)
ಕನ್ನಡಪ್ರಭ ವಾರ್ತೆ ಬೆಂಗಳೂರು
ಪ್ರಜ್ವಲ್‌ನನ್ನು ಜೀವಂತವಾಗಿ ಬಿಟ್ಟರೆ ತಮಗೆ ಭವಿಷ್ಯದಲ್ಲಿ ಕಂಟಕವಾಗಲಿದೆ. ಹೀಗಾಗಿ ಆತನ ಕೊಂದು ಬಳಿಕ ಮೃತದೇಹವನ್ನು ರಹಸ್ಯವಾಗಿಟ್ಟು ಹಣ ಸುಲಿಗೆಗೆ ಆರೋಪಿ ಭಾಸ್ಕರ್ ರೆಡ್ಡಿ ದುರಾಲೋಚನೆ ಮಾಡಿದ್ದ. ಇದಕ್ಕೆ ಆತನ ಸ್ನೇಹಿತ ಏಳುಕೊಂಡಲ ಸಾಥ್ ಕೊಟ್ಟಿದ್ದಾನೆ ಎಂದು ಮೂಲಗಳು ಹೇಳಿವೆ.
ಪೂರ್ವಯೋಜಿತದಂತೆ ಬುಧವಾರ ಸಂಜೆ 6.45ರ ವೇಳೆ ಅಪಹರಿಸಿ ರಾತ್ರಿ 9.45ರ ಹೊತ್ತಿಗೆ ಪ್ರಜ್ವಲ್‌ನನ್ನು ಭೀಬತ್ಸವಾಗಿ ಆರೋಪಿಗಳು ಹತ್ಯೆ ಮಾಡಿದ್ದಾರೆ. ಆದರೆ ಮನೆಯಲ್ಲಿ ಮಗ ಕಾಣದೆ ಹೋದಾಗ ಆತಂಕಗೊಂಡು ಪ್ರಜ್ವಲ್‌ಗೆ ಆತನ ತಾಯಿ ಹಾಗೂ ಅಣ್ಣ ಹುಡುಕಾಟ ನಡೆಸಿದ್ದಾರೆ. ಪಟಾಕಿ ತರುವುದಾಗಿ ಹೇಳಿ ಭಾಸ್ಕರ್ ಜತೆ ಕಾರಿನಲ್ಲಿ ಪ್ರಜ್ವಲ್ ಹೋಗಿದ್ದನ್ನು ಸ್ಥಳೀಯ ವ್ಯಕ್ತಿ ಹೇಳಿದ್ದರು. ತಕ್ಷಣವೇ ರಾತ್ರಿ 9.30ಕ್ಕೆ ಭಾಸ್ಕರ್‌ಗೆ ಮೃತನ ತಾಯಿ, ಅಣ್ಣ ಹಾಗೂ ಸ್ಥಳೀಯ ವ್ಯಕ್ತಿ ಸೇರಿ ಮೂವರು ನಿರಂತರವಾಗಿ ಕರೆ ಮಾಡಿದ್ದಾರೆ. ಆದರೆ ಅವರ ಕರೆಗಳನ್ನು ಸ್ವೀಕರಿಸದೆ ತನ್ನ ಮೊಬೈಲ್ ಅನ್ನು ರೆಡ್ಡಿ ಸ್ವಿಚ್ಡ್ ಆಫ್ ಮಾಡಿದ್ದ.ಅದೇ ಹೊತ್ತಿಗೆ ಪ್ರಜ್ವಲ್ ಮೇಲೆ ಭೀಕರವಾಗಿ ಆರೋಪಿಗಳು ಹಲ್ಲೆ ನಡೆಸಿ ಕೊಲೆ ಮಾಡುತ್ತಿದ್ದರು. ಈ ಕೃತ್ಯ ಎಸಗಿದ ಬಳಿಕ ರಾತ್ರಿ 10.30ಕ್ಕೆ ಆತನ ಮೊಬೈಲ್ ಆನ್ ಆಗಿದೆ. ಕೂಡಲೇ ಆತನಿಗೆ ಮೃತನ ಕುಟುಂಬದವರಿಂದ ಕರೆಗಳು ಬಂದಿವೆ. ಆಗ ಕರೆ ಸ್ವೀಕರಿಸಿ ತನಗೇನು ಗೊತ್ತಿಲ್ಲ ಎಂದಿದ್ದಾನೆ. ಮೃತನ ತಾಯಿ ಜತೆ ಮಾತನಾಡುತ್ತಲೇ ಕಾರನ್ನು ವೇಗವಾಗಿ ಭಾಸ್ಕರ್ ಚಲಾಯಿಸುತ್ತಿದ್ದ. ಆಗ ಹೊಸಹಳ್ಳಿ ಬಳಿ ಎರಡು ಬೈಕ್‌ಗಳಿಗೆ ಕಾರು ಗುದ್ದಿಸಿದ್ದ. ಇದಾದ ನಂತರ ಸ್ಪಲ್ಪ ದೂರದಲ್ಲಿ ರಸ್ತೆಯಲ್ಲಿ ಹಂಪ್ಸ್ ನೋಡದೆ ಕಾರನ್ನು ಭಾಸ್ಕರ್ ಚಲಾಯಿಸಿದ್ದಾನೆ. ಈ ಹಂತದಲ್ಲಿ ಚಾಲಕನ ನಿಯಂತ್ರನ ತಪ್ಪಿ ಹಂಪ್ಸ್‌ನಿಂದ ಜಿಗಿದು ರಸ್ತೆ ಬದಿಯ 3 ಕಾರುಗಳಿಗೆ ಭಾಸ್ಕರ್ ಗುದ್ದಿದೆ. ಈ ಸರಣಿ ಅಪಘಾತದಿಂದ ಕೆರಳಿದ ಸ್ಥಳೀಯರು, ಭಾಸ್ಕರ್‌ನನ್ನು ಹಿಡಿದು ಥಳಿಸಿದ್ದಾರೆ. ಕಾರು ಪರಶೀಲಿಸಿದಾಗ ಮೃತದೇಹ ಪತ್ತೆಯಾಗಿದೆ ಎಂದು ಮೂಲಗಳು ವಿವರಿಸಿವೆ.
ಕುಟುಂಬಕ್ಕೆ ಅತಿವಿಶ್ವಾಸ
ಮತ್ತೊಬ್ಬ ಬಾಲನಿಗೆ ಸ್ಕೆಚ್