ವೈಜ್ಞಾನಿಕ ಪದ್ಧತಿಯಿಂದ ಉ‍ಳುಮೆ ಮಾಡಿ ಮಣ್ಣನ್ನು ಸಂರಕ್ಷಿಸಿ

KannadaprabhaNewsNetwork |  
Published : Dec 06, 2025, 02:00 AM IST
ಹಿಂದಿನ ಕಾಲದಲ್ಲಿನ ವ್ಯವಸಾಯದ ಪದ್ಧತಿಯನ್ನು ಈಗ ರೈತರು ಅಳವಡಿಸಿಕೊಳ್ಳಬೇಕು, | Kannada Prabha

ಸಾರಾಂಶ

ವೈಜ್ಞಾನಿಕ ಪದ್ಧತಿಯ ಉಳುಮೆಯನ್ನು ಅಳವಡಿಸಿಕೊಳ್ಳುವ ಮುಖಾಂತರ ರೈತರು ಮಣ್ಣಿನ ಸಂರಕ್ಷಣೆಯನ್ನು ಮಾಡಬೇಕು ಎಂದು ಕೃಷಿ ಇಲಾಖೆಯ ಜಂಟಿ ನಿರ್ದೇಶಕಿ ಸುಷ್ಮಾ ಕೆ.ಸಿ. ಹೇಳಿದರು.

ಕನ್ನಡಪ್ರಭ ವಾರ್ತೆ, ಚಾಮರಾಜನಗರ

ವೈಜ್ಞಾನಿಕ ಪದ್ಧತಿಯ ಉಳುಮೆಯನ್ನು ಅಳವಡಿಸಿಕೊಳ್ಳುವ ಮುಖಾಂತರ ರೈತರು ಮಣ್ಣಿನ ಸಂರಕ್ಷಣೆಯನ್ನು ಮಾಡಬೇಕು ಎಂದು ಕೃಷಿ ಇಲಾಖೆಯ ಜಂಟಿ ನಿರ್ದೇಶಕಿ ಸುಷ್ಮಾ ಕೆ.ಸಿ. ಹೇಳಿದರು.

ನಗರದ ಜೆಎಸ್‌ಎಸ್ ಮಹಿಳಾ ಕಾಲೇಜಿನಲ್ಲಿ ರಾಷ್ಟ್ರೀಯ ಸೇವಾ ಯೋಜನೆ, ಭೂಗೋಳ ವಿಭಾಗ ಮತ್ತು ಅರಣ್ಯ ಇಲಾಖೆ, ಚಾಮರಾಜನಗರ ಇವರ ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಂಡಿದ್ದ ವಿಶ್ವ ಮಣ್ಣಿನ ದಿನಾಚರಣೆ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು, ರಾಸಾಯನಿಕ ಮುಕ್ತವಾದ ವ್ಯವಸಾಯ ಪದ್ಧತಿ ಈ ದಿನಗಳಲ್ಲಿ ಅತ್ಯವಶ್ಯಕ ಎಂದರು.

ಜೆಎಸ್‌ಎಸ್ ಮಹಿಳಾ ಕಾಲೇಜಿನ ಭೂಗೋಳಶಾಸ್ತ್ರ ವಿಭಾಗದ ಸಹಾಯಕ ಪ್ರಾಧ್ಯಾಪಕ ಬಸವರಾಜು ಮಾತನಾಡಿ, ಮಣ್ಣುಗಳಿಗೆ ಅನುಗುಣವಾಗಿ ವ್ಯವಸಾಯ ಪದ್ಧತಿಯನ್ನು ಹೇಗೆ ಅಳವಡಿಸಿಕೋಳ್ಳಬೇಕು. ಕ್ರಮಬದ್ಧವಾದ ಮಣ್ಣಿನ ಪರೀಕ್ಷೆ ಮತ್ತು ಮಣ್ಣಿನ ಆರೋಗ್ಯ ನಿರ್ವಹಣೆ ಕುರಿತು ತಿಳಿಸಿದರು.

ಪ್ರಭಾರ ಪ್ರಾಂಶುಪಾಲ ಮಲ್ಲಿಕಾರ್ಜುನಸ್ವಾಮಿ ಎಂ. ಮಾತನಾಡಿ, ಪ್ರಸ್ತುತ ದಿನಗಳಲ್ಲಿ ಮಣ್ಣಿನಲ್ಲಿರುವ ಇಂಗಾಲ, ಸಾರಜನಕ ಮುಂತಾದ ಮೂಲಭೂತ ಅಂಶಗಳನ್ನು ಸಂರಕ್ಷಿಸುವ ಬಗ್ಗೆ ಮತ್ತು ಅದರ ನಿರ್ವಹಣೆಯ ಬಗ್ಗೆ ತಿಳಿಸಿದರು.

ಕಾರ್ಯಕ್ರಮದಲ್ಲಿ ಅರಣ್ಯ ಸಹಾಯಕ ಸಂರಕ್ಷಣಾಧಿಕಾರಿ ಮಂಜುನಾಥ್ ಆರ್ ಎನ್. ವಲಯ ಅರಣ್ಯ ಸಮರಕ್ಷನಾಧಿಕಾರಿ ಚಂದ್ರಕುಮಾರ್, ಜೆ ಎಸ್ ಎಸ್ ಕಾಲೇಜಿನ ಎನ್ ಎಸ್ ಎಸ್ ಘಟಕದ ಕಾರ್ಯಕ್ರಮಾಧಿಕಾರಿ ಮಹೇಶ್.ಪಿ, ಕಛೇರಿ ಅಧಿಕ್ಷಕ ಎಸ್ ಗುರುಮಲ್ಲಪ್ಪ, ಸಹಾಯಕ ಪ್ರಾಧ್ಯಾಪಕರಾದ ಮಹದೇವ ಪ್ರಸಾದ್ ವಿ.ಎಸ್., ಮೋಹನ್ ಬಾಬು ಎಂ.ಆರ್,ಹರ್ಷಿತ ಇತರರು ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಜೈಲಲ್ಲೂ ದರ್ಶನ್‌ಗೆ ‘ಅಭಿಮಾನಿಗಳು’ ಕಾಟ!
ನಾಳೆ ಹಲವು ಸಾಧಕರಿಗೆ ಗಾಂಧಿ ಪುರಸ್ಕಾರ ಪ್ರದಾನ