ವ್ಯಸನಮುಕ್ತ ಸಮಾಜಕ್ಕೆ ಪಣ ತೊಡಿ: ಡಾ.ಹಂಪಣ್ಣ ಸಜ್ಜನ್

KannadaprabhaNewsNetwork |  
Published : Aug 02, 2026, 01:15 AM IST
01ಕೆಪಿಆರ್‌ಸಿಆರ್‌ 01: | Kannada Prabha

ಸಾರಾಂಶ

ಮದ್ಯ ಹಾಗೂ ಮಾದಕ ವಸ್ತುಗಳ ಸೇವೆಯಿಂದ ಅನೇಕ ಕುಟುಂಬಗಳು ವಿವಿಧ ರೀತಿಯ ಸಮಸ್ಯೆಗಳು ಎದುರಿಸುತ್ತಿದ್ದು, ಎಲ್ಲರೂ ವ್ಯಸನ ಮುಕ್ತ ಸಮಾಜ ಕಟ್ಟಲು ಪಣ ತೊಡಬೇಕು ಎಂದು ಸಹಾಯಕ ಆಯುಕ್ತ ಡಾ.ಹಂಪಣ್ಣ ಸಜ್ಜನ್ ಹೇಳಿದರು.

ಕನ್ನಡಪ್ರಭ ವಾರ್ತೆ ರಾಯಚೂರು

ಮದ್ಯ ಹಾಗೂ ಮಾದಕ ವಸ್ತುಗಳ ಸೇವೆಯಿಂದ ಅನೇಕ ಕುಟುಂಬಗಳು ವಿವಿಧ ರೀತಿಯ ಸಮಸ್ಯೆಗಳು ಎದುರಿಸುತ್ತಿದ್ದು, ಎಲ್ಲರೂ ವ್ಯಸನ ಮುಕ್ತ ಸಮಾಜ ಕಟ್ಟಲು ಪಣ ತೊಡಬೇಕು ಎಂದು ಸಹಾಯಕ ಆಯುಕ್ತ ಡಾ.ಹಂಪಣ್ಣ ಸಜ್ಜನ್ ಹೇಳಿದರು.

ಸ್ಥಳೀಯ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಆವರಣದಲ್ಲಿ ಜಿಲ್ಲಾಡಳಿತ, ಜಿಪಂ,ಮಹಾನಗರ ಪಾಲಿಕೆ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ, ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಹಾಗೂ ಕರ್ನಾಟಕ ರಾಜ್ಯ ಮದ್ಯಪಾನ ಸಂಯಮ ಮಂಡಳಿ ಜಂಟಿಯಾಗಿ ಡಾ.ಮಹಾಂತ ಶಿವಯೋಗಿ ಅವರ ಜನ್ಮದಿನಾಚರಣೆ ಅಂಗವಾಗಿ ಹಮ್ಮಿಕೊಂಡಿದ್ದ ವ್ಯಸನ ಮುಕ್ತ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಶನಿವಾರ ಮಾತನಾಡಿದರು. ದೇಶದಲ್ಲಿ ಲಕ್ಷಾಂತರ ಜನರು ವಿವಿಧ ರೀತಿಯ ದುಶ್ಚಟಗಳಿಗೆ ಬಲಿಯಾಗುತ್ತಿದ್ದಾರೆ. ಕಾಲೇಜಿನ ಹಂತದಲ್ಲಿಯೇ ಮಾದಕ ವ್ಯಸನಕ್ಕೆ ಬಲಿಯಾದ ಯುವಕರು ಅದರಿಂದ ಹೊರಬರಲಾಗದೆ ಜೀವನವನ್ನೇ ಹಾಳು ಮಾಡಿಕೊಳ್ಳುತ್ತಿದ್ದಾರೆ. ದೇಶದ ಭವಿಷ್ಯ ರೂಪಿಸಬೇಕಾದ ಯುವ ಸಮೂಹ ಮೋಜಿಗಾಗಿ ಮಾದಕ ವ್ಯಸನಿಗಳಾಗುತ್ತಿರುವುದು ವಿಷಾದನೀಯ ಎಂದರು.

ಪದವಿ ಕಾಲೇಜಿನಲ್ಲಿ ಕಾರ್ಯಕ್ರಮ ಆಯೋಜನೆ ಮಾಡಿದ್ದು, ಅರ್ಥಪೂರ್ಣವಾಗಿದೆ. ಇಗಿನ ಯುವಕರು ಹೆಚ್ಚಿನ ಸಂಖ್ಯೆಯಲ್ಲಿ ದುಶ್ಚಟಗಳಿಗೆ ಬಲಿಯಾಗಿ ತಮ್ಮ ಉತ್ತಮ ಜೀವನವನ್ನು ಹಾಳು ಮಾಡಿಕೊಳ್ಳುತ್ತಿದ್ದಾರೆ. ತಂದೆ, ತಾಯಿಯರ ಆಸೆಗಳನ್ನು ಈಡೇರಿಸಲು ವಿಫಲವಾಗುತ್ತಾರೆ. ಮಹಾಂತ್ ಶಿವಯೋಗಿಗಳು ಮಹಾಂತ್ ಜೋಳಿಗೆಯನ್ನು ಸ್ಥಾಪಿಸಿ. ಸಮಾಜದಲ್ಲಿ ಆನೇಕ ಕುಟುಂಬಗಳನ್ನು ದುಶ್ಚಟಗಳಿಂದ ಹೊರತಂದರು. ಅವರು ವಿವಿಧ ಇಲಾಖೆಗಳ ಸಂಯುಕ್ತಾಶ್ರಯದಲ್ಲಿ ಸಾಮಾಜಿಕ ಕಾರ್ಯಗಳನ್ನು ಮಾಡಿದ್ದಾರೆ ಎಂದರು.

ಉಪನ್ಯಾಸಕರಾಗಿ ಮನೋ ವೈದ್ಯ ಡಾ.ವಿ.ಎ.ಮಾಲಿ ಪಾಟೀಲ್ ಮಾತನಾಡಿ, ಡಾ.ಮಹಾಂತ ಶಿವಯೋಗಿಗಳ ಜನ್ಮದಿನವು ಬಹಳಷ್ಟು ಮಹತ್ವ ಪೂರ್ಣವಾಗಿದ್ದು, ಜೀವನದಲ್ಲಿ ಅವರು ಮಹಾಂತ ಜೋಳಿಗೆ ದುಶ್ಚಟಗಳ ಭಿಕ್ಷೆ ಎನ್ನುವಂತೆ ಪ್ರತಿಯೊಬ್ಬರೂ ಇವರ ರೀತಿಯ ಜೀವನವನ್ನು ನಡೆಸಿದರೆ ಯುವಜನತೆಯು ವ್ಯಸನಗಳಿಂದ ಮುಕ್ತರಾಗಿ ಒಳ್ಳೆಯ ಜೀವನವನ್ನು ನಡೆಸಲು ಅನುಕೂಲವಾಗುತ್ತದೆ ಎಂದರು.

ಇದಕ್ಕೂ ಮುಂಚೆ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಹಿರಿಯ ಸಹಾಯಕ ನಿರ್ದೇಶಕರಾದ ಡಾ. ಸುರೇಶ ಜಿ ಅವರು ಪ್ರಾಸ್ತಾವಿಕ ನುಡಿಗಳನ್ನಾಡಿದರು.ಕಾಲೇಜಿನ ಪ್ರಾಚಾರ್ಯರಾದ ಪ್ರೋ.ಯಂಕಣ್ಣ. ಸಂಯೋಜನಾಧಿಕಾರಿ ಡಾ.ಮಹಾತೇಶ್ ಅಂಗಡಿ, ಬೋಧಕ-ಬೋಧಕೇತರ ಸಿಬ್ಬಂದಿ, ವಿದ್ಯಾರ್ಥಿಗಳು ಇದ್ದರು.

ಮಾನ್ವಿ ತಾಲೂಕಾಡಳಿತದಿಂದ ವ್ಯಸನಮುಕ್ತ ದಿನ

ಮಾನ್ವಿ: ತಾಲೂಕಾಡಳಿತದಿಂದ ಪಟ್ಟಣದ ತಹಸೀಲ್ದಾರ್ ಕಚೇರಿಯಲ್ಲಿ ಡಾ.ಮಹಾಂತ ಶಿವಯೋಗಿ ಅವರ ಜನ್ಮದಿನಾಚರಣೆ ಅಂಗವಾಗಿ ವ್ಯಸನ ಮುಕ್ತ ದಿನಾಚರಣೆ ಕಾರ್ಯಕ್ರಮವನ್ನು ಶನಿವಾರ ಹಮ್ಮಿಕೊಳ್ಳಲಾಗಿತ್ತು.

ತಹಸೀಲ್ದಾರ್‌ ಭೀಮರಾಯ ಬಿ.ರಾಮಸಮುದ್ರ ಅವರು ಅವರು ಡಾ.ಮಹಾಂತ ಶಿವಯೋಗಿಗಳ ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡಿ ಪೂಜೆ ಸಲ್ಲಿಸಿದರು. ಈ ವೇಳೆ ವ್ಯಸನ ಮುಕ್ತ ಸಮಾಜದ ನಿರ್ಮಾಣಕ್ಕಾಗಿ ಎಲ್ಲರೂ ಕೈ ಜೋಡಿಸಬೇಕು ಎಂದರು.

ಈ ವೇಳೆ ವಿವಿಧ ಇಲಾಖೆಗಳ ಅಧಿಕಾರಿ,ಸಿಬ್ಬಂದಿ ಹಾಗೂ ಸಾರ್ವಜನಿಕರು ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಪ್ರಜಾಪ್ರಭುತ್ವದ ಭದ್ರ ಅಡಿಪಾಯಕ್ಕೆ ಎಸ್‌ಐಆರ್‌ನಲ್ಲಿ ಭಾಗಿಯಾಗಿ
ವ್ಯಸನಮುಕ್ತ ಸಮಾಜಕ್ಕೆ ಯುವಕರ ಪಾತ್ರ ಮುಖ್ಯ