ಜೆನ್ ಜೀ ಪೀಳಿಗೆಯನ್ನು ಕೂಡ ಗಮನದಲ್ಲಿರಿಸಿಕೊಂಡು ರೋಟರಿಯಂಥ ಸೇವಾ ಸಂಸ್ಥೆಗಳು ಯೋಜನೆ ರೂಪಿಸಬೇಕು. ನವ ಪೀಳಿಗೆಗೆ ಸಾಮಾಜಿಕ ಸೇವೆಯ ಮಹತ್ವವನ್ನು ತಿಳಿಸಿಕೊಡುವ ನಿಟ್ಟಿನಲ್ಲಿ ರೋಟರಿ ಸಂಸ್ಥೆಗಳು ಮುಂದಾಗಬೇಕೆಂದು ರೋಟರಿ ಜಿಲ್ಲೆ 3181 ನ ಪಬ್ಲಿಕ್ ಇಮೇಜ್ ಸಮಿತಿ ಉಪಾಧ್ಯಕ್ಷ ಅನಿಲ್ ಎಚ್.ಟಿ. ಹೇಳಿದ್ದಾರೆ.
ಕನ್ನಡಪ್ರಭ ವಾರ್ತೆ ಮಡಿಕೇರಿ
ಜೆನ್ ಜೀ ಪೀಳಿಗೆಯನ್ನು ಕೂಡ ಗಮನದಲ್ಲಿರಿಸಿಕೊಂಡು ರೋಟರಿಯಂಥ ಸೇವಾ ಸಂಸ್ಥೆಗಳು ಯೋಜನೆ ರೂಪಿಸಬೇಕು. ನವ ಪೀಳಿಗೆಗೆ ಸಾಮಾಜಿಕ ಸೇವೆಯ ಮಹತ್ವವನ್ನು ತಿಳಿಸಿಕೊಡುವ ನಿಟ್ಟಿನಲ್ಲಿ ರೋಟರಿ ಸಂಸ್ಥೆಗಳು ಮುಂದಾಗಬೇಕೆಂದು ರೋಟರಿ ಜಿಲ್ಲೆ 3181 ನ ಪಬ್ಲಿಕ್ ಇಮೇಜ್ ಸಮಿತಿ ಉಪಾಧ್ಯಕ್ಷ ಅನಿಲ್ ಎಚ್.ಟಿ. ಹೇಳಿದ್ದಾರೆ.ನಗರದ ರೋಟರಿ ಸಭಾಂಗಣದಲ್ಲಿ ರೋಟರಿ ವುಡ್ಸ್ ಸಂಸ್ಥೆ ವತಿಯಿಂದ ಆಯೋಜಿತ ಕಾರ್‍ಯಕ್ರಮದಲ್ಲಿ ರೋಟರಿ ವಿಷನ್ ಬಗ್ಗೆ ಅವರು ಮಾತನಾಡಿದರು. ಪ್ರಸ್ತುತ ವಿಶ್ವದಾದ್ಯಂತ 11.25 ಲಕ್ಷ ರೋಟರಿ ಸದಸ್ಯರಿದ್ದು, 2030ರಲ್ಲಿ ಅಂತಾರಾಷ್ಟ್ರೀಯ ರೋಟರಿ ತನ್ನ 125ನೇ ವರ್ಷ ಆಚರಿಸಿಕೊಳ್ಳುವ ಸಂದರ್ಭ 12.50 ಲಕ್ಷ ಸದಸ್ಯರ ಗುರಿಯನ್ನು ರೋಟರಿ ಹೊಂದಿದೆ ಎಂದರು.
ರೋಟರಿ ಸೇವಾ ಯೋಜನೆಗಳಲ್ಲಿಯೂ ಮಾರ್ಪಾಡು ಅತ್ಯಗತ್ಯವಾಗಿದ್ದು, ಪ್ರತಿ ವರ್ಷವೂ ಒಂದೇ ಯೋಜನೆಗೆ ಜೋತು ಬೀಳದೆ ಜೆನ್ ಜೀ ಪೀಳಿಗೆಯನ್ನೂ ಗಮನದಲ್ಲಿರಿಸಿಕೊಂಡು, ಸಮಾಜದ ಅತ್ಯಗತ್ಯವನ್ನೂ ತಿಳಿದುಕೊಂಡು ವಿನೂತನ ಯೋಜನೆಗಳನ್ನು ರೂಪಿಸುವತ್ತ ರೋಟರಿ ಪ್ರಮುಖರು ಮುಂದಾಗಬೇಕು ಎಂದು ಹೇಳಿದರು.
ಯುವ ಪೀಳಿಗೆಯಲ್ಲಿ ಸೇವಾ ಕಾಳಜಿಯನ್ನು ಹೆಚ್ಚಿಸುವ ನಿಟ್ಟಿನಲ್ಲಿ ಶಾಲಾ ಹಂತದಲ್ಲಿನ ಇಂಟರ್‍ಯಾಕ್ಟ್ ಕಾಲೇಜು ಹಂತದಲ್ಲಿನ ರೋಟರ್‍ಯಾಕ್ಟ್ ಕ್ಲಬ್ ಗಳನ್ನು ಮತ್ತಷ್ಟು ಹೆಚ್ಚಿಸಿ ಯುವಕ, ಯುವತಿಯರಿಗೆ ಸಾಮಾಜಿಕ ಸೇವೆಯಲ್ಲಿ ಆಸಕ್ತಿ ಮೂಡಿಸುವಂತಾಗಬೇಕು ಎಂದು ಹೇಳಿದರು.
ರೋಟರಿ ವುಡ್ಸ್ ಅಧ್ಯಕ್ಷ ಕಿರಣ್ ಕುಂದರ್ ಸ್ವಾಗತಿಸಿ, ಕಾರ್‍ಯದರ್ಶಿ ಪ್ರಮೀಳಾ ಶೆಟ್ಟಿ ವಂದಿಸಿದರು. ಮುಂದಿನ ಸಾಲಿನ ಕಾರ್‍ಯದರ್ಶಿ ಸ್ಮಿತಾ ಚಂಗಪ್ಪ, ನಿಕಟಪೂರ್ವ ಅಧ್ಯಕ್ಷ ಹರೀಶ್ ಕಿಗ್ಗಾಲು, ಮಾಜಿ ಅಧ್ಯಕ್ಷ ವಸಂತ್ ಕುಮಾರ್ ಸೇರಿದಂತೆ ರೋಟರಿ ಪ್ರಮುಖರು ಹಾಜರಿದ್ದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.