ಶಿರಾಡಿಯಿಂದ ಎರಡು ಶವ ಮೇಲೆತ್ತಿದ ಪೊಲೀಸರು

KannadaprabhaNewsNetwork |  
Published : Nov 10, 2026, 12:30 AM IST
9ಎಚ್ಎಸ್ಎನ್19 :  | Kannada Prabha

ಸಾರಾಂಶ

ಆರೋಪಿ ಇಂದುಶೇಖರ್‌ನನ್ನು ಸ್ಥಳಕ್ಕೆ ಕರೆತಂದ ಪೊಲೀಸರು, ಆತನಿಂದ ಮಾಹಿತಿ ಪಡೆದು ಸುಮಾರು 100 ಅಡಿ ಆಳದ ಕಂದಕದಿಂದ ನಂದಿನಿ ಮತ್ತು ಶಂಕರ್ ಅವರ ಮೃತದೇಹಗಳನ್ನು ಹೊರತೆಗೆದರು. ಮಲ್ಲೇಶ್ವರಂ ಎಸಿಪಿ ಪ್ರಭಾ ರಮೇಶ್ ಅವರ ನೇತೃತ್ವದ ರಾಜಾಜಿನಗರ ಪೊಲೀಸ್ ಠಾಣೆಯ ತಂಡ ಸೋಮವಾರ ಬೆಳಿಗ್ಗೆ ಆರೋಪಿ ಇಂದುಶೇಖರ್‌ನನ್ನು ಶಿರಾಡಿ ಘಾಟ್‌ಗೆ ಕರೆತಂದು ಶವಗಳಿಗಾಗಿ ಹುಡುಕಾಟ ಆರಂಭಿಸಿತು. ಆರಂಭದಲ್ಲಿ ಮೃತದೇಹಗಳನ್ನು ಎಸೆದ ನಿಖರ ಸ್ಥಳವನ್ನು ತೋರಿಸದೆ ಆರೋಪಿ ಪೊಲೀಸರನ್ನು ವಿವಿಧ ಕಡೆ ಅಲೆದಾಡಿಸಿದ ಎನ್ನಲಾಗಿದೆ.

ಸಕಲೇಶಪುರ: ಬೆಂಗಳೂರಿನಲ್ಲಿ ಒಂದೇ ಕುಟುಂಬದ ಏಳು ಮಂದಿಯನ್ನು ಹತ್ಯೆಗೈದ ಪ್ರಕರಣಕ್ಕೆ ಸಂಬಂಧಿಸಿದಂತೆ, ಇಬ್ಬರ ಮೃತದೇಹಗಳನ್ನು ತಾಲೂಕಿನ ಶಿರಾಡಿ ಘಾಟ್‌ನ ಮಾರನಹಳ್ಳಿ ಸಮೀಪದ ಕಂದಕಕ್ಕೆ ಎಸೆದಿರುವುದು ಪತ್ತೆಯಾಗಿದೆ. ಆರೋಪಿ ಇಂದುಶೇಖರ್‌ನನ್ನು ಸ್ಥಳಕ್ಕೆ ಕರೆತಂದ ಪೊಲೀಸರು, ಆತನಿಂದ ಮಾಹಿತಿ ಪಡೆದು ಸುಮಾರು 100 ಅಡಿ ಆಳದ ಕಂದಕದಿಂದ ನಂದಿನಿ ಮತ್ತು ಶಂಕರ್ ಅವರ ಮೃತದೇಹಗಳನ್ನು ಹೊರತೆಗೆದರು. ಮಲ್ಲೇಶ್ವರಂ ಎಸಿಪಿ ಪ್ರಭಾ ರಮೇಶ್ ಅವರ ನೇತೃತ್ವದ ರಾಜಾಜಿನಗರ ಪೊಲೀಸ್ ಠಾಣೆಯ ತಂಡ ಸೋಮವಾರ ಬೆಳಿಗ್ಗೆ ಆರೋಪಿ ಇಂದುಶೇಖರ್‌ನನ್ನು ಶಿರಾಡಿ ಘಾಟ್‌ಗೆ ಕರೆತಂದು ಶವಗಳಿಗಾಗಿ ಹುಡುಕಾಟ ಆರಂಭಿಸಿತು. ಆರಂಭದಲ್ಲಿ ಮೃತದೇಹಗಳನ್ನು ಎಸೆದ ನಿಖರ ಸ್ಥಳವನ್ನು ತೋರಿಸದೆ ಆರೋಪಿ ಪೊಲೀಸರನ್ನು ವಿವಿಧ ಕಡೆ ಅಲೆದಾಡಿಸಿದ ಎನ್ನಲಾಗಿದೆ. ಐದಾರು ಸ್ಥಳಗಳನ್ನು ತೋರಿಸಿ ಗೊಂದಲ ಸೃಷ್ಟಿಸಲು ಯತ್ನಿಸಿದ ಬಳಿಕ ಕೊನೆಗೆ ಮೃತದೇಹಗಳನ್ನು ಎಸೆದಿದ್ದ ಜಾಗವನ್ನು ತೋರಿಸಿದನು. ಮೃತದೇಹಗಳನ್ನು ಪ್ಲಾಸ್ಟಿಕ್, ಗೋಣಿಚೀಲ ಹಾಗೂ ಹಗ್ಗದಿಂದ ಸುತ್ತಿ ಕಾರಿನಲ್ಲಿ ತಂದು ಕಂದಕಕ್ಕೆ ಎಸೆದಿರುವುದು ತಿಳಿದುಬಂದಿದೆ. ಸುಮಾರು 100 ಅಡಿ ಆಳದ ಕಂದಕಕ್ಕೆ ಹಗ್ಗದ ಸಹಾಯದಿಂದ ಇಳಿದ ಪೊಲೀಸರು ಹಾಗೂ ಸ್ಥಳೀಯರು, ಆಂಬ್ಯುಲೆನ್ಸ್ ಸಿಬ್ಬಂದಿಯ ಸಹಕಾರದೊಂದಿಗೆ ಮೃತದೇಹಗಳನ್ನು ಮೇಲಕ್ಕೆತ್ತಿದರು. ವಿಧಿವಿಜ್ಞಾನ ಪ್ರಯೋಗಾಲಯದ ತಜ್ಞರು ಸ್ಥಳದಲ್ಲೇ ಪರಿಶೀಲನೆ ನಡೆಸಿದರು. ಬಳಿಕ ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗಾಗಿ ಹಾಸನದ ಹಿಮ್ಸ್ ಆಸ್ಪತ್ರೆಗೆ ರವಾನಿಸಲಾಯಿತು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

12, 13ರಂದು ಪುಣ್ಯಾರಾಧನೆ, ಸ್ಮರಣೋತ್ಸವ, ಜನಜಾಗೃತಿ ಧರ್ಮ ಸಮ್ಮೇಳನ
ಟನಲ್ ಮಾಡಿದ್ರೂ ಆಗಲ್ಲ, ಎಲಿವೇಟೆಡ್‌ ಮಾಡಿದರೂ ಅಪಾದನೆ: ಡಿಕೆಶಿ ಆಕ್ರೋಶ