ದಕ್ಷತೆ ಮತ್ತು ಶಿಸ್ತಿಗೆ ಪೊಲೀಸ್ ಇಲಾಖೆ ಮಾದರಿ: ನ್ಯಾ. ಪರಮೇಶ್ವರ ಪ್ರಸನ್ನ

KannadaprabhaNewsNetwork |  
Published : Nov 25, 2025, 02:45 AM IST
ನ್ಯಾಯಾಧೀಶ ಪರಮೇಶ್ವರ ಪ್ರಸನ್ನ ಬಿ. ಉದ್ಘಾಟಿಸಿದರು  | Kannada Prabha

ಸಾರಾಂಶ

ಪೊಲೀಸ್ ಇಲಾಖೆಯು ದಕ್ಷತೆ, ಶಿಸ್ತು ಮತ್ತು ಪ್ರಾಮಾಣಿಕತೆಗೆ ಮಾದರಿಯಾಗಿದೆ.

ಕನ್ನಡಪ್ರಭ ವಾರ್ತೆ ಕಾರವಾರಪೊಲೀಸ್ ಇಲಾಖೆಯು ದಕ್ಷತೆ, ಶಿಸ್ತು ಮತ್ತು ಪ್ರಾಮಾಣಿಕತೆಗೆ ಮಾದರಿಯಾಗಿದ್ದು, ಪೊಲೀಸರು ರಾತ್ರಿ ಮತ್ತು ಹಗಲು ನಿರಂತರವಾಗಿ ಸಾರ್ವಜನಿಕರ ರಕ್ಷಣೆಗೆ ಕಾರ್ಯ ನಿರ್ವಹಿಸುತ್ತಿದ್ದು, ಇಲಾಖೆಯ ಗೌರವ ಮತ್ತು ಕೀರ್ತಿ ಮತ್ತಷ್ಟು ಹೆಚ್ಚಿಸುವ ರೀತಿಯಲ್ಲಿ ಪೊಲೀಸರು ಕರ್ತವ್ಯ ನಿರ್ವಹಿಸಬೇಕು ಎಂದು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಪರಮೇಶ್ವರ ಪ್ರಸನ್ನ ಬಿ. ಹೇಳಿದರು.

ಕಾರವಾರದ ಪೊಲೀಸ್ ಕವಾಯತು ಮೈದಾನದಲ್ಲಿ ಜಿಲ್ಲಾ ಪೊಲೀಸ್ ಇಲಾಖೆಯಿಂದ ನಡೆದ ಜಿಲ್ಲಾ ಪೊಲೀಸ್ ವಾರ್ಷಿಕ ಕ್ರೀಡಾಕೂಟ ಉದ್ಘಾಟಿಸಿ ಮಾತನಾಡಿದರು.ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ದೀಪನ್ ಎಂ.ಎನ್. ಸ್ವಾಗತಿಸಿದರು. ಹೆಚ್ಚುವರಿ ಪೊಲೀಸ್ ಅಧಿಕಾರಿ ಕೃಷ್ಣಮೂರ್ತಿ ವಂದಿಸಿದರು. ಕೋಸ್ಟ್ ಗಾರ್ಡ್ ಕಮಾಂಡೆಂಟ್ ಕಿರಣ್ ಕುಮಾರ್ ಸಿನ್ಹಾ, ಹೆಚ್ಚುವರಿ ಪೊಲೀಸ್ ಅಧಿಕಾರಿ ಜಗದೀಶ್ ಇದ್ದರು.

ಕ್ರೀಡಾಕೂಟದಲ್ಲಿ ಪೊಲೀಸ್ ಸಿಬ್ಬಂದಿಯಿಂದ ಆಕರ್ಷಕ ಪಥ ಸಂಚಲನ ನಡೆಯಿತು. ಜಿಲ್ಲಾ ಸಶಸ್ತ್ರ ಮೀಸಲು ಪಡೆ, ಕಾರವಾರ, ಶಿರಸಿ, ಭಟ್ಕಳ, ದಾಂಡೇಲಿ ಉಪ ವಿಭಾಗ ಹಾಗೂ ಮಹಿಳಾ ಪೊಲೀಸ್ ತಂಡದ 150ಕ್ಕೂ ಅಧಿಕ ಕ್ರೀಡಾಪಟುಗಳು ಭಾಗವಹಿಸಿದ್ದರು. ಸಶಸ್ತ್ರ ಮೀಸಲು ಪಡೆಯ ಇನ್‌ಸ್ಪೆಕ್ಟರ್ ಕೋಟ್ರೇಶ್ ಕ್ರೀಡಾಕೂಟದ ಪ್ರಮಾಣ ವಚನ ಬೋಧಿಸಿದರು. ಕಳೆದ ಬಾರಿಯ ಕ್ರೀಡಾಕೂಟದ ಚಾಂಪಿಯನ್ ನಾಗರಾಜ್ ಕ್ರೀಡಾ ಜ್ಯೋತಿ ಬೆಳಗಿಸಿದರು.ಮಾನಸಿಕ ಅಸಮತೋಲನ: ದಂತ ವೈದ್ಯ ಆತ್ಮಹತ್ಯೆ;

ಮಾನಸಿಕವಾಗಿ ಅಸಮತೋಲನಗೊಂಡಿದ್ದ ಕುಮಟಾ ಪಟ್ಟಣದ ಹೆಸರಾಂತ ದಂತ ವೈದ್ಯರೊಬ್ಬರು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಪಟ್ಟಣದ ಹೊಸಹೆರವಟ್ಟಾದಲ್ಲಿ ಭಾನುವಾರ ಸಂಭವಿಸಿದೆ. ಡಾ. ರವಿ ವಿಜಯ ಉಪಾಧ್ಯ(೪೬) ಆತ್ಮಹತ್ಯೆ ಮಾಡಿಕೊಂಡವರು.ಈ ಕುರಿತು ಮೃತ ಡಾ. ರವಿ ಉಪಾಧ್ಯ ಅವರ ಭಾವ ಡಾ. ಪ್ರಕಾಶ ಪಂಡಿತ ನೀಡಿದ ದೂರಿನಂತೆ ಕುಮಟಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪಟ್ಟಣದ ನೆಲ್ಲಿಕೇರಿ ಹಳೆ ಬಸ್ ನಿಲ್ದಾಣದ ಸನಿಹದಲ್ಲಿ ದಂತ ವೈದ್ಯರಾಗಿ ಕ್ಲಿನಿಕ್ ನಡೆಸುತ್ತಿದ್ದ ಮೂಲತಃ ಹೆಗಡೆಯ ಮೇಲಿನಕೇರಿಯ ಹಾಗೂ ಹಾಲಿ ಹೊಸಹೆರವಟ್ಟಾದ ನಿವಾಸಿ ಡಾ. ರವಿ ಉಪಾಧ್ಯ ಕಳೆದ ೧೦ ತಿಂಗಳಿಂದ ಮಾನಸಿಕ ಅಸಮತೋಲನದಿಂದ ಬಳಲುತ್ತಿದ್ದು ಶಿವಮೊಗ್ಗದ ಆಸ್ಪತ್ರೆಯ ಮಾನಸಿಕ ತಜ್ಞರಿಂದ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದರು. ಭಾನುವಾರ ಮನೆಯಲ್ಲಿ ಯಾರೂ ಇಲ್ಲದ ವೇಳೆ ಬೆಡ್‌ರೂಮ್‌ನ ಸ್ಲಾಪ್‌ನ ಕಬ್ಬಿಣದ ಹುಕ್‌ಗೆ ಇಸ್ತ್ರಿಪೆಟ್ಟಿಗೆ ವೈರಿನಿಂದ ಕಟ್ಟಿ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

PREV

Recommended Stories

ಧರ್ಮಸ್ಥಳ ಗ್ರಾಮದಲ್ಲಿ ಶವ ಬಗ್ಗೆ ಬುರುಡೆ ಬಿಟ್ಟ ಚಿನ್ನಯ್ಯಗೆ ಬೇಲ್
ಕೈ ರೆಬೆಲ್ಸ್‌ ಜತೆ ಸೇರಿ ನಾವು ಸರ್ಕಾರ ಮಾಡಲ್ಲ : ಅಶೋಕ್‌