ಜಾಗತಿಕ ಮಟ್ಟದಲ್ಲಿ ಸಮಾಜದ ಅವಶ್ಯಕತೆಗಳಿಗೆ ಸ್ಪಂದಿಸುವ ಮೂಲಕ ರೋಟರಿ ಸಂಸ್ಥೆ ಸೇವೆಗೆ ಪರ್ಯಾಯ ಅರ್ಥ ಕಲ್ಪಿಸಿದೆ.
ಕನ್ನಡಪ್ರಭ ವಾರ್ತೆ ಶಿರಸಿ
ಜಾಗತಿಕ ಮಟ್ಟದಲ್ಲಿ ಸಮಾಜದ ಅವಶ್ಯಕತೆಗಳಿಗೆ ಸ್ಪಂದಿಸುವ ಮೂಲಕ ರೋಟರಿ ಸಂಸ್ಥೆ ಸೇವೆಗೆ ಪರ್ಯಾಯ ಅರ್ಥ ಕಲ್ಪಿಸಿದೆ ಎಂದು ರೋಟರಿ ಸಂಸ್ಥೆಯ ಅಂತಾರಾಷ್ಟ್ರೀಯ ನಿರ್ದೇಶಕ ಕೆ.ಪಿ. ನಾಗೇಶ ಹೇಳಿದರು.ಇಂದು ಸ್ಕೊಡ್‌ವೆಸ್ ಸಂಸ್ಥೆ, ರೋಟರಿ ಬೆಂಗಳೂರು ಹೈಗ್ರೌಂಡ್ಸ್ ಮತ್ತು ರೋಟರಿ ಬೆಂಗಳೂರು ಗಂಧದಗುಡಿ ವಿಭಾಗದ ಸಹಯೋಗದಲ್ಲಿ ವಾನಳ್ಳಿ ಗ್ರಾಪಂ ವ್ಯಾಪ್ತಿಯ ಕಕ್ಕಳ್ಳಿ ಮತ್ತು ಮುಷ್ಕಿಯಲ್ಲಿ ನಡೆದ ಮೂರು ಮತ್ತು ನಾಲ್ಕನೇ ಸೋಲಾರ್ ಗ್ರಾಮ ಯೋಜನೆಯನ್ನು ಉದ್ಘಾಟಿಸಿ ಸೌರದೀಪ ವಿತರಿಸಿ ಮಾತನಾಡಿದರು.ಪಶ್ಚಿಮ ಘಟ್ಟಗಳು ಜಾಗತಿಕ ಮಟ್ಟದ ಮನ್ನಣೆ ಪಡೆದ ಪ್ರದೇಶಗಳಾಗಿದ್ದು, ಜಾಗತಿಕ ತಾಪಮಾನ ನಿರ್ವಹಣೆಯಲ್ಲಿ ಪ್ರಮುಖ ಪಾತ್ರವಹಿಸುತ್ತಿವೆ. ಈ ಹಿನ್ನೆಲೆ ಪಶ್ಚಿಮ ಘಟ್ಟಗಳ ಅವಲಂಬಿತ ಸಮುದಾಯಗಳ ಬಲವರ್ಧನೆಗೆ ರೋಟರಿ ಸಂಸ್ಥೆ ಕೈ ಜೋಡಿಸಿದೆ ಎಂದರು. ರೋಟರಿ ಸಂಸ್ಥೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಸೇವೆಗಾಗಿಯೇ ಸ್ಥಾಪನೆಯಾದ ಪ್ರಾಸ್ತಾವಿಕವಾಗಿ ಮಾತನಾಡಿದ ಸ್ಕೊಡ್‌ವೆಸ್ ಸಂಸ್ಥೆಯ ಕಾರ್ಯನಿರ್ವಾಹಕ ನಿರ್ದೇಶಕ ಡಾ. ವೆಂಕಟೇಶ ನಾಯ್ಕ, ಹಲವಾರು ಸಮಸ್ಯೆಗಳಿಗೆ ಉತ್ತರ ಕನ್ನಡ ಜಿಲ್ಲೆ ಇಂದಿಗೂ ಉತ್ತರ ಕಾಣದ ಜಿಲ್ಲೆಯಾಗಿಯೇ ಉಳಿದಿದೆ. ಸರ್ಕಾರ ಹಲವಾರು ಯೋಜನೆಗಳನ್ನು ರೂಪಿಸಿದ್ದರೂ ಸಹ ಅನುಷ್ಠಾನ ಕೊರತೆಯಲ್ಲಿ ನ್ಯೂನತೆಗಳು ಇರುವುದರಿಂದ ರೋಟರಿಯಂತಹ ಸಂಸ್ಥೆಗಳ ಸಹಾಯ ಅಗತ್ಯ ಎಂದರು.ಮುಖ್ಯ ಅತಿಥಿಗಳಾಗಿ ರೋಟರಿ ಬೆಂಗಳೂರು ಹೈಗ್ರೌಂಡ್ಸ್‌ನ ನಿಕಟಪೂರ್ವ ಅಧ್ಯಕ್ಷ ರೋ. ಸನತ್ ಕುಮಾರ್, ಪ್ರಮುಖರಾದ ಕೆ.ಸಿ. ಜಯರಾಮ್, ಅಶ್ವಿನ್ ವಿ.ಎಸ್., ಜಯಪ್ರಕಾಶ, ಎಂ. ಜಯರಾಮು, ದಿನಕರ, ರಾಜಶೇಖರ, ನಟರಾಜ ನಾಯ್ಕ, ಸುವರ್ಣ ಜಯರಾಮು, ಚಂದ್ರಶೇಖರ್ ಕೆ.ಎ., ಶುಭಂ, ವಿಜಯರಾಜ್ ಸಿಸೋಡಿಯಾ, ಸುಂದರ್ ರಾಜ್ ಪಾತಿ, ಶ್ರೀಕಾಂತ್ ತಾಕೇಲ್, ಅರುಣ್ ಕುಮಾರ್ ಹಾಗೂ ಜಯರಾಮ್ ಹೆಗಡೆ ಉಪಸ್ಥಿತರಿದ್ದು, ಸಂದರ್ಭೋಚಿತವಾಗಿ ಮಾತನಾಡಿದರು. ಈ ಸಂದರ್ಭ ೧೫೦ಕ್ಕೂ ಹೆಚ್ಚಿನ ಮನೆಗಳಿಗೆ ಉಚಿತ ಸೌರ ದೀಪ ವಿತರಿಸಲಾಯಿತು. ನಂತರದಲ್ಲಿ ಉಚಿತ ಆಟ-ಪಾಠೋಪಕರಣ ವಿತರಿಸಲಾಯಿತು.ಸ್ಕೊಡ್‌ವೆಸ್ ಸಂಸ್ಥೆಯ ಕಾರ್ಯಕ್ರಮಾಧಿಕಾರಿ ಡಾ. ನಾರಾಯಣ ಹೆಗಡೆ ಕಾರ್ಯಕ್ರಮ ನಿರ್ವಹಿಸಿ, ಸ್ವಾಗತಿಸಿ, ವಂದಿಸಿದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.