ಶಿಗ್ಗಾಂವಿ: ವೀರ ಯೋಧ ಪೊಲೀಸರ ಸ್ಮರಣೆ ಮುಖ್ಯವಾಗಿದ್ದು, ಅವರ ದೇಶಾಭಿಮಾನ, ಧೈರ್ಯ, ಸಾಹಸ ಹಾಗೂ ಕಾಯಕ ನಿಷ್ಠೆ ಶ್ರೇಷ್ಠವಾದುದು ಎಂದು ಗಂಗೆಭಾವಿ ಕೆಎಸ್‌ಆರ್‌ಪಿ 10ನೇ ಪಡೆ ಕಮಾಂಡಂಟ್ ಎನ್.ಬಿ. ಮೆಳ್ಳಾಗಟ್ಟಿ ಹೇಳಿದರು.
ಕೆಎಸ್‌ಆರ್‌ಪಿ ಪಡೆಯ ಪೊಲೀಸರು ಶ್ರಮವಹಿಸಿ ಕೆಲಸ ಮಾಡುತ್ತಿದ್ದಾರೆ. ಹೀಗಾಗಿ ಅವರ ಸೇವೆ ನಿಜಕ್ಕೂ ಶ್ಲಾಘನೀಯ. ಗಲಭೆ, ವ್ಯಾಜ್ಯ ಹಾಗೂ ಗಲಾಟೆಗಳನ್ನು ತಡೆಯುವ ಮೂಲಕ ಸಮಾಜದ ಸುವ್ಯವಸ್ಥೆಗೆ ಸಂರಕ್ಷಣಾ ಕಾರ್ಯದಲ್ಲಿ ನಿರತರಾಗುತ್ತಿದ್ದಾರೆ. ಲಡಾಖನ್ ಹಾಟ್ ಸ್ಪಿಂಗ್ಸ್‌ನಲ್ಲಿ ಚೀನಾ ಸೈನಿಕರು ದಿಢೀರ್ ಭಾರತೀಯ ಸೈನಿಕರ ಮೇಲೆ ದಾಳಿ ಮಾಡಿ ಮೋಸ ಮಾಡುತ್ತಾರೆ. ಅಂತಹ ಸಂದರ್ಭದಲ್ಲಿ ಹುತಾತ್ಮರಾದವರನ್ನು ಸ್ಮರಿಸುವುದು ನಮ್ಮೆಲ್ಲರ ಕರ್ತವ್ಯವಾಗಿದೆ ಎಂದರು.
ಡೆಪ್ಯೂಟಿ ಕಮಾಂಡಂಟ್ ಮಂಜಪ್ಪ ಕೋಟಿಹಾಳ ಮಾತನಾಡಿದರು. ಸಹಾಯಕ ಕಮಾಂಡಂಟ್‌ಗಳಾದ ದಾವಲಸಾಬ ಯಲಿಗಾರ, ಸುಲೇಮಾನ ಹಂಚಿಮನಿ, ಪೊಲೀಸ್ ಅಧಿಕಾರಿಗಳಾದ ಸಂತೋಷ ವಸ್ತ್ರದ, ಹನುಮೇಶ ಜಿ., ರಾಜೇಂದ್ರ ಶಿರಗುಪ್ಪಿ ಇದ್ದರು.