ಹಿಂದೂ ಕಾರ್ಯಕರ್ತರ ಮೇಲೆ ಕೇಸ್ ಹಾಕುತ್ತಿರುವ ಪೊಲೀಸರು: ಯತ್ನಾಳ್

KannadaprabhaNewsNetwork |  
Published : Sep 20, 2025, 01:01 AM IST
ಹಾವೇರಿಯ ಎಂ.ಎಂ. ವೃತ್ತದಲ್ಲಿ ಆಯೋಜಿಸಿದ್ದ ಸಾರ್ವಜನಿಕ ಸಭೆಯಲ್ಲಿ ವಿಜಯಪುರ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಮಾತನಾಡಿದರು. | Kannada Prabha

ಸಾರಾಂಶ

ಗಣಪತಿ ಡಿಜೆ ಹಚ್ಚಿದಕ್ಕೆ, ಸಭೆಗಳಲ್ಲಿ ಪ್ರಚೋದನಕಾರಿ ಹೇಳಿಕೆ ನೀಡಿದ್ದಾರೆ ಎಂದು ಪೊಲೀಸರು ಎಫ್‌ಐಆರ್ ದಾಖಲು ಮಾಡುತ್ತಾರೆ. ಬರುವ 2028ಕ್ಕೆ ರಾಜ್ಯದಲ್ಲಿ ಹಿಂದೂಗಳ ಪರವಾದ ಜೆಸಿಬಿ ಪಕ್ಷ ಅಧಿಕಾರಕ್ಕೆ ಬರುತ್ತದೆ. ಹಿಂದೂಗಳ ಮೇಲೆ ದಾಖಲಾದ ಪ್ರಕರಣ ವಾಪಸ್ ಪಡೆಯೋದೇ ಮೊದಲ ಕೆಲಸ ಎಂದು ವಿಜಯಪುರ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ತಿಳಿಸಿದರು.

ಹಾವೇರಿ: ಪೊಲೀಸರು ಹಿಂದೂ ಕಾರ್ಯಕರ್ತರ ಮೇಲೆ ಸ್ವಯಂ ಆಗಿ ಪ್ರಕರಣ ದಾಖಲಿಸುತ್ತಾರೆ. ಯಾರನ್ನೋ ಖುಷಿ ಪಡಿಸಲಿಕ್ಕೆ ಅಧಿಕಾರಿಗಳು ಕೆಲಸ ಮಾಡಬಾರದು ಎಂದು ವಿಜಯಪುರ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಆಗ್ರಹಿಸಿದರು.

ಗುರುವಾರ ರಾತ್ರಿ ನಗರದ ಎಂ.ಎಂ. ವೃತ್ತದಲ್ಲಿ ಹಾವೇರಿ ಹಿಂದೂ ಮಹಾ ಗಣಪತಿ ಗಜಾನನ ಯುವಕ ಮಂಡಳಿ ವತಿಯಿಂದ ಆಯೋಜಿಸಿದ್ದ ಸಾರ್ವಜನಿಕ ಸಭೆಯಲ್ಲಿ ಅವರು ಮಾತನಾಡಿದರು.

ಗಣಪತಿ ಡಿಜೆ ಹಚ್ಚಿದಕ್ಕೆ, ಸಭೆಗಳಲ್ಲಿ ಪ್ರಚೋದನಕಾರಿ ಹೇಳಿಕೆ ನೀಡಿದ್ದಾರೆ ಎಂದು ಪೊಲೀಸರು ಎಫ್‌ಐಆರ್ ದಾಖಲು ಮಾಡುತ್ತಾರೆ. ಬರುವ 2028ಕ್ಕೆ ರಾಜ್ಯದಲ್ಲಿ ಹಿಂದೂಗಳ ಪರವಾದ ಜೆಸಿಬಿ ಪಕ್ಷ ಅಧಿಕಾರಕ್ಕೆ ಬರುತ್ತದೆ. ಹಿಂದೂಗಳ ಮೇಲೆ ದಾಖಲಾದ ಪ್ರಕರಣ ವಾಪಸ್ ಪಡೆಯೋದೇ ಮೊದಲ ಕೆಲಸ ಎಂದರು.

ಸನಾತನ ಧರ್ಮದಲ್ಲಿ ಮೂರ್ತಿ ಪೂಜೆ ಮಾಡುವ ಅಧಿಕಾರ ದಲಿತ ಮಹಿಳೆಯರಿಗೂ ಇದೆ ಎಂದು ನಾನು ಹೇಳಿಕೆ ನೀಡಿದ್ದರೆ, ನನ್ನ ಹೇಳಿಕೆಯನ್ನು ಕೆಲವು ಶಾಸಕರು ತಿರುಚಿದ್ದಾರೆ. ಅದನ್ನು ನ್ಯಾಯಾಧೀಶರ ಮುಂದೆ ತೋರಿಸಿದಾಗ ಸುಮ್ಮನಾದರು ಎಂದು ಹೇಳಿದರು.

ಈಗಿನ ಕಾಲದಲ್ಲಿ ಭಾರತ, ಭಾರತ ಆಗಿ ಉಳಿದಿಲ್ಲ. ಅಂಬೇಡ್ಕರ್ ಸಂವಿಧಾನದಂತೆ ಭಾರತ ನಡೆಯಬೇಕು. ದೇವೇಗೌಡ ಅವರು ಸಿದ್ದರಾಮಯ್ಯ ಅವರನ್ನು ಉಚ್ಚಾಟನೆ ಮಾಡಿದ್ದಕ್ಕೆ ಸಿದ್ದು ಸಿಎಂ ಆಗಿದ್ದಾರೆ. ಅದೇ ರೀತಿ ನನ್ನನ್ನು ಉಚ್ಚಾಟನೆ ಮಾಡಿದ್ದಾರೆ. 2028ಕ್ಕೆ ನಾನು ಸಿಎಂ ಆಗುತ್ತೇನೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಕಾರ್ಯಕ್ರಮದಲ್ಲಿ ವಕೀಲ ಎಸ್.ಆರ್. ಹೆಗಡೆ, ವರುಣ ಆನವಟ್ಟಿ, ದೀಪಕ್ ಮಡಿವಾಳರ, ಅಭಿಷೇಕ ಆನವಟ್ಟಿ, ಸಿದ್ದಪ್ಪ ಕುರಿ ಇತರರು ಇದ್ದರು.ಅಕ್ರಮ ಮರಳುಗಾರಿಕೆ ಮೇಲೆ ದಿಢೀರ್‌ ದಾಳಿ

ಗುತ್ತಲ: ಸಮೀಪದ ಹಾವನೂರ ಮತ್ತು ಹರಳಹಳ್ಳಿ ಗ್ರಾಮಗಳ ತುಂಗಭದ್ರಾ ನದಿಯ ದಡದಲ್ಲಿ ಅಕ್ರಮ ಮರಳು ಗಣಿಗಾರಿಕೆಯ ಮೇಲೆ ಗಣಿ ಮತ್ತು ವಿಜ್ಞಾನ ಇಲಾಖೆಯ ಅಧಿಕಾರಿಗಳು ಗುರುವಾರ ದಿಢೀರ್ ದಾಳಿ ನಡೆಸಿ ಹಾವನೂರ ಗ್ರಾಮದಲ್ಲಿ 3 ಕಬ್ಬಿಣದ ತೆಪ್ಪಗಳನ್ನು ವಶಪಡಿಸಿಕೊಂಡಿದ್ದಾರೆ.ಹರಳಹಳ್ಳಿ ಗ್ರಾಮದ ನದಿಯ ದಡದಲ್ಲಿ 2 ಬಿದಿರಿನ ತೆಪ್ಪಗಳನ್ನು ಜೆಸಿಬಿ ಸಹಾಯದಿಂದ ನಾಶಪಡಿಸಿದ್ದಾರೆ. ಅಂದಾಜು ₹68 ಸಾವಿರ ಮೊತ್ತದ 80 ಮೆಟ್ರಿಕ್ ಟನ್‌ನಷ್ಟು ಮರಳು ವಶಪಡಿಸಿಕೊಂಡಿದ್ದಾರೆ.ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಹಿರಿಯ ಭೂ ವಿಜ್ಞಾನಿ ನವೀನ ಪಿ.ಎಸ್. ಅವರ ನೇತೃತ್ವದಲ್ಲಿ ದಾಳಿ ಮಾಡಲಾಗಿದೆ ಎಂದು ತಿಳಿದುಬಂದಿದೆ. ಹಾವನೂರ, ಹರಳಹಳ್ಳಿ, ಮೇವುಂಡಿ ಮತ್ತು ತೇರದಹಳ್ಳಿ ಗ್ರಾಮಗಳಲ್ಲಿ ನಿರಂತರವಾಗಿ ರಾತ್ರೋರಾತ್ರಿ ಕೆಲ ಇಲಾಖೆಯ ಅಧಿಕಾರಿಗಳ ಸಹಕಾರದಿಂದ ಅಕ್ರಮ ಮರಳು ಗಣಿಗಾರಿಕೆ ನಡೆಯುತ್ತಿದೆ ಎಂದು ತಿಳಿದುಬಂದಿದ್ದು, ಮುಂದಿನ ದಿನಗಳಲ್ಲಿ ನಿರಂತರವಾಗಿ ದಾಳಿ ಮಾಡಲಾಗುವುದೆಂದು ಭೂ ವಿಜ್ಞಾನಿ ಶಬ್ಬಿರಅಹ್ಮದ ದಿಡಗೂರ ಕನ್ನಡಪ್ರಭಕ್ಕೆ ತಿಳಿಸಿದ್ದಾರೆ.

ಅಕ್ರಮ ಗಣಿಗಾರಿಕೆ ನಡೆಸುತ್ತಿದ್ದ ಹಾವನೂರ ಗ್ರಾಮದ ಚಾಂದಸಾಬ ಘಾಟೀನ್ ಎಂಬವರ ಮೇಲೆ ಗುತ್ತಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.ಕಾರ್ಯಾಚರಣೆಯಲ್ಲಿ ಭೂವಿಜ್ಞಾನಿ ಅವಿನಾಶ ಎಸ್., ಖನಿಜ ರಕ್ಷಣಾ ಪಡೆಯ ರಮೇಶ ಹುಲ್ಲೂರ, ಎಎಸ್‌ಐ ಎಸ್.ಎಂ. ಸಾಸರವಾಡ ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ನೀರಿನಲ್ಲಿ ಕಾಳು ಹಾಕಿ ಕಲಬೆರಿಕೆ ಪತ್ತೆ ಮಾಡಿ
ಭಾಷಣ ಮಾಡಿಕೊಂಡು ಹೋದವನಲ್ಲ, ಪಕ್ಷದ ಎಲ್ಲಾ ಕೆಲ್ಸ ಮಾಡಿದ್ದೇನೆ: ಡಿಕೆಶಿ