ದಾವಣಗೆರೆ: ಎಲೆಬೇತೂರು ಗ್ರಾಮದಲ್ಲಿ ಸಾರ್ವತ್ರಿಕ ಲೋಕಸಭಾ ಚುನಾವಣೆ-2024 ಅಂಗವಾಗಿ ಮತದಾನ ಜಾಗೃತಿಗೆ ಮಹಿಳಾ ಮತದಾರರನ್ನು ಆಕರ್ಷಿಸಲು ಮತ್ತು ಮತದಾನದ ಶೇಕಡಾವಾರು ಪ್ರಮಾಣ ಹೆಚ್ಚಾಗಲು ಪಿಂಕ್ ಸಖಿ ಬೂತ್ ವ್ಯವಸ್ಥೆಯನ್ನು ಎಲೆಬೇತೂರು ಗ್ರಾಮದಲ್ಲಿ ಮಾಡಲಾಗಿದೆ.
ನಮ್ಮ ಮತ-ನಮ್ಮ ಹಕ್ಕು, ನನ್ನ ಮತ-ನನ್ನ ಧ್ವನಿ, ನಮ್ಮ ನಡೆ ಮತಗಟ್ಟೆ ಕಡೆ ಎಂಬ ಘೋಷಣೆಗಳೊಂದಿಗಿರುವ ಮತದಾರರನ್ನು ಆಕರ್ಷಿಸುವಂತೆ ಮಾಡಿದೆ. ಸಂಜೆ ಗ್ರಾಮಕ್ಕೆ ಭೇಟಿ ನೀಡಿದ ಜಿಲ್ಲಾಧಿಕಾರಿ, ಅರಮನೆ ರೀತಿಯಲ್ಲಿ ಸಜ್ಜುಗೊಂಡಿರುವ ಮತಗಟ್ಟೆ ವೀಕ್ಷಿಸಿದರು. ಈ ಸಂದರ್ಭದಲ್ಲಿ ಜಿಲ್ಲಾ ಕಾರ್ಯನಿರ್ವಾಹಕ ಅಧಿಕಾರಿಗಳು, ತಾಲೂಕು ಕಾರ್ಯನಿರ್ವಾಹಕ ಅಧಿಕಾರಿಗಳು ಹಾಗೂ ಇತರೆ ಅಧಿಕಾರಿಗಳು ಹಾಜರಿದ್ದರು.