ಉಚಿತ ಪಡಿತರ ವಿತರಣೆಯಲ್ಲಿ ಪ್ಲಾಸ್ಟಿಕ್ ಅಕ್ಕಿ ಪತ್ತೆ

KannadaprabhaNewsNetwork | Published : Feb 1, 2024 2:01 AM

ಸಾರಾಂಶ

ರಾಜ್ಯ ಸರ್ಕಾರ ನೀಡುವ ಉಚಿತ ಪಡಿತರ ವಿತರಣೆಯಲ್ಲಿ ಪ್ಲಾಸ್ಟಿಕ್ ಅಕ್ಕಿ ಪತ್ತೆ ಆಗಿದೆ ಎಂಬ ದೂರಿನನ್ವಯ ಆಹಾರ ಇಲಾಖೆ ಉಪನಿರ್ದೇಶಕ ಯೋಗಾನಂದ ನೇತೃತ್ವದ ತಂಡ ಅಜ್ಜಿಪುರ ಗ್ರಾಮಕ್ಕೆ ಬೇಟಿ ನೀಡಿ ಪರಿಶೀಲಿಸಿದರು.

ಕನ್ನಡಪ್ರಭ ವಾರ್ತೆ ಹನೂರು

ರಾಜ್ಯ ಸರ್ಕಾರ ನೀಡುವ ಉಚಿತ ಪಡಿತರ ವಿತರಣೆಯಲ್ಲಿ ಪ್ಲಾಸ್ಟಿಕ್ ಅಕ್ಕಿ ಪತ್ತೆ ಆಗಿದೆ ಎಂಬ ದೂರಿನನ್ವಯ ಆಹಾರ ಇಲಾಖೆ ಉಪನಿರ್ದೇಶಕ ಯೋಗಾನಂದ ನೇತೃತ್ವದ ತಂಡ ಅಜ್ಜಿಪುರ ಗ್ರಾಮಕ್ಕೆ ಬೇಟಿ ನೀಡಿ ಪರಿಶೀಲಿಸಿದರು.

ಹನೂರು ತಾಲೂಕಿನ ಅಜ್ಜಿಪುರ ಗ್ರಾಮದ ಸೊಸೈಟಿ ಗೋದಾಮಿನಲ್ಲಿ ಸರ್ಕಾರ ನೀಡುವ ಪಡಿತರದಲ್ಲಿ ಪ್ಲಾಸ್ಟಿಕ್ ಅಕ್ಕಿ ಪತ್ತೆಯಾಗಿದೆ ಎಂದು ಆರೋಪಿಸಿ ಸೊಸೈಟಿಗೆ ಬೀಗ ಹಾಕಿ ಕರ್ನಾಟಕ ರಾಜ್ಯ ರೈತ ಸಂಘಟನೆ ಆಕ್ರೋಶ ವ್ಯಕ್ತಪಡಿಸಿ ಅಧಿಕಾರಿಗಳ ಗಮನಕ್ಕೆ ತಂದರು.

ಅಧಿಕಾರಿಗಳ ತಂಡ ಭೇಟಿ : ಈ ಹಿನ್ನಲೆ ಜಿಲ್ಲಾ ಮಟ್ಟದ ಆಹಾರ ಇಲಾಖೆಯ ಅಧಿಕಾರಿಗಳು ಬುಧವಾರರಂದು ಬೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಪಡಿತರದಾರರಾದ ಚಂದನ್ ಹಾಗೂ ಶ್ರೀನಿವಾಸ್ ಎಂಬುವರು ಪಡಿತರ ಅಕ್ಕಿ ಪಡೆದಿದ್ದು, ಇದರಲ್ಲಿ ಪ್ಲಾಸ್ಟಿಕ್ ಅಕ್ಕಿ ಕಲಬೆರಕೆಯಾಗಿದೆ ಎಂದು ಅಧಿಕಾರಿಗಳ ಮುಂದೆಯೇ ಅಕ್ಕಿಯನ್ನು ತೋರಿಸಿ ಆರೋಪಿಸಿ ದೂರಿದ್ದರು ಈ ವೇಳೆ ರೈತ ಸಂಘದ ಹನೂರು ಘಟಕದ ಅಧ್ಯಕ್ಷ ಅಮ್ಜದ್ ಖಾನ್ ಮಾತನಾಡಿ ಹನೂರು ತಾಲೂಕಿನ ಅಜ್ಜಿಪುರ ಗ್ರಾಮದಲ್ಲಿ ಕೆಲ ಫಲಾನುಭವಿಗಳಿಗೆ ಪ್ಲಾಸ್ಟಿಕ್ ಅಕ್ಕಿ ಬೆರೆಕೆಯಾಗಿದೆ, ಜನರು ಅನಾರೋಗ್ಯಕ್ಕೆ ತುತ್ತಾದರೆ ಯಾರು ಹೊಣೆ? ಸರ್ಕಾರ ನೀಡುವ ಪಡಿತರದಲ್ಲೂ ಮೋಸ ಮಾಡುತ್ತೀರಾ ಎಂದು ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಕೆಲ ಮನೆಗಳಲ್ಲಿನ ಪಡಿತರ ಪರಿಶೀಲನೆ: ಪಡಿತರದಲ್ಲಿ ಪ್ಲಾಸ್ಟಿಕ್ ಅಕ್ಕಿ ದೊರೆತಿದೆ ಎಂಬ ದೂರಿನ ಅನ್ವಯ ಜಿಲ್ಲಾ ಮಟ್ಟದ ಆಹಾರ ಇಲಾಖೆಯ ವಿವಿಧ ಅಧಿಕಾರಿಗಳ ತಂಡ ದೂರದಾರರಾದ ಶ್ರೀನಿವಾಸ್‌ರವರಿಗೆ ನೀಡಿಲಾದ ಪಡಿತರವನ್ನು ಪರಿಶೀಲನೆ ನೆಡೆಸಿ ಸ್ಯಾಂಪಲ್ ಪಡೆದು ತದನಂತರ ಸಮೀಪದ ಮನೆಗಳಿಗೂ ತೆರಳಿ ಅವರಿಗೆ ನೀಡಲಾದ ಪಡಿತರವನ್ನು ಪರಿಶೀಲಿಸಿದರು. ಈ ವೇಳೆ ಆಹಾರ ಇಲಾಖೆಯ ಉಪನಿರ್ದೇಶಕರಾದ ಯೋಗಾನಂದ ಪರಿಶೀಲಿಸಿ ಮಾತನಾಡಿ ಸರ್ಕಾರದ ವತಿಯಿಂದ ನೀಡಲಾದ ಪಡಿತರದಲ್ಲಿ ಪ್ಲಾಸ್ಟಿಕ್ ಅಕ್ಕಿ ದೊರೆತಿದೆ ಎಂಬ ದೂರು ಬಂದ ಹಿನ್ನಲೆ ಗ್ರಾಮದಲ್ಲಿನ ಕೆಲ ಮನೆಗಳಿಗೂ ಭೇಟಿ ನೀಡಿ ಸ್ಯಾಂಪಲ್ ಪಡೆದು ಪರಿಶೀಲನೆ ನೆಡೆಸಲಾಗಿದ್ದು ಈ ಬಗ್ಗೆ ಪೂರ್ಣಪ್ರಮಾಣದಲ್ಲಿ ಪರಿಶೀಲನೆ ನೆಡೆಸಿ ಆಕ್ರಮ ಕಂಡು ಬಂದಲ್ಲಿ ತಪಿಸ್ಥಿತರ ವಿರುದ್ದ ಕ್ರಮಕೈಗೂಳ್ಳಲಾಗುವುದು ಹಾಗೂ ಕೇಂದ್ರ ಸರ್ಕಾರದ ಮಾರ್ಗಸೂಚನೆಯಂತೆ ಪ್ರತಿ 1ಕೆ.ಜಿ ಅಕ್ಕಿಗೆ 10 ಗ್ರಾಮ್ ಸಾರವರ್ಧಿತ ಅಕ್ಕಿ ಬೆರಸಲಾಗುತ್ತಿದ್ದು ಫಲಾನುಭವಿಗಳು ಯಾರೂ ಆತಂಕಕ್ಕೆ ಒಳಗಾಗಬಾರದು ಈ ಸಾರವರ್ಧೀತ ಅಕ್ಕಿಯಲ್ಲಿ ಕಬ್ಬಿಣದ ಅಂಶ, ಪೋಲಿಕ್ ಆಮ್ಲ ಹಾಗೂ ಬಿ ಮಿಟಿಮಿನ್ ಆಂಶಗಳಿವೆ ಎಂದು ತಿಳಿಸಿದರು.ಈ ಸಂದರ್ಭದಲ್ಲಿ ತಾಲೂಕು ಆಹಾರ ನಿರೀಕ್ಷಕರಾದ ಬಸವರಾಜು, ಪ್ರಸಾದ್, ಹನೂರು ತಹಸೀಲ್ದಾರ್‌ ಗುರುಪ್ರಸಾದ್,ಆಹಾರ ಶಿರಸ್ತೇದಾರ್ ಮಹೇಶ್, ವಿಶ್ವನಾಥ್, ರಾಜಶ್ವನಿರೀಕ್ಷಕರಾದ ಶಿವುಕುಮಾರ್,ಗ್ರಾಮ ಲೆಕ್ಕಾಧಿಕಾರಿ ವಿನೋದ್ ಸೇರಿದಂತೆ ಹಲವರು ಹಾಜರಿದ್ದರು.

Share this article