-ಆಟೋರಿಕ್ಷಾ ಮೇಲೆ ವಿದ್ಯುತ್ ಕಂಬ ಬಿದ್ದು ಲಕ್ಷಾಂತರ ರು. ಮೌಲ್ಯದ ಆಟೋರಿಕ್ಷಾ ಜಖಂ
ಕನ್ನಡಪ್ರಭ ವಾರ್ತೆ ಚಳ್ಳಕೆರೆ
ಗಾಂಧಿನಗರದ ತಿಮ್ಮಪ್ಪಸ್ವಾಮಿ ದೇವಸ್ಥಾನದ ಮುಂಭಾಗದ ರಸ್ತೆಯಲ್ಲಿದ್ದ ಮರವೊಂದು ಮಧ್ಯಾಹ್ನ ಬೀಸಿದ ಗಾಳಿಗೆ ಮುರಿದು ಬಿದ್ದ ಪರಿಣಾಮವಾಗಿ ಮರದ ಕೊಂಬೆಗಳು ವಿದ್ಯುತ್ ವೈರ್ ಮೇಲೆ ರಭಸವಾಗಿ ಬಿದ್ದ ಪರಿಣಾಮ ಎರಡು ವಿದ್ಯುತ್ ಕಂಬ ತುಂಡಾಗಿ ಬಿದ್ದು, ಎಲ್ಲೂ ಸಹ ವಿದ್ಯುತ್ ವೈರ್ ತುಂಡಾಗದ ಕಾರಣ ಯಾವುದೇ ಪ್ರಾಣಾಪಾಯವಾಗಿಲ್ಲ.ಮನೆಯ ಮುಂದೆ ನಿಲ್ಲಿಸಿದ್ದ ವೆಂಕಟೇಶ್ ಎಂಬುವವರಿಗೆ ಸೇರಿದ ಹೊಸ ಆಟೋರಿಕ್ಷಾದ ಮೇಲೆ ವಿದ್ಯುತ್ ಕಂಬ ಬಿದ್ದ ಪರಿಣಾಮ ಲಕ್ಷಾಂತರ ರುಪಾಯಿ ಮೌಲ್ಯದ ಆಟೋರಿಕ್ಷಾ ಜಖಂಗೊಂಡಿದೆ. ಸುದ್ದಿ ತಿಳಿದ ಕೂಡಲೇ ಬೆಸ್ಕಾಂ ಇಲಾಖೆ ಅಧಿಕಾರಿಗಳು ಹಾಗೂ ಸಿಬ್ಬಂದಿ ವರ್ಗ ತುರ್ತಾಗಿ ಆಗಮಿಸಿ ತುಂಡಾಗಿ ಬಿದ್ದ ವಿದ್ಯುತ್ ಕಂಬಗಳನ್ನು ತೆರುವ ಗೊಳಿಸಿ ಎರಡು ನೂತನ ಕಂಬಗಳನ್ನು ಹಾಕಿದ್ದಾರೆ.
ದಿಢೀರನೆ ಮರ ಹಾಗೂ ಕಂಬ ಬಿದ್ದ ಹಿನ್ನೆಲೆ ಸ್ಥಳೀಯ ನಿವಾಸಿ ಗಾಬರಿಗೊಂಡು ಮನೆಯಿಂದ ಹೊರಗೆ ಆಗಮಿಸಿದ್ಧಾರೆ. ಕೂಡಲೇ ಬೆಸ್ಕಾಂ ಇಲಾಖೆ ವಿದ್ಯುತ್ ಸರಬರಾಜನ್ನು ಸ್ಥಗಿತಗೊಳಿಸಿ ತ್ವರಿತಗತಿಯಲ್ಲಿ ಕಂಬಗಳನ್ನು ಬದಲಾಯಿಸಿದ್ದಾರೆ.-----
ಪೋಟೋ: ೨೨ಸಿಎಲ್ಕೆ೩ಎಚಳ್ಳಕೆರೆ ಗಾಂಧಿನಗರದ ತಿಮ್ಮಪ್ಪಸ್ವಾಮಿ ದೇವಸ್ಥಾನದ ಬಳಿ ವಿದ್ಯುತ್ ವೈರ್ ಮೇಲೆ ಬಿದ್ದ ಮರ.
----ಪೋಟೋ: ೨೨ಸಿಎಲ್‌ಕೆ೩ಬಿ/೦೩ಬಿ
ಚಳ್ಳಕೆರೆ ನಗರದ ಗಾಂಧಿನಗರದ ತಿಮ್ಮಪ್ಪಸ್ವಾಮಿ ದೇವಸ್ಥಾನದ ಬಳಿ ಆಟೋರಿಕ್ಷಾದ ಮೇಲೆ ಬಿದ್ದ ವಿದ್ಯುತ್ ಕಂಬ.