ರಾಮನಗರ: ಹುಕ್ಕಾ ಸೇವನೆಗೆ ಅವಕಾಶ ಮಾಡಿಕೊಡುತ್ತಿದ್ದ ತಾಲೂಕಿನ ಮಾದಾಪುರ ಗೇಟ್ ಬಳಿಯ ಫಿಲ್ಟರ್ ಕೆಫೆ ಅಂಡ್ ಕಿಚ್ಚನ್ ಮೇಲೆ ದಾಳಿ ನಡೆಸಿರುವ ರಾಮನಗರ ಸಿಇಎನ್ ಠಾಣೆ ಪೊಲೀಸರು ಮೂವರನ್ನು ಬಂಧಿಸಿ, ಹುಕ್ಕು ಸೇವೆನೆಗೆ ಬಳಸುತ್ತಿದ್ದ ಪಾಟ್‌ಗಳು ಮತ್ತು ಫ್ಲೇವರ್ ಡಬ್ಬಗಳನ್ನು ವಶಪಡಿಸಿಕೊಂಡಿದ್ದಾರೆ.
ಈ ಬಗ್ಗೆ ದೊರೆತ ಖಚಿತ ಮಾಹಿತಿ ಮೇರೆಗೆ ರಾಮನಗರ ಸಿಇಎನ್ ಪೊಲೀಸ್ ಠಾಣೆಯ ಡಿವೈಎಸ್ಪಿ ಕೆಂಚೇಗೌಡ ನೇತೃತ್ವದ ತಂಡ ಖಾಸಗಿ ವಾಹನದಲ್ಲಿ ಫಿಲ್ಟರ್ ಕೆಫೆ ಮೇಲೆ ದಾಳಿ ನಡೆಸಿ ಮೂವರನ್ನು ಬಂಧಿಸಿದ್ದಾರೆ. ಈ ವೇಳೆ ಗ್ರಾಹಕರಿಗೆ ಹುಕ್ಕಾ ಸರಬರಾಜು ಮಾಡಲು ತಯಾರಿಸಿಕೊಂಡಿರುವುದು ಕಂಡು ಬಂದಿದೆ. ಹುಕ್ಕಾ ಸೇವನೆಗೆ ಬಳಸಿದ್ದ 11 ಪಾಟ್ ಮತ್ತು ಹುಕ್ಕಾ ತಯಾರಿಕೆಗೆ ಬಳಸುತ್ತಿದ್ದ 6 ಫ್ಲೇವರ್ ಡಬ್ಬಗಳನ್ನು ಪಂಚರ ಸಮಕ್ಷಮದಲ್ಲಿ ಪೊಲೀಸರು ವಶಪಡಿಸಿಕೊಂಡಿದ್ದಾರೆ.
ರಾಮನಗರ ಸಿಇಎನ್ ಪೊಲೀಸ್ ಠಾಣೆಯಲ್ಲಿ ಬಂಧಿತರ ವಿರುದ್ಧ ಕಲಂ 4 ಮತ್ತು 21 ಆಫ್ ಕೋಪ್ಟಾ ಆಕ್ಟ್ ಅಡಿಯಲ್ಲಿ ಪ್ರಕರಣ ದಾಖಲಾಗಿದೆ.