ಕನ್ನಡಪ್ರಭ ವಾರ್ತೆ ಹಲಗೂರು
ಕುಂತೂರು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ‘ರೈಟ್ ಟು ಲೀವ್’ ಸಂಸ್ಥೆ ಸಹಯೋಗದಲ್ಲಿ ಬ್ಲಾಕ್ ಹಾಕ್ ನೆಟ್ ವರ್ಕ್ ಕಂಪನಿಯ ಸಿಎಸ್ಆರ್ ಅನುದಾನದಡಿ 1.6 ಲಕ್ಷ ವೆಚ್ಚದ ಪರಿಕರ ವಿತರಿಸಿ ಮಾತನಾಡಿ, ಸರ್ಕಾರಿ ಶಾಲೆ ಶಿಕ್ಷಕರು ಬಿಎಡ್ ಪದವಿ ಜೊತೆಗೆ ಶಿಕ್ಷಕ ಅರ್ಹತಾ ಪರೀಕ್ಷೆ (ಟಿಇಟಿ) ಮತ್ತು(ಸಿಇಟಿ) ಪ್ರವೇಶ ಪರೀಕ್ಷೆಗಳ ಮೂಲಕ ಆಯ್ಕೆಯಾಗಿದ್ದಾರೆ. ಮಗುವಿಗೆ ಯಾವ ರೀತಿ ಕಲಿಸಬೇಕು ಎಂಬ ವಿಶೇಷ ತರಬೇತಿಯನ್ನು ನೀಡಲಾಗುತ್ತದೆ ಎಂದರು.
ವರ್ಷದಲ್ಲಿ 60 ದಿನಗಳ ಕಾಲ ಪ್ರತಿಯೊಬ್ಬ ಶಿಕ್ಷಕರಿಗೂ ಕಡ್ಡಾಯವಾಗಿ ವಿವಿಧ ಬೋಧನಾ ತರಬೇತಿ ನೀಡಲಾಗುತ್ತದೆ. ಆದ್ದರಿಂದ ಖಾಸಗಿ ಶಾಲೆಗಳಿಗೆ ಮಕ್ಕಳನ್ನು ಸೇರಿಸಿ ಪೋಷಕರು ಹಣ ವ್ಯರ್ಥ ಮಾಡಿಕೊಳ್ಳುತ್ತಿದ್ದಾರೆ. ಸರ್ಕಾರಿ ಶಾಲೆಗಳಿಗೆ ನಿಮ್ಮ ಮಕ್ಕಳನ್ನು ಸೇರಿಸುವಂತೆ ಸಲಹೆ ಮಾಡಿದರು.ಮಕ್ಕಳ ಕಲಿಕೆಗಾಗಿ ಏಳಿಗೆಗಾಗಿ ಗಣೇಶ್ ಮತ್ತು ಬೀರೇಶ್ ಎಂಬುವರು ರೈಟ್ ಟು ಲಿವ್ ಎಂಬ ಸಂಸ್ಥೆ ಮೂಲಕ ಸುಮಾರು 1.6 ಲಕ್ಷ ರು ವೆಚ್ಚದ ಕಲಿಕಾ ಸಾಮಗ್ರಿಗಳನ್ನು ಈ ಶಾಲೆಗೆ ನೀಡಿದ್ದಾರೆ. ಮಕ್ಕಳಿಗೆ ಆಟದ ಜೊತೆ ಕಲಿಕೆಯನ್ನು ಸುಲಭಗೊಳಿಸುವ ಈ ರೀತಿಯ ಸಾಮಗ್ರಿಗಳನ್ನು ನೀಡಿರುವುದು ಉತ್ತಮ ಎಂದರು.
ರೈಟ್ ಟು ಲೀವ್ ಸಂಸ್ಥೆ ವ್ಯವಸ್ಥಾಪಕ ವೀರೇಶ್ ಮಾತನಾಡಿ, ವಿವಿಧ ಕಂಪನಿಗಳಿಂದ ಸಿಎಸ್ಆರ್ ಅನುದಾನದಡಿಯಲ್ಲಿ ಶಿಕ್ಷಣ, ಆರೋಗ್ಯ, ಕ್ರೀಡಾ ಕ್ಷೇತ್ರ ಸೇರಿದಂತೆ ಅಗತ್ಯ ಪರಿಕರಗಳನ್ನು ಸರ್ಕಾರಿ ಶಾಲೆಗಳಿಗೆ ತಲುಪಿಸುವ ಕೆಲಸವನ್ನು ನಮ್ಮ ರೈಟ್ ಟು ಲೀವ್ ಸಂಸ್ಥೆ ಮಾಡುತ್ತಿದೆ. ಈ ಶಾಲೆಗೆ ಅಗತ್ಯವಿರುವ ಸ್ಟೂಲ್, ಕುರ್ಚಿ, ಗ್ರೀನ್ ಬೋರ್ಡ್, ಕ್ಯಾಬಿನ್ ಸೆಟ್, ಅಲ್ಮೇರಾ, ಸೇರಿದಂತೆ ಹಲವು ಬಗೆಯ ಪರಿಕರಗಳನ್ನು ವಿತರಣೆ ಮಾಡಲಾಗಿದೆ ಎಂದು ತಿಳಿಸಿದರು.ಈ ವೇಳೆ ಸಿಆರ್ ಪಿ ಶಿಕ್ಷಕ ಜಿ.ಎಸ್.ಕೃಷ್ಣ, ಲಿಂಗಪಟ್ಟಣ ಗ್ರಾಪಂ ಅಧ್ಯಕ್ಷೆ ಸುಕನ್ಯಾ ಸೋಮಸುಂದರ್, ಕಂಪನಿ ಹಿರಿಯ ಎಂಜಿನಿಯರ್ ಗಣೇಶ್, ಪ್ರಶಾಂತ್, ಶಿಕ್ಷಣ ಸಂಯೋಜಕರಾದ ಟಿ.ಎಂ.ರವಿಕುಮಾರ್, ಮುಖ್ಯಶಿಕ್ಷಕಿ ಕೆ.ವಿ.ರೂಪ, ಎಸ್.ಡಿ.ಎಂ.ಸಿ ಅಧ್ಯಕ್ಷ ಕೆಂಪೇಗೌಡ, ಶಿಕ್ಷಕರಾದ ಶಂಕರೇಗೌಡ, ಬೋರೇಗೌಡ, ಈಶ, ಪುಟ್ಟಭದ್ರಮ್ಮ, ರೇಷ್ಮಾ, ನಂದಕುಮಾರಿ, ಪವಿತ್ರ ಸೇರಿದಂತೆ ಹಲವರು ಭಾಗವಹಿಸಿದ್ದರು.