ಓಂಕಾರೇಶ್ವರ ದೇವಾಲಯದ ಮುಂಭಾಗದ ಗೆದ್ದಯಲ್ಲಿ‌ ನಾಟಿ ಕಾರ್ಯ

KannadaprabhaNewsNetwork |  
Published : Aug 15, 2025, 01:00 AM IST

ಸಾರಾಂಶ

ಹುತ್ತರಿ ಹಬ್ಬಕ್ಕೆ ಬೇಕಾದ ಕದಿರಿನ ಪ್ರಯುಕ್ತ ಬತ್ತದ ನಾಟಿ ಮಾಡಲಾಯಿತು. ಒಂಕಾರೇಶ್ವರ ದೇವಸ್ಥಾನ ಕಲ್ಯಾಣಿ ಮುಂಭಾಗದಲ್ಲಿರುವ ಗದ್ದೆಯಲ್ಲಿ ಆಯೋಜಿಸಲಾಯಿತು.

ಕನ್ನಡಪ್ರಭ ವಾರ್ತೆ ಮಡಿಕೇರಿ

ಶ್ರೀ ಓಂಕಾರೇಶ್ವರ ದೇವಸ್ಥಾನ ವ್ಯವಸ್ಥಾಪನ ಸಮಿತಿಯ ವತಿಯಿಂದ ಓಂಕಾರೇಶ್ವರ ದೇವಸ್ಥಾನ ಕಲ್ಯಾಣಿ ಮುಂಭಾಗದಲ್ಲಿರುವ ಗದ್ದೆಯಲ್ಲಿ ಹುತ್ತರಿ ಹಬ್ಬಕ್ಕೆ ಬೇಕಾದ ಕದಿರಿನ ಪ್ರಯುಕ್ತ ಬತ್ತದ ನಾಟಿ ನೆಡಲಾಯಿತು.

ವ್ಯವಸ್ಥಾಪನ ದೇವಸ್ಥಾನ ಸಮಿತಿಯ ಅಧ್ಯಕ್ಷರಾದ ಚುಮ್ಮಿದೇವಯ್ಯನವರ ಸಮ್ಮುಖದಲ್ಲಿ ಕೊಡಗು ಜಿಲ್ಲಾ ಜಾನಪದ ಪರಿಷತ್ ಅಧ್ಯಕ್ಷರಾದ ಬಿಜಿ ಅನಂತಶಯನವರು, ಕೊಡವ ಸಮಾಜ ಅಧ್ಯಕ್ಷರಾದ ಎಂಪಿ ಮುತ್ತಪ್ಪನವರು, ಕೊಡಗು ಗೌಡ ವಿದ್ಯಾಸಮಾಜ ಅಧ್ಯಕ್ಷರಾದ ಅಂಬೆಕಲ್ ನವೀನ್ , ವ್ಯವಸ್ಥಾಪನ ಸದಸ್ಯರಾದ ಪ್ರಕಾಶ್ ಆಚಾರ್ಯ ಅಂಬೆಕಲ್ ಕುಶಾಲಪ್ಪನವರು ಕನ್ನಂಡ ಕವಿತಾ ರವರು, ಕಾರ್ಯನಿರ್ವಾಹಕ ಅಧಿಕಾರಿ ದೇವರಾಜ್ ರವರು ದೇವಸ್ಥಾನಕ್ಕೆ ನಾಟಿ ತಂದು ಕೊಡುವ ಎಸ್ ಪಿ ವಾಸುದೇವರವರು ನಗರಸಭಾ ಸದಸ್ಯರಾದ ಕಾಳಚಂಡ ಅಪ್ಪಣ್ಣ, ಸದಾ ಮುದ್ದಪ್ಪ, ಕೊಡವ ಸಮಾಜ ಉಪಾಧ್ಯಕ್ಷರಾದ ವಿಜು ದೇವಯ್ಯನವರು, ಜಂಟಿ ಕಾರ್ಯದರ್ಶಿ ನಂದಿನೆರವಂಡ ದಿನೇಶ್ ರವರು, ರೇವತಿ ರಮೇಶ್ ರವರು, ಸಂಪತ್ ಕುಮಾರ್ ರವರು ದೇವಸ್ಥಾನದ ಅರ್ಚಕ ಬಳಗ ಸಿಬ್ಬಂದಿ ವರ್ಗದವರು ಹಾಗೂ ಸಾರ್ವಜನಿಕರು ಪಾಲ್ಗೊಂಡಿದ್ದರು. ದೇವಾಲಯ ಸ್ಥಾಪನ ಸಮಿತಿ ಅಧ್ಯಕ್ಷರಾದ ಚುಮ್ಮಿ ದೇವಯ್ಯನವರು ಸ್ವಾಗತಿಸಿದರು. ಜಾನಪದ ಪರಿಷತ್ ಅಧ್ಯಕ್ಷರಾದ ಅನಂತಶಯನ ರವರು ಶುಭನುಡಿಗಳನ್ನಾಡಿದರು. ದೇವಸ್ಥಾನದ ಕಾರ್ಯನಿರ್ವಾಹಕ ಅಧಿಕಾರಿಯವರು ವಂದನಾರ್ಪಣೆ ಮಾಡಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಕಪ್‌ತುಳಿತ ತನಿಖಾ ವರದಿ ಹೈಕೋರ್ಟ್‌ ಪರಾಮರ್ಶೆಗೆ
15 ವರ್ಷಗಳಿ ಸುವರ್ಣನ್ಯೂಸ್, ಕನ್ನಡಪ್ರಭದಲ್ಲಿ ಕೆಲಸ ಮಾಡುತ್ತಿದ್ದ ಮಹಿ‍ಳೆ ಅಪಘಾತದಲ್ಲಿ ದಾರುಣ ಸಾವು