರರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

400 ಕೋಟಿ ರು. ದರೋಡೆ ಪ್ರಮುಖ ಆರೋಪಿ ಬಂಧನ
ಕಾಂಗ್ರೆಸ್‌ನವರಿಗೆ ಬಜೆಟ್ ಅರ್ಥವಾಗಲ್ಲ: ಜೋಶಿ ಚಾಟಿ