- ಕೇವಲ 4 ಗಂಟೆಗಳಲ್ಲಿ ಆರೋಪಿಯನ್ನು ಬಂಧಿಸಿದ ತಂಡ
ಕೆಲಸಕ್ಕೆ ಹೋಗಲು ಪೋಷಕರು ಪಕ್ಕದ ಮನೆಯಲ್ಲಿ ಬಿಟ್ಟು ಹೋಗಿದ್ದ 5 ವರ್ಷದ ಮಗುವಿನ ಅಪರಣ ಮಾಡಿದ್ದವನನ್ನುಕೆಲವೇ ಗಂಟೆಗಳಲ್ಲಿ ಯಗಟಿ ಠಾಣಾ ಪೊಲೀಸರು ಪತ್ತೆ ಹಚ್ಚಿ ಬಂಧಿಸಿದ್ದಾರೆ.
ತುಮಕೂರು ಮೂಲದ ರಂಗಪ್ಪ ಬಂಧಿತ ಆರೋಪಿ. ಬೀಳುವಾಲ ಗ್ರಾಮದ ವಸಂತ ಕುಮಾರಿ ಮತ್ತು ಶ್ರೀನಿವಾಸ್ ಅವರ ಮಗುವನ್ನು ಅಪಹರಿಸಿದ್ದ ಈತನನ್ನು ಬಂದಿಸಿ ಫೋಕ್ಸೋ ಕಾಯಿದೆ ಅಡಿ ಪ್ರಕರಣ ದಾಖಲಿಸಲಾಗಿದೆ.ಭಾನುವಾರ ಆಟೋ ಚಾಲಕ ಶ್ರೀನಿವಾಸ್ ಆಟೋ ಬಾಡಿಗೆಗೆ ಕಡೂರಿಗೆ ತೆರಳಿದ್ದು ತಾಯಿ ವಸಂತ ಕುಮಾರಿ ಕೂಲಿ ಕೆಲಸಕ್ಕೆ ಜಮೀನಿಗೆ ಹೋಗಲು ತಮ್ಮ ಮಗು ಡಿಂಪನಾ(5)ಳನ್ನು ನೆರೆಯ ಸಾಟಿ ಕುಮಾರ್ ಮನೆಯಲ್ಲಿ ಬಿಟ್ಟಿದ್ದರು.
ಚಿಕ್ಕಮಗಳೂರು ಪೊಲೀಸ್ ಅಧೀಕ್ಷಕರು ತರೀಕೆರೆ ಡಿವೈಎಸ್ಪಿ ಪರಶುರಾಮ್ ನೇತೃತ್ವದಲ್ಲಿ ತಂಡ ರಚಿಸಿ ವಿವಿಧ ಆಯಾಮ ಗಳಲ್ಲಿ ತನಿಖೆ ಕೈಗೊಂಡು ಪ್ರಕರಣ ದಾಖಲಾದ ಕೇವಲ 4 ಗಂಟೆಗಳಲ್ಲಿ ಆರೋಪಿಯನ್ನು ವಶಕ್ಕೆ ಪಡೆದಿದ್ದಾರೆ. ಈ ತಂಡದಲ್ಲಿ ವೃತ ನಿರೀಕ್ಷಕ ರಫೀಕ್, ಪೊಲೀಸ್ ಉಪ ನಿರೀಕ್ಷಕ ತಿಪ್ಪೇಶ್, ಪಿಎಸ್ ಐಗಳಾದ ವಿದ್ಯಾ,ಮಂಜುನಾಥ್,ತಿಪ್ಪೇಶ್,ಧನಂಜಯ್, ಮಂಜುನಾಥ್, ಸಿಬ್ಬಂದಿ ಹೇಮಂತ್ ಕುಮಾರ್, ರಾಜಪ್ಪ, ಮಧುಕುಮಾರ್, ಹರೀಶ್ ಮತ್ತು ಈಶ್ವರಪ್ಪ ಪಾಲ್ಗೊಂಡಿದ್ದರು.
-- ಬಾಕ್ಸ್--
ಗ್ರಾಮೀಣ ಭಾಗಗಳಲ್ಲಿ ತೋಟ ಕಾಯಲು, ಹೊಲ ಉಳುಮೆಗೆ ವ್ಯಕ್ತಿಗಳನ್ನು ಬಳಸಿಕೊಳ್ಳಲಾಗುತ್ತಿದೆ. ತಾಲೂಕಿನಾದ್ಯಂತ ನಡೆಯುತ್ತಿರುವ ಕಟ್ಟಡ ನಿರ್ಮಾಣ ಕಾಮಗಾರಿ, ಪೇಂಟಿಂಗ್, ಬಡಗಿ, ಟೈಲ್ಸ್ ಅಳವಡಿಕೆ, ಮೊದಲಾದ ಕೆಲಸ ನಿರ್ವಹಿಸಲು ಬಹಳಷ್ಟು ಜನ ಉತ್ತರ ಭಾರತದಿಂದ ವಲಸೆ ಬಂದಿದ್ದಾರೆ. ಅಂತಹವರರಿಗೆ ಕೆಲಸ ಕೊಡುವಾಗ, ಮನೆ ಬಾಡಿಗೆ, ಕೆಲಸದ ಗುತ್ತಿಗೆ ನೀಡುವವರು ಆಧಾರ್ ಕಾರ್ಡ್, ಗುರುತಿನ ಚೀಟಿ ಪಡೆದು ವಿವರವನ್ನು ಪೊಲೀಸರಲ್ಲಿ ದಾಖಲಿಸಬೇಕು. ಮನೆ ಮನೆ ಪೊಲೀಸ್ ಅಭಿಯಾನದಲ್ಲಿ ತಮಗೆ ಕಂಡು ಬರುವ ಹೊಸಬರ ವಿವರಗಳನ್ನು ಸಂಗ್ರಹಿಸಲು ಪೊಲೀಸರು ಮುಂದಾಗಬೇಕು ಎಂದು ಸಲಹೆ ನೀಡಿದರು.