ಸಮೀಕ್ಷೆಯಲ್ಲಿ ಜಾತಿ ಹೆಸರನ್ನು ಸ್ಪಷ್ಟವಾಗಿ ನಮೂದಿಸಿ

KannadaprabhaNewsNetwork | Published : May 7, 2025 12:48 AM

ಸಾರಾಂಶ

ರಾಜ್ಯ, ನಗರ, ವೃತ್ತಗಳು ಸೇರಿದಂತೆ ಹೆಸರುಗಳನ್ನು ನಾವು ಬದಲಾಯಿಸಿ ಕೊಳ್ಳುತ್ತೇವೆ, ಅದೇ ರೀತಿ ಯಾವುದೋ ಶತಮಾನದಲ್ಲಿ ನೀಡಿರುವಂತಹ ಜಾತಿಗಳಿಂದ ಸಮುದಾಯಗಳು ಅವಮಾನ ಸಹಿಸಿಕೊಳ್ಳುತ್ತಿವೆ. ಹಾಗಾಗಿ ತಾವು ಯಾವ ಸಮುದಾಯಕ್ಕೆ ಸೇರಿದ್ದಾರೆ ಆ ಸಮುದಾಯಗಳು ಜಾತಿ ಹೆಸರನ್ನು ಸ್ಪಷ್ಟಪಡಿಸಬೇಕು

ಕನ್ನಡಪ್ರಭ ವಾರ್ತೆ ಕೋಲಾರಕೋಲಾರದಲ್ಲಿ ಮಂಗಳವಾರ ಎರಡನೇ ದಿನ ನಡೆಯುತ್ತಿರುವ ಪರಿಶಿಷ್ಟ ಸಮುದಾಯದ ಜಾತಿ ಸಮೀಕ್ಷೆ ಸ್ಥಳಗಳಿಗೆ ವಿಶ್ರಾಂತ ನ್ಯಾಯಮೂರ್ತಿ ಡಾ.ಎಚ್.ಎನ್.ನಾಗಮೋಹನ್ ದಾಸ್ ಹಾಗೂ ತಂಡ ಭೇಟಿ ನೀಡಿ ಪರಿಶೀಲನೆ ನಡೆಸಿತು.ನಗರದ ಅಂಬೇಡ್ಕರ್ ನಗರ, ಗಾಂಧಿನಗರ, ಟಮಕ, ಗದ್ದೆಕಣ್ಣೂರು ಪ್ರದೇಶಗಳಿಗೆ ಖುದ್ದು ಮನೆಗಳಿಗೆ ಭೇಟಿ ನೀಡಿ ಗಣತಿದಾರರು ಪಡೆಯುತ್ತಿರುವ ಮಾಹಿತಿ ಕುರಿತು ಪರಿಶೀಲನೆ ನಡೆಸಿದರು. ಜಾತಿ ಹೆಸರು ಸ್ಪಷ್ಟವಾಗಿ ನಮೂದಿಸಿ

ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿ, ಪರಿಶಿಷ್ಟ ಸಮುದಾಯಗಳ ಸಮೀಕ್ಷೆಯಲ್ಲಿ ತಮ್ಮ ಜಾತಿಯ ಹೆಸರನ್ನು ಸ್ಪಷ್ಟವಾಗಿ ನಮೂದಿಸಬೇಕು. ಆಯಾ ಸಮುದಾಯಗಳು ಸ್ವಇಚ್ಚೆಯಿಂದ ಉಪ ಜಾತಿಯ ಹೆಸರು ಬದಲಾಯಿಸಿಕೊಳ್ಳಲು ಅವಕಾಶ ನೀಡಿದೆ ಎಂದು ತಿಳಿಸಿದರು. ರಾಜ್ಯ, ನಗರ, ವೃತ್ತಗಳು ಸೇರಿದಂತೆ ಹೆಸರುಗಳನ್ನು ನಾವು ಬದಲಾಯಿಸಿ ಕೊಳ್ಳುತ್ತೇವೆ, ಅದೇ ರೀತಿ ಯಾವುದೋ ಶತಮಾನದಲ್ಲಿ ನೀಡಿರುವಂತಹ ಜಾತಿಗಳಿಂದ ಸಮುದಾಯಗಳು ಅವಮಾನ ಸಹಿಸಿಕೊಳ್ಳುತ್ತಿವೆ. ಹಾಗಾಗಿ ತಾವು ಯಾವ ಸಮುದಾಯಕ್ಕೆ ಸೇರಿದ್ದಾರೆ ಆ ಸಮುದಾಯಗಳು ಜಾತಿ ಹೆಸರನ್ನು ಸ್ಪಷ್ಟಪಡಿಸಬೇಕು. ಇದರಿಂದ ಸಾಮಾಜಿಕ, ಆರ್ಥಿಕ ಹಾಗೂ ಶೈಕ್ಷಣಿಕವಾಗಿ ಹಿಂದುಳಿದವರನ್ನು ಗುರುತಿಸಲು ಸಾಧ್ಯವಾಗಲಿದೆ ಎಂದರು.ಮೂರು ಹಂತದ ಸಮೀಕ್ಷೆ

ಸಮಾಜ ಕಲ್ಯಾಣ ಇಲಾಖೆ ಆಯುಕ್ತ ರಾಕೇಶ್ ಕುಮಾರ್ ಮಾತನಾಡಿ, ಪರಿಶಿಷ್ಟ ಸಮುದಾಯಗಳ ಜಾತಿ ಸಮೀಕ್ಷೆಯಲ್ಲಿ ೪೨ ಪ್ರಶ್ನೆಗಳನ್ನು ನಮೂದು ಮಾಡಿದೆ, ಆಯೋಗದ ಮೂಲಕ ಅನುಮೋದಿಸಿ ಪರಿಶಿಷ್ಟ ಜಾತಿಯ ಸಾಮಾಜಿಕ, ಆರ್ಥಿಕ ಸ್ಥಿತಿಗಳ ಬೆಳವಣಿಗೆಯನ್ನು ಸಮಗ್ರವಾಗಿ ಮೂರು ಹಂತದಲ್ಲಿ ಸಮೀಕ್ಷೆ ಮಾಡಲಾಗುತ್ತಿದೆ ಎಂದರು.

ಮೊದಲ ಹಂತದಲ್ಲಿ ಮನೆ ಮನೆ ಸಮೀಕ್ಷೆ ಮೇ ೧೭ ರಂದು ಮುಗಿದ ನಂತರ, ಮೇ ೧೯ ರಿಂದ ೨೧ ರವರೆಗೆ ಆಯಾ ಗ್ರಾಪಂಗಳಲ್ಲಿ ವಿಶೇಷ ಶಿಬಿರ ಆಯೋಜಿಸಲಾಗುವುದು. ಈ ವಿಶೇಷ ಶಿಬಿರದಲ್ಲಿ ಪ್ರಮುಖವಾಗಿ ಕೂಲಿಕಾರ್ಮಿಕರು, ಬೇರೆ ಕಡೆ ವಲಸೆ ಹೋಗಿರುವಂತಹವರನ್ನು ಸಮೀಕ್ಷೆ ಮಾಡಲಾಗುವುದು, ಮತಗಟ್ಟೆ ವ್ಯಾಪ್ತಿಯಲ್ಲಿ ಆಧಾರ್, ಕುಟುಂಬ ಪಡಿತರ ಚೀಟಿ ಮುಂತಾದ ದಾಖಲೆಗಳನ್ನು ಸಲ್ಲಿಸಿ ದಾಖಲು ಮಾಡಬಹುದಾಗಿದೆ ಎಂದರು. ಆನ್‌ಲೈನ್‌ನಲ್ಲಿ ಸಮೀಕ್ಷೆ

೩ನೇ ಹಂತದಲ್ಲಿ ಆನ್‌ಲೈನ್‌ನಲ್ಲಿ ಸಮೀಕ್ಷೆಗೆ ಮಾಹಿತಿ ನಮೂದಿಸುವ ಅವಕಾಶ ಕಲ್ಪಿಸಲಾಗಿದೆ. ಆಧಾರ್ ಕಾರ್ಡ್ ಮತ್ತು ಜಾತಿ ಪ್ರಮಾಣ ಪತ್ರದ ಆರ್‌ಡಿ ನಂಬರ್ ನಮೂದಿಸಿ ಮೂಲ ಜಾತಿಯನ್ನು ಸ್ಪ?ವಾಗಿ ತಿಳಿಸಬಹುದಾಗಿದೆ. ೨೦೧೧ ರ ಗಣತಿಯಲ್ಲಿ ಶೇ.೪೩ ರಷ್ಟು ಜನ ಆದಿಕರ್ನಾಟಕ, ಆದಿದ್ರಾವಿಡ, ಆದಿ ಆಂಧ್ರ ಎಂದು ನಮೂದಿಸಿದ್ದಾರೆ. ಅದೇ ರೀತಿ ಸ್ಪಷ್ಟಗಿ ಪ್ರತ್ಯೇಕವಾಗಿ ಉಪಜಾತಿ ಹೆಸರನ್ನು ನಮೂದಿಸಲು ಆ್ಯಪ್ ಸಿದ್ದಪಡಿಸಲಾಗಿದೆ ಎಂದರು.ಪರಿಶಿಷ್ಟ ಜಾತಿ ಸಮನ್ವಯ ಸದಸ್ಯ ಕಾಂತರಾಜ್, ಜಿಲ್ಲಾಧಿಕಾರಿ ಡಾ.ಎಂ.ಆರ್.ರವಿ, ಜಿಪಂ ಸಿಇಓ ಡಾ.ಪ್ರವೀಣ್ ಪಿ.ಬಾಗೇವಾಡಿ, ಎಸ್‌ಪಿ ಡಾ.ಬಿ.ನಿಖಿಲ್. ಎಸಿ ಡಾ.ಮೈತ್ರಿ, ಸಮಾಜ ಕಲ್ಯಾಣ ಇಲಾಖೆಯ ಜಂಟಿ ನಿರ್ದೇಶಕ ಶ್ರೀನಿವಾಸ್, ಗ್ರೇಡ್-೨ ತಹಸೀಲ್ದಾರ್ ಹಂಸ ಮರಿಯಾ ಇದ್ದರು.

Share this article