ಪಂ.ತಾರಾನಾಥರ ವೈದ್ಯಕೀಯ, ಸಾಹಿತ್ಯಿಕ ಸೇವೆ ಸ್ಮರಣೀಯ: ಸಾಹಿತಿ ಲಕ್ಷ್ಮಿ ದೇವಿ

KannadaprabhaNewsNetwork |  
Published : Oct 05, 2026, 01:30 AM IST
04ಕೆಪಿಆರ್‌ಸಿಆರ್‌ 01:  | Kannada Prabha

ಸಾರಾಂಶ

ಪಂಡಿತ ತಾರನಾಥರ ವೈದ್ಯಕೀಯ ಜ್ಞಾನ ಮತ್ತು ಸೇವೆ ಅತ್ಯಂತ ಪರಿಣಾಮಕಾರಿಯಾಗಿತ್ತು, ಈ ಭಾಗಕ್ಕೆ ಅವರ ಕೊಡುಗೆ ಸ್ಮರಣೀಯವಾಗಿದೆ ಎಂದು ಹುಬ್ಬಳ್ಳಿಯ ಸಾಹಿತ್ಯ ವಿದ್ಯಾಂಸ ಶಾಮಸುಂದರ ಬಿದರಕುಂದಿ ಅವರು ಹೇಳಿದರು.

ಕನ್ನಡಪ್ರಭ ವಾರ್ತೆ ರಾಯಚೂರು

ಪಂಡಿತ ತಾರನಾಥರ ವೈದ್ಯಕೀಯ ಜ್ಞಾನ ಮತ್ತು ಸೇವೆ ಅತ್ಯಂತ ಪರಿಣಾಮಕಾರಿಯಾಗಿತ್ತು, ಈ ಭಾಗಕ್ಕೆ ಅವರ ಕೊಡುಗೆ ಸ್ಮರಣೀಯವಾಗಿದೆ ಎಂದು ಹುಬ್ಬಳ್ಳಿಯ ಸಾಹಿತ್ಯ ವಿದ್ಯಾಂಸ ಶಾಮಸುಂದರ ಬಿದರಕುಂದಿ ಅವರು ಹೇಳಿದರು.

ಸ್ಥಳೀಯ ಕನ್ನಡ ಭವನದಲ್ಲಿ ಕಸಾಪ ಜಿಲ್ಲಾ ಹಾಗೂ ತಾಲೂಕು ಸಮಿತಿಗಳು ಮತ್ತು ‘ವಿಶ್ವ ಪ್ರಕಾಶನ’ ಇವರ ಸಂಯುಕ್ತ ಆಶ್ರಯದಲ್ಲಿ ಹಮ್ಮಿಕೊಂಡಿದ್ದ ಲಕ್ಷ್ಮೀದೇವಿ ಶಾಸ್ತ್ರಿ ಅವರು ರಚಿಸಿದ ಸಪ್ತ ಕೃತಿಗಳ( ತುಂಗಭದ್ರೆಯ ಆಯುರ್ವೇದದಿಂದ ಆರೈಕೆಗೊಂಡ ದೇಶ-ವಿದೇಶಿಯರು, ರಾಯಚೂರು ಕೋಟೆಗೆ ನರಬಲಿ ಬಾಳೆ ಸಂಗಮ್ಮ ಮತ್ತು ಬಸರೆಡ್ಡಿ ಮಲ್ಲವ್ವ, ರಾಯಚೂರಿನ ಚಿತ್ರಕಲಾ ದಿಗ್ಗಜರು, ವಚನವರಲ್ಲಿ ಚುಟುಕುಗಳು, ಲಕ್ಷ್ಮೀದೇವಿ ಶಾಸ್ತ್ರಿ ಅವರ ಕಂಠ ದಲ್ಲುಳಿದ ಜನಪದಗಳು, ಸಂಶೋಧನಾ ಕೃಷಿಕ ದುರ್ಗಾ ಜಗದೀಶ್ ಹಾಗೂ ಕರ್ನಾಟಕ ಏಕೀಕರಣ ಹೋರಾಟಗಾರರ ವ್ಯಕ್ತಿಚಿತ್ರಮಾಲೆ ಪಂಡಿತ ತಾರಾನಾಥ ) ಲೋಕಾರ್ಪಣೆ ಸಮಾ ರಂಭ ಉದ್ಘಾಟಿಸಿ ಭಾನುವಾರ ಮಾತನಾಡಿದ ಅವರು, ತಾಯಿ ಮತ್ತು ಮಗನ ಪರಿಶ್ರಮದಿಂದ ರೂಪುಗೊಂಡಿರುವ ಈ ಕೃತಿಯು ಪಂಡಿತ ತಾರಾನಾಥರ ವೈದ್ಯಕೀಯ, ಸಾಹಿತ್ಯ ಹಾಗೂ ಸಾಮಾಜಿಕ ಕೊಡುಗೆಗಳನ್ನು ಮನಮುಟ್ಟುವಂತೆ ರಚಿಸಲಾಗಿದೆ. ದೇಶ-ವಿದೇಶಗಳ ಹಿತೈಷಿಗಳು ಹಾಗೂ ರೋಗಿಗಳು ಪಂಡಿತ ತಾರಾನಾಥರ ಚಿಕಿತ್ಸೆ ಮತ್ತು ಅವರ ಮಾನವೀಯ ಗುಣಗಳನ್ನು ಕೃತಜ್ಞತೆಯಿಂದ ಸ್ಮರಿಸುತ್ತಾರೆ. ಈ ಕಾರ್ಯಕ್ರಮವು ಪಂಡಿತರ ಬದುಕು ಮತ್ತು ಸಾಧನೆಯನ್ನು ಮುಂದಿನ ಪೀಳಿಗೆಗೆ ಪರಿಚಯಿಸುವಲ್ಲಿ ಯಶಸ್ವಿಯಾಗಿದೆ‌ ಎಂದು ಹೇಳಿದರು.

ಕೃತಿಗಳನ್ನು ಲೋಕಾರ್ಪಣೆ ಮಾಡಿದ ಗದಗಿನ ಮಹಾತ್ಮ ಗಾಂಧಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ವಿಶ್ವವಿದ್ಯಾಲಯದ ಕುಲಸಚಿ ಡಾ. ಅಮರೇಶ ಯತಗಲ್ ಅವರು ಮಾತನಾಡಿ, ಇತಿಹಾಸದ ಪುಟಗಳಲ್ಲಿ ಪುರುಷರ ಸಾಧನೆಗಳನ್ನೇ ಮುನ್ನೆಲೆಗೆ ತರಲಾಗಿದ್ದು, ಅಲ್ಲಿ ಪ್ರಮುಖ ಪಾತ್ರ ವಹಿಸಿದ ಮಹಿಳೆಯರು ಹಾಗೂ ಅವರ ಕೊಡುಗೆಗಳನ್ನು ನಿರ್ಲಕ್ಷಿಸುತ್ತ ಬಂದಿರುವುದು ಇತಿಹಾಸದ ಮರುಶೋಧನೆಯಲ್ಲಿ ಬಯಲಾಗುತ್ತಿದೆ,

ಮಾನ್ವಿ ಚಿತ್ರ ಕಲಾವಿದರಾದ ವಾಜಿದ್ ಸಾಜಿದ್, ಸರ್ಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜಿನ ಪ್ರಾಂಶುಪಾಲ ಡಾ.ಸುಗುಣ ಬಸವರಾಜ್ ಅವರು ಹಾಗೂ ಸಪ್ತ ಕೃತಿಗಳ ಕರ್ತೃಗಳಾದ ಲಕ್ಷ್ಮೀದೇವಿ ಶಾಸ್ತ್ರೀಗಳು ಮಾತನಾಡಿದರು. ಅಧ್ಯಕ್ಷತೆಯನ್ನು ಕಸಾಪ ಜಿಲ್ಲಾಧ್ಯಕ್ಷ ರಂಗಣ್ಣ ಪಾಟೀಲ ಅಳ್ಳುಂಡಿ ವಹಿಸಿದ್ದರು.

ಜಿಲ್ಲಾ ಮ್ಯಾದಾರ ಲಲಿತಕಲಾ ಪ್ರತಿಷ್ಠಾನದ ಅಧ್ಯಕ್ಷರಾದ ಎಚ್. ಎಚ್. ಮ್ಯಾದರ್, ಕಸಾಪ ತಾಲೂಕಾಧ್ಯಕ್ಷ ಡಾ.ಬಿ.ವಿಜಯ ರಾಜೇಂದ್ರ, ಗೌರವ ಕಾರ್ಯದರ್ಶಿ ರಾವುತರಾವ್ ಬರೂರ ಉಪಸ್ಥಿತರಿದ್ದರು. ಸಾಹಿತಿಗಳಾದ ವಿ.ಎನ್.ಅಕ್ಕಿ, ಅಯ್ಯಪ್ಪಯ್ಯ ಹುಡಾ, ಬಾಬು ಭಂಡಾರಿಗಲ್, ನಾಗಪ್ಪ ಹೊರಪ್ಯಾಟಿ, ದಾನಮ್ಮ ಸುಭಾಷ್ ಚಂದ್ರ, ಬಶೀರ ಅಹ್ಮದ್ ಹೊಸಮನಿ,ಈರಣ್ಣ ಬೆಂಗಾಲಿ, ಕಸಾಪ ಜಿಲ್ಲಾ ಮತ್ತು ತಾಲೂಕು ಸಮಿತಿಗಳ ಎಲ್ಲ ಪದಾಧಿಕಾರಿಗಳು, ಸಾಹಿತಿಗಳು, ಲಕ್ಷ್ಮಿ ದೇವಿ ಶಾಸ್ತ್ರಿ ಅವರ ಕುಟುಂಬದ ಸದಸ್ಯರು ಸೇರಿದಂತೆ ಮತ್ತಿತರರು ಭಾಗವಹಿಸಿದ್ದರು.

ಬೆಂಗಳೂರಿನ ಇನ್ಫೋಸಿಸ್ ಹಿರಿಯ ಅಭಿಯಂತರ ವಿಶ್ವನಾಥ ಶಾಸ್ತ್ರಿ ಪ್ರಾಸ್ತಾವಿಕ ನುಡಿಗಳನ್ನಾಡಿದರು. ಕಲಬುರಗಿಯ ಹಿರಿಯ ಸಾಹಿತಿ ಹಾಗೂ ವಿಮರ್ಶಕ ಡಾ. ಗವಿಸಿದ್ದಪ್ಪ ಎಚ್. ಪಾಟೀಲ್ ಅವರು ಕಾರ್ಯಕ್ರಮ ನಿರ್ವಹಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ನಾನೆಂದಿಗೂ ಮರೆಯದ ನಾಯಕ ಸಿದ್ದರಾಮಯ್ಯ: ಶಾಸಕ ಕೃಷ್ಣಮೂರ್ತಿ
ಚಿರತೆ ದಾಳಿಗೆ ಕರು ಬಲಿ: ಗ್ರಾಮಸ್ಥರಲ್ಲಿ ಆತಂಕ