ನೆಲಮಂಗಲ/ದಾಬಸ್‍ಪೇಟೆ: ಸಮಾಜದ ಸುಸ್ಥಿರ ಬೆಳವಣಿಗೆ ಮಹಾಪುರುಷರ ತತ್ವಚಿಂತನೆಗಳು ಮತ್ತು ದೇಶಪ್ರೇಮಿಗಳ ತ್ಯಾಗದ ಮೇಲೆ ನಿಂತಿದೆ. ಇಂತಹ ಮೌಲ್ಯಗಳನ್ನು ವಿದ್ಯಾರ್ಥಿ ದೆಸೆಯಲ್ಲೇ ಬೆಳೆಸುವುದು ಶಿಕ್ಷಣ ಸಂಸ್ಥೆಯ ಆಶಯವಾಗಬೇಕು ಎಂದುಶ್ರೀ ಸಿದ್ದಲಿಂಗ ಸ್ವಾಮೀಜಿ ತಿಳಿಸಿದರು.
ತಂಗಡಗಿಯ ಅಡಪದ ಅಪ್ಪಣ್ಣದೇವರ ಮಠದ ಶ್ರೀ ಅನ್ನದಾನಿ ಭಾರತಿ ಸ್ವಾಮೀಜಿ ಮಾತನಾಡಿ, ಶರಣರ ತತ್ವ ಚಿಂತನೆಗಳು, ದೇಶ ಕಾಯುವ ಯೋಧರ ತ್ಯಾಗ, ಸಮಾಜ ಸೇವಕರ ಶ್ರಮ ಹಾಗೂ ಪೋಷಕರ ಮಾರ್ಗದರ್ಶನ ಸಮಾಜದ ಸುಸ್ಥಿರ ಬೆಳವಣಿಗೆಗೆ ಮುಖ್ಯ ಬುನಾದಿ. ಒಂದೇ ವೇದಿಕೆಯಲ್ಲಿ ಹಲವು ಮಹತ್ವದ ದಿನಾಚರಣೆಗಳನ್ನು ಆಚರಿಸುತ್ತಿರುವುದು ಶ್ಲಾಘನೀಯ. ಇದರಿಂದ ವಿದ್ಯಾರ್ಥಿಗಳಲ್ಲಿ ದೇಶಭಕ್ತಿ, ಕಾಯಕ ನಿಷ್ಠೆ, ಪರಿಸರ ಕಾಳಜಿ ಮತ್ತು ಮಾನವೀಯ ಮೌಲ್ಯಗಳು ರೂಪುಗೊಳ್ಳುತ್ತವೆ ಎಂದರು.
ಕಾರ್ಯಕ್ರಮದಲ್ಲಿ ವೈದ್ಯಕೀಯ ಕ್ಷೇತ್ರದಲ್ಲಿ ಸೇವೆ ಸಲ್ಲಿಸಿದ ಡಾ.ಶ್ರೀಮಂತ್, ಸಮಾಜ ಸೇವಕರಾದ ನರಸಿಂಹಯ್ಯ, ಹನುಮಂತಯ್ಯ, ಸುಧಾ, ನಾಗರಾಜು, ಸಿದ್ದಪ್ಪ, ಪುಟ್ಟವೀರಯ್ಯ, ಮೊಹಮ್ಮದ್ ಆದಿಲ್ ಹಾಗೂ ಕರುಣೇಶ್ವರಿ ಅವರನ್ನು ಮಠದ ಪೂಜ್ಯರು ಸನ್ಮಾನಿಸಿದರು.ಈ ವೇಳೆ ಮುಖ್ಯಶಿಕ್ಷಕ ಜಿ.ಎನ್.ಕೆಂಪಣ್ಣ, ಶಿಕ್ಷಕರಾದ ಅಸ್ಮತ್ ಉನ್ನೀಸಾ, ಉಷಾ, ಚೈತ್ರ, ಗಂಗಾಂಬಿಕೆ, ನಾಗರತ್ನ, ಅನಿತಾ, ಶಶಿರೇಖಾ, ಯುವರಾಜ್, ಮಂಜುನಾಥ್ ಇತರರು ಭಾಗವಹಿಸಿದ್ದರು.
ನೆಲಮಂಗಲದ ಪವಾಡ ಬಸವಣ್ಣದೇವರ ಮಠದ ಆವರಣದಲ್ಲಿ ಶ್ರೀ ಬಸವೇಶ್ವರ ಆಂಗ್ಲಪ್ರೌಢಶಾಲೆಯಲ್ಲಿ ಹಮ್ಮಿಕೊಂಡಿದ್ದ ವಿವಿಧ ಕಾರ್ಯಕ್ರಮಗಳನ್ನು ಶ್ರೀ ಸಿದ್ದಲಿಂಗ ಸ್ವಾಮೀಜಿ ಹಾಗೂ ಗಣ್ಯರು ಉದ್ಘಾಟಿಸಿದರು.