ಕನ್ನಡಪ್ರಭ ವಾರ್ತೆ ರಾಮನಾಥಪುರ
ಕೊಣನೂರು ಬ್ರಹ್ಮಕುಮಾರಿ ಈಶ್ವರೀಯ ವಿಶ್ವ ವಿದ್ಯಾಲಯದ ಜ್ಞಾನಜ್ಯೋತಿ ಭವನದ ಸಭಾಂಗಣದಲ್ಲಿ ಸಭಾಂಗಣದಲ್ಲಿ 89ನೇ ಮಹಾಶಿವರಾತ್ರಿ ಮಹೋತ್ಸವ ಕಾರ್ಯಕ್ರಮ ಉದ್ಘಾಟನೆ ನೇರವೇರಿಸಿದ ನಂತರ ಮಾತನಾಡಿದ ಅವರು, ಧ್ಯಾನದ ಸಮಯದಲ್ಲಿ ಓಂ ನಮಃ ಶಿವಾಯ ಮಂತ್ರ ಸಾಮರಸ್ಯ ಏಕಾಗ್ರತೆ ಹಾಗೂ ಶಕ್ತಿ ನೀಡುತ್ತದೆ ಎಂದು ಕುಮಾರಸ್ವಾಮಿ ತಿಳಿಸಿದರು.
ಈ ಸಂದರ್ಭದಲ್ಲಿ ಬ್ರಹ್ಮ ಕುಮಾರಿ ಸೇವಾ ಕೇಂದ್ರದ ಸಂಚಾಲಕರು ಬಿ.ಕೆ. ನಾಗರತ್ನ ಅವರು ಕಾರ್ಯಕ್ರಮ ಅಧ್ಯಕ್ಷತೆ ವಹಿಸಿ ಮಾತನಾಡಿ, ಶಿವರಾತ್ರಿಯ ಮಹತ್ವವನ್ನು ವಿವರಿಸಿ ಶಿವನ ಅವತರಣೆಯ ಸಂದೇಶವನ್ನು ತಿಳಿಸಿದರು. ಕೊಣನೂರು ಗ್ರಾಮ ಪಂಚಾಯತಿ ಅಧ್ಯಕ್ಷರು ಮಿಸ್ಮಾ ಧ್ವಜಾರೋಹಣ ನೆರವೇರಿಸಿ, ಶುಭಹಾರೈಸಿದರು. ದೀಪ ಬೆಳಗಿಸಿ ಮಾತನಾಡಿದ ಕೊಣನೂರು ಪಂಚಾಯಿತಿ ಉಪಾಧ್ಯಕ್ಷರಾದ ಜಯಮ್ಮ ಸೋಮಶೇಖರ್ ಎಲ್ಲರೂ ಶಿವನಿಂದ ಆಶೀರ್ವಾದ ಪಡೆದುಕೊಳ್ಳಿ ಎಂದು ಕರೆ ನೀಡಿದರು.ಪ್ರಜಾಪಿತ ಬ್ರಹ್ಮಾ ಕುಮಾರಿ ಸೇವಾ ಕೇಂದ್ರದ ನಾಗರಾಜ ಕೋಟೆಕಾರ್, ಶರಣ ಸಾಹಿತ್ಯ ಪರಿಷತ್ತಿನ ತಾಲೂಕು ಅಧ್ಯಕ್ಷ ಅಮೃತೇಶ್, ಕಾವೇರಿ ನದಿ ಸ್ವಚ್ಛತಾ ಆಂದೋಲನ ಸಮಿತಿ ತಾಲೂಕು ಅಧ್ಯಕ್ಷ ರಾಮನಾಥಪುರ, ಸಿದ್ದಯ್ಯ, ಸೋಮಶೇಖರ್, ಸೂರ್ಯನಾರಾಯಣ, ಹೆಗ್ಗಡಹಳ್ಳಿ ರಾಚಪ್ಪ, ಚಂದ್ರಣ್ಣ, ಭಾಗ್ಯ, ರವಿ, ಮಂಜಣ್ಣ, ಪ್ರಸಾದ್ ಗೀತಮ್ಮ, ಧನಲಕ್ಷ್ಮಿ, ಗಾಯತ್ರಿ ನಾಗರತ್ನ ಮುಂತಾದವರು ಭಾಗವಹಿಸಿದ್ದರು.