ಕನ್ನಡಪ್ರಭ ವಾರ್ತೆ ದಾವಣಗೆರೆ ಮಹಾರಾಷ್ಟ್ರದ ನಾಂದಣಿಯಿಂದ ಹಾಸನ ಸಮೀಪ ಇರುವ ಜೈನರ ಗುತ್ತಿ ಮಹಾ ಪಂಚಕಲ್ಯಾಣ ಮಹೋತ್ಸವದ ಪಾವನ ಸಾನಿಧ್ಯ ವಹಿಸಲು ಮುನಿಶ್ರೀ ವಿಶುದ್ಧ ಸಾಗರ ಮಹಾರಾಜರ ನೇತೃತ್ವದ ಜೈನ ಮುನಿಗಳ ತಂಡವು ಭಾನುವಾರ ಪಾದಯಾತ್ರೆ ಮೂಲಕ ದಾವಣಗೆರೆ ನಗರ ತಲುಪಿತು.
ಎನ್.ಆರ್. ರಸ್ತೆಯ ಪಾರ್ಶ್ವನಾಥ ಮಂದಿರದ ಸಭಾಂಗಣದಲ್ಲಿ ಮುನಿಶ್ರೀ ವಿಶುದ್ಧ ಸಾಗರ ಮಹಾರಾಜರು ಭಕ್ತರನ್ನು ಉದ್ದೇಶಿಸಿ ಪ್ರವಚನ ನೀಡಿದರು. ಭಕ್ತರು ಮುನಿಶ್ರೀಗಳನ್ನು ಗೌರವದಿಂದ ಸ್ವಾಗತಿಸಿದರು. ದಾವಣಗೆರೆಯಿಂದ ಪಾದಯಾತ್ರೆ ಮೂಲಕ ಮುಂದಿನ ಪ್ರಯಾಣ ಬೆಳೆಸಿದರು.ಶ್ರೀಗಳ ಜೊತೆಯಲ್ಲಿ ಮುನಿಶ್ರೀಗಳಾದ ಶ್ರೀ ಸುವ್ರತ್ ಸಾಗರ್ ಜೀ, ಶ್ರೀ ಸಾಮ್ಯಸಾಗರ್ ಜೀ, ಶ್ರೀ ಸಂಜಯಂತ್ ಸಾಗರ್ ಜೀ, ಶ್ರೀ ಯಶೋಧರ ಸಾಗರ್ ಜೀ, ಶ್ರೀ ಯತ್ನ ಸಾಗರ್ ಜೀ, ಶ್ರೀ ನಿರ್ಗ್ರಂಥ ಸಾಗರ್ ಜೀ, ಶ್ರೀ ನಿರ್ಮೋಹ ಸಾಗರ್ ಜೀ, ಶ್ರೀ ನಿಸಂಗ್ ಸಾಗರ್ ಜೀ, ಶ್ರೀ ನಿರ್ವಿಕಲ್ಪ ಸಾಗರ್ ಜೀ, ಶ್ರೀ ಜಿತೇಂದ್ರ ಸಾಗರ್ ಜೀ, ಶ್ರೀ ಸುಭಗ್ ಸಾಗರ್ ಜಿ, ಶ್ರೀ ಸಿದ್ಧ ಸಾಗರ್ ಜೀ, ಶ್ರೀ ಸಿದ್ಧಾರ್ಥ್ ಸಾಗರ್ ಜೀ, ಶ್ರೀ ಸಹರ್ಷ್ ಸಾಗರ್ ಜೀ, ಶ್ರೀ ಸತ್ಯಾರ್ಥ್ ಸಾಗರ್ ಜೀ, ಶ್ರೀ ಸಾರ್ಥಕ್ ಸಾಗರ್ ಜೀ, ಶ್ರೀ ಸಾರ್ಥ್ ಸಾಗರ್ ಜೀ, ಶ್ರೀ ಸಂಕಿತ್ ಸಾಗರ್ ಜೀ, ಶ್ರೀ ಸಮ್ಯಕ್ ಸಾಗರ್ ಜೀ ಮಹಾರಾಜರು ಪಾಲ್ಗೊಂಡಿದ್ದರು.
- - - -17ಕೆಡಿವಿಜಿ40: ದಾವಣಗೆರೆಯಲ್ಲಿ ಮುನಿಶ್ರೀ ವಿಶುದ್ಧ ಸಾಗರ ಮಹಾರಾಜರ ನೇತೃತ್ವದ ಜೈನ ಮುನಿಗಳ ತಂಡವನ್ನು ಸದ್ಭಕ್ತರು ಸ್ವಾಗತಿಸಿದರು. -17ಕೆಡಿವಿಜಿ41: ದಾವಣಗೆರೆಯಲ್ಲಿ ಶ್ರೀ ವಿಶುದ್ಧ ಸಾಗರ ಮಹಾರಾಜರು ಪ್ರವಚನ ನೀಡಿದರು.