ಕನ್ನಡಪ್ರಭ ವಾರ್ತೆ ಕೆ.ಆರ್.ಪೇಟೆ
ಪಟ್ಟಣದ ಶ್ರೀರಂಗ ಚಿತ್ರಮಂದಿರದ ಆವರಣದಲ್ಲಿ ಡಾ.ರಾಜ್‌ಕುಮಾರ್ ಕಲಾಸಂಘ ಕನ್ನಡ ರಾಜ್ಯೋತ್ಸವದ ಅಂಗವಾಗಿ ಆಯೋಜಿಸಿದ್ದ 10 ದಿನಗಳ ಪೌರಾಣಿಕ ನಾಟಕೋತ್ಸವ ಉದ್ಘಾಟಿಸಿ ಮಾತನಾಡಿದರು.
ನಾಟಕಗಳು ನಮ್ಮ ಸಂಸ್ಕೃತಿಯ ಪ್ರತಿಬಿಂಬ. ಕುರುಕ್ಷೇತ್ರ, ರಾಮಾಯಣದಂತಹ ನಾಟಕಗಳ ಮೂಲಕ ನಮ್ಮ ಹಿರಿಯರು ನಮ್ಮ ಬದುಕಿಗೆ ಮಾರ್ಗದರ್ಶನ ಮಾಡಿದ್ದಾರೆ. ನಾಟಕದ ಪಾತ್ರದಾರಿಗಳಿಂದ ದುಷ್ಟ ನಿಗ್ರಹ, ಶಿಷ್ಠ ಸಂರಕ್ಷಕ ಮಹತ್ವ ಸಾರುತ್ತಲೇ ಸತ್ಯ ಮತ್ತು ಧರ್ಮಕ್ಕೆ ಅಂತಿಮ ಜಯ. ನಾವೆಲ್ಲರೂ ಧರ್ಮಮಾರ್ಗದಲ್ಲಿಯೇ ಸಾಗಬೇಕು ಎನ್ನುವುದನ್ನು, ಸಾಮಾಜಿಕ ಸಂದೇಶವನ್ನು ಮುಂದಿನ ಪೀಳಿಗೆಗೆ ಹಸ್ತಾಂತರಿಸುವ ಕೆಲಸ ಮಾಡಿದ್ದಾರೆ ಎಂದರು.ನಾವು ಬದುಕಿರುವವರೆಗೂ ಒಳ್ಳೆಯರಾಗಿ ಸರಿದಾರಿಯಲ್ಲಿ ಬದುಕುವ ಮೂಲಕ ಮುಂದಿನ ಪೀಳಿಗೆಗೆ ಮಾರ್ಗದರ್ಶಕರಾಗಬೇಕು. ಹಗಲು ಸಮುಯದಲ್ಲಿಯೇ ಪಟ್ಟಣದಲ್ಲಿ ನಾಟಕೋತ್ಸವ ನಡೆಯುತ್ತಿದೆ. ಕಲಾಭಿಮಾನಿಗಳು ತಮ್ಮ ದೈನಂಧಿನ ಕೆಲಸ ಕಾರ್ಯಗಳನ್ನು ಬಿಟ್ಟು ನಾಟಕ ನೋಡಲು ತುಂಬಿ ನಿಂತಿದ್ದಾರೆ. ಇದು ಒಳ್ಳೆಯ ಬೆಳವಣಿಗೆ. ಕಲೆಯ ನೈಜ ಶಕ್ತಿ ಕಲಾಭಿಮಾನಿಗಳ ಮೂಲಕ ಎದ್ದು ಕಾಣುತ್ತಿದೆ ಎಂದರು.
ಶಾಸಕರ ಸಹೋದರ ಎಚ್.ಟಿ.ಲೋಕೇಶ್ ಅಧ್ಯಕ್ಷತೆ ವಹಿಸಿ ಮಾತನಾಡಿ. ಪೌರಾಣಿಕ ನಾಟಕಗಳನ್ನು ಅಭಿನಯಿಸುತ್ತಿರುವ ಕಲಾವಿದರ ಆಸಕ್ತಿಯನ್ನು ನೋಡುತ್ತಿದ್ದರೆ ನಮಗೆಲ್ಲ ಹೆಮ್ಮೆಯಾಗುತ್ತಿದೆ. ರಂಗಕಲೆ ಉಳಿವಿಗಾಗಿ ಇಲ್ಲಿನ ಕಲಾವಿದರು ಒಗ್ಗೂಡಿ ಶ್ರಮಿಸುತ್ತಿದ್ದಾರೆ. ಕಲಾವಿದರನ್ನು ಪ್ರೋತ್ಸಾಹಿಸಬೇಕಾದದು ನಮ್ಮೆಲ್ಲರ ಕರ್ತವ್ಯ ಎಂದರು.ಪಟ್ಟಣದಲ್ಲಿ ಡಾ.ರಾಜ್‌ಕುಮಾರ್ ಕಲಾ ಸಂಘದವರು ಅತಿ ಕಡಿಮೆ ವೆಚ್ಚದಲ್ಲಿ ಕಲಾವಿದರಿಗೆ ಅವರವರ ನಾಟಕಗಳನ್ನು ಪ್ರದರ್ಶಿಸಲು ಅವಕಾಶ ಕಲ್ಪಿಸಿರುವುದು ಮೆಚ್ಚುವಂತ ವಿಷಯ. ಪ್ರತಿಯೊಬ್ಬರೂ ಪೌರಾಣಿಕ ನಾಟಕಗಳನ್ನು ನೋಡಿ ಪ್ರೋತ್ಸಾಹಿಸುವ ಮೂಲಕ ಅಭಿಮಾನಿಗಳಾಗಿದ್ದಾರೆ. ನಾಟಕವನ್ನು ನೋಡಲು ಸೇರಿರುವ ಜನರನ್ನು ನೋಡಿದರೆ ಕಲೆಗೆ ಹಗಲು ರಾತ್ರಿ ಎಂಬ ಬೇಧವಿಲ್ಲ ಎಂಬುದು ಕಾಣುತ್ತದೆ ಎಂದು ಅಭಿಪ್ರಾಯಪಟ್ಟರು.
ಈ ವೇಳೆ ತಾಲೂಕು ಕಸಾಪ ಮಾಜಿ ಅಧ್ಯಕ್ಷ ಎಂ.ಕೆ.ಹರಿಚರಣತಿಲಕ್, ಜಿಲ್ಲಾ ಜೆಡಿಎಸ್ ಉಪಾಧ್ಯಕ್ಷ ಅಗ್ರಹಾರಬಾಚಹಳ್ಳಿ ನಾಗೇಶ್, ನಿವೃತ್ತ ಶಿಕ್ಷಕ ಶಂಕರೇಗೌಡ, ಕಲಾ ಸಂಘದ ದೇವರಾಜು ಮತ್ತಿತರರಿದ್ದರು.