- ಸಾರ್ವಜನಿಕರಲ್ಲಿ ಭಯಮುಕ್ತ ವಾತಾವರಣ ನಿರ್ಮಾಣ ಉದ್ದೇಶ- - - ದಾವಣಗೆರೆ: ನಗರದಲ್ಲಿ ಸೆ.15ರ ಭಾನುವಾರ ನಡೆಯಲಿರುವ ವಿನೋಬ ನಗರ 2ನೇ ಮುಖ್ಯ ರಸ್ತೆಯಲ್ಲಿ ಪ್ರತಿಷ್ಠಾಪನೆ ಮಾಡಿರುವ ಗಣೇಶ ವಿಸರ್ಜನೆ ಮೆರವಣಿಗೆ ಹಾಗೂ ಸೆ.16ರಂದು ನಡೆಯಲಿರುವ ಈದ್ ಮಿಲಾದ್ ಹಿನ್ನೆಲೆಯಲ್ಲಿ ನಗರದಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಕಾಪಾಡುವ ಹಾಗೂ ಸಾರ್ವಜನಿಕರಲ್ಲಿ ಭಯಮುಕ್ತ ವಾತಾವರಣ ನಿರ್ಮಾಣ ದೃಷ್ಠಿಯಿಂದ ಶನಿವಾರ ಪೊಲೀಸ್ ಅಧೀಕ್ಷಕರಾದ ಉಮಾ ಪ್ರಶಾಂತ್ ನೇತೃತ್ವದಲ್ಲಿ ‘ಪೊಲೀಸ್ ಪಥ ಸಂಚಲನ’ ನಡೆಯಿತು.
ಈ ಸಂದರ್ಭ ಹೆಚ್ಚುವರಿ ಪೊಲೀಸ್ ಅಧೀಕ್ಷಕರಾದ ವಿಜಯಕುಮಾರ ಎಂ. ಸಂತೋಷ, ನಗರ ಡಿವೈಎಸ್‌ಪಿ ಮಲ್ಲೇಶ್ ದೊಡ್ಮನಿ, ಪೊಲೀಸ್ ನಿರೀಕ್ಷಕರಾದ ಗುರುಬಸವರಾಜ, ನೆಲವಾಗಲು ಮಂಜುನಾಥ, ಅಶ್ವಿನ್ ಕುಮಾರ, ಸುನೀಲ್ ಕುಮಾರ್, ನೂರ್ ಅಹಮ್ಮದ್, ಪ್ರಭಾವತಿ, ಮಲ್ಲಮ್ಮ ಚೌಬೆ, ಪೊಲೀಸ್ ಅಧಿಕಾರಿ ಸಿಬ್ಬಂದಿ ಉಪಸ್ಥಿತರಿದ್ದರು.
- - - -14ಕೆಡಿವಿಜಿ38, 39ಃ:ದಾವಣಗೆರೆಯಲ್ಲಿ ಗಣೇಶ ವಿಸರ್ಜನೆ, ಈದ್ ಮಿಲಾದ್ ಮೆರವಣಿಗೆ ಹಿನ್ನಲೆ ಶನಿವಾರ ಎಸ್‌ಪಿ ಉಮಾ ಪ್ರಶಾಂತ್ ನೇತೃತ್ವದಲ್ಲಿ ಅಧಿಕಾರಿಗಳು ಪಥ ಸಂಚಲನ ನಡೆಸಿ, ಜನಜಾಗೃತಿ ಮೂಡಿಸಿದರು.