ಮಕ್ಕಳ ದಾಖಲಾತಿ ಹೆಚ್ಚಳಕ್ಕೆ ಪಿಎಂಶ್ರೀ ಶಾಲೆ ಅನುಕೂಲ

KannadaprabhaNewsNetwork |  
Published : Jul 21, 2024, 01:18 AM IST
ಪೋಟೊ ಶಿರ್ಷಕೆ೧೮ಎಚ್‌ಕೆಆರ್‌೦೨ | Kannada Prabha

ಸಾರಾಂಶ

ಸರ್ಕಾರಿ ಶಾಲೆಗಳಲ್ಲಿ ಮಗುವಿನ ಶಿಕ್ಷಣಕ್ಕೆ ಪೂರಕವಾದ ಎಲ್ಲ ಸೌಲಭ್ಯಗಳನ್ನು ದೊರಕಿಸಿ ದಾಖಲಾತಿ ಹೆಚ್ಚಳಕ್ಕೆ ಪಿಎಂಶ್ರೀ ಶಾಲೆ ಅನುಕೂಲವಾಗಲಿದೆ ಎಂದು ಶಾಸಕ ಯು.ಬಿ. ಬಣಕಾರ ಹೇಳಿದರು.

ಹಿರೇಕೆರೂರು: ಸರ್ಕಾರಿ ಶಾಲೆಗಳಲ್ಲಿ ಮಗುವಿನ ಶಿಕ್ಷಣಕ್ಕೆ ಪೂರಕವಾದ ಎಲ್ಲ ಸೌಲಭ್ಯಗಳನ್ನು ದೊರಕಿಸಿ ದಾಖಲಾತಿ ಹೆಚ್ಚಳಕ್ಕೆ ಪಿಎಂಶ್ರೀ ಶಾಲೆ ಅನುಕೂಲವಾಗಲಿದೆ ಎಂದು ಶಾಸಕ ಯು.ಬಿ. ಬಣಕಾರ ಹೇಳಿದರು.

ತಾಲೂಕಿನ ವರಹ ಗ್ರಾಮದ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಪಿಎಂಶ್ರೀ ಶಾಲೆ ಹಾಗೂ ಎಲ್‌ಕೆಜಿ ತರಗತಿಗಳನ್ನು ಉದ್ಘಾಟಿಸಿ ಮಾತನಾಡಿದರು. ಪಿಎಂಶ್ರೀ ಅತ್ಯುತ್ತಮ ಕಾರ್ಯಕ್ರಮ, ಖಾಸಗಿ ಶಾಲೆಗೆ ಕಡಿಮೆ ಇಲ್ಲದಂತೆ ಮೂಲಸೌಕರ್ಯ ಹೆಚ್ಚಿಸುವುದು ಈ ಯೋಜನೆಯ ಗುರಿಯಾಗಿದ್ದು, ಇದರ ಸದುಪಯೋಗ ಮಾಡಿಕೊಳ್ಳಬೇಕು ಎಂದರು. ಶಾಲೆಯ ಮತ್ತಷ್ಟು ಅಭಿವೃದ್ಧಿಗೆ ಪ್ರಾಮಾಣಿಕವಾಗಿ ಪ್ರಯತ್ನಿಸುತ್ತೇನೆ ಎಂದು ಭರವಸೆ ನೀಡಿದರು.

ಜಿಲ್ಲಾ ಉಪಯೋಜನಾ ಸಮನ್ವಯಾಧಿಕಾರಿ ಲತಾಮಣಿ ಮಾತನಾಡಿ, ಜಿಲ್ಲೆಯಲ್ಲಿ ೧೫ ಪಿಎಂಶ್ರೀ ಶಾಲೆಗಳಿವೆ. ಈ ಯೋಜನೆಯಲ್ಲಿ ಶಾಲೆಗಳು ಶೈಕ್ಷಣಿಕವಾಗಿ ಮತ್ತು ಭೌತಿಕವಾಗಿ ಸಮಗ್ರ ಅಭಿವೃದ್ಧಿ ಮಾಡಿಕೊಳ್ಳಲು ಅವಕಾಶವಿದೆ. ಪಿಎಂಶ್ರೀ ಜಿಎಚ್‌ಪಿಎಸ್ ವರಹ ಶಾಲೆಗೆ ₹೫೭ ಲಕ್ಷ ಅನುದಾನಕ್ಕೆ ಅನುಮೋದನೆ ದೊರೆತಿದೆ ಎಂದರು.

ಪಿಎಂಶ್ರೀ ಯೋಜನೆಯಲ್ಲಿ ಕಿಚನ್ ಗಾರ್ಡನ್ ನಿರ್ಮಾಣಕ್ಕಾಗಿ ಟೊಮೇಟೊ ಸಸಿಯನ್ನು ದೇಣಿಗೆಯಾಗಿ ನೀಡಿದರು.

ಚನ್ನಳ್ಳಿ ಗ್ರಾಪಂ ಅಧ್ಯಕ್ಷೆ ಕುಸುಮಾ ಮಾಗನೂರು ಉಪಾಧ್ಯಕ್ಷೆ ಶಾರದಾ ಭೋಗೇರ, ತಾಪಂ ಮಾಜಿ ಅಧ್ಯಕ್ಷ ಶಿವಪ್ಪ ಗಡಿಯಣ್ಣನವರ, ಬಿಇಒ ಎನ್. ಶ್ರೀಧರ, ಪಿಎಂ ಪೋಷಣ್ ಅಭಿಯಾನದ ಸಹಾಯಕ ನಿರ್ದೇಶಕ ಮಾರುತೆಪ್ಪ ಕೆ.ಎಚ್., ಗದಿಗೆಪ್ಪ ನಾಗಣ್ಣನವರ, ಕರಬಸಪ್ಪ ಗಡಿಯಣ್ಣನವರ, ಶ್ವೇತಾ ಮುತ್ತಳ್ಳಿ, ಸುಧಾ ಶಿರಗಂಬಿ ಹನುಮಂತಪ್ಪ ನಾಗಣ್ಣನವರ, ಸಿದ್ದರಾಮಪ್ಪ ಅಜಗೊಂಡ್ರ, ಕೆಎಸ್ ಪುಟ್ಟಪ್ಪಗೌಡ್ರ, ಸಂತೋಷ್ ಚಲವಾದಿ, ಹೇಮಪ್ಪ ಚಿಕ್ಕಣ್ಣನವರ, ದೇವರಾಜ್ ನಾಗಣ್ಣನವರ, ರವಿಕುಮಾರ್ ಸೊಪ್ಪಿನ್, ಪ್ರಶಾಂತ್ ಕಾಟೇನಹಳ್ಳಿ, ಲೋಕೇಶ್ ಸಿಂಪಿ, ಲಕ್ಷ್ಮಣ ಮಡಿವಾಳರ, ಮುಖ್ಯಶಿಕ್ಷಕ ಎಂ.ವಿ. ಕಮ್ಮಾರ ಸೇರಿದಂತೆ ಎಸ್‌ಡಿಎಂಸಿ ಸರ್ವ ಸದಸ್ಯರು ಶಾಲಾ ಸಿಬ್ಬಂದಿ ಹಾಗೂ ಗ್ರಾಮಸ್ಥರಿದ್ದರು.

PREV

Recommended Stories

ಶಾಸಕ ಮುನಿರತ್ನ ಪಟಾಕಿ ಕಚೇರಿಗೆ ಪೊಲೀಸರಿಂದ ಬೀಗ
ದೀಪಾವಳಿ ವೇಳೆ ಸಂಭಾವ್ಯ ಅವಘಡ ತಡೆಯಲು ಮಿಂಟೋ ಕಣ್ಣಿನ ಆಸ್ಪತ್ರೆ ಸಜ್ಜು