ಚಿರತೆಯಿಂದ ಪ್ರವಾಸಿಗರ ರಕ್ಷಿಸಿದ ಪೊಲೀಸರು

KannadaprabhaNewsNetwork |  
Published : Nov 12, 2026, 02:30 AM IST
ರಕ್ಷಣೆ ಒಳಗಾದ ಪ್ರವಾಸಿಗರ ಜೊತೆ ರಕ್ಷಿಸಿದ ಪೊಲೀಸರು.   | Kannada Prabha

ಸಾರಾಂಶ

ಪಶ್ಚಿಮ ಬಂಗಾಳದಿಂದ ಬಂದಿದ್ದ ನಾಲ್ವರು ಪ್ರವಾಸಿಗರು ಓಂ ಕಡಲತೀರದಿಂದ ಕುಡ್ಲೆ ಕಡಲತೀರಕ್ಕೆ ಭಾನುವಾರ ರಾತ್ರಿ 9.30ಕ್ಕೆ ಸಮಯದಲ್ಲಿ ಬರುತ್ತಿದ್ದರು. ಈ ವೇಳೆ ಮಾರ್ಗಮಧ್ಯೆ ಚಿರತೆಯೊಂದು ನಿಂತಿತ್ತು. ಭೀತಿಗೊಳಗಾದ ಪ್ರವಾಸಿಗರು ಕಂಗಾಲಾಗಿದ್ದಾರೆ. ತಕ್ಷಣವೇ ಸಮಯಪ್ರಜ್ಞೆ ಮೆರೆದು ಗೋಕರ್ಣ ಪೊಲೀಸ್ ಠಾಣೆಗೆ ಕರೆ ಮಾಡಿ ನೆರವಿಗಾಗಿ ಮನವಿ ಮಾಡಿದ್ದಾರೆ.

ಗೋಕರ್ಣ: ಪ್ರವಾಸಿಗರು ಕಾಲ್ನಡಿಗೆಯಲ್ಲಿ ತೆರಳುತ್ತಿರುವಾಗ ರಸ್ತೆ ಮಧ್ಯೆ ಚಿರತೆ ಎದುರಾಗಿ ಆತಂಕದಲ್ಲಿದ್ದಾಗ ಇಲ್ಲಿನ ಪೊಲೀಸರು ಸ್ಥಳಕ್ಕೆ ತೆರಳಿ ರಕ್ಷಣೆ ನೀಡಿದ ಘಟನೆ ಓಂ ಬೀಚ್ ಇತ್ತೀಚೆಗೆ ಹತ್ತಿರ ನಡೆದಿದೆ. ಪಶ್ಚಿಮ ಬಂಗಾಳದಿಂದ ಬಂದಿದ್ದ ನಾಲ್ವರು ಪ್ರವಾಸಿಗರು ಓಂ ಕಡಲತೀರದಿಂದ ಕುಡ್ಲೆ ಕಡಲತೀರಕ್ಕೆ ಭಾನುವಾರ ರಾತ್ರಿ 9.30ಕ್ಕೆ ಸಮಯದಲ್ಲಿ ಬರುತ್ತಿದ್ದರು. ಈ ವೇಳೆ ಮಾರ್ಗಮಧ್ಯೆ ಚಿರತೆಯೊಂದು ನಿಂತಿತ್ತು. ಭೀತಿಗೊಳಗಾದ ಪ್ರವಾಸಿಗರು ಕಂಗಾಲಾಗಿದ್ದಾರೆ. ತಕ್ಷಣವೇ ಸಮಯಪ್ರಜ್ಞೆ ಮೆರೆದು ಗೋಕರ್ಣ ಪೊಲೀಸ್ ಠಾಣೆಗೆ ಕರೆ ಮಾಡಿ ನೆರವಿಗಾಗಿ ಮನವಿ ಮಾಡಿದ್ದಾರೆ.

ಕರೆ ಸ್ವೀಕರಿಸಿ ಮಾಹಿತಿ ಪಡೆದ ಠಾಣೆಯ ಹವಾಲ್ದಾರ್ ರಾಜೇಶ್ ನಾಯ್ಕ್, ಸಿಬ್ಬಂದಿಗಳಾದ ಪರಮೇಶ್ವರ ಬೆಂಡ್ಲಗಟ್ಟಿ, ಪ್ರಕಾಶ್ ಮುಳ್ಳಿ ತಕ್ಷಣ ಸರ್ಕಾರಿ ವಾಹನದಲ್ಲಿ ಸೈರನ್ ಶಬ್ದ ಮಾಡುತ್ತಾ ಸ್ಥಳಕ್ಕೆ ಧಾವಿಸಿದ್ದಾರೆ. ಸೈರನ್ ಆರ್ಭಟಕ್ಕೆ ಚಿರತೆ ಓಡಿದೆ. ನಂತರ ಭಯದಿಂದ ನಡುಗುತ್ತಿದ್ದ ಪ್ರವಾಸಿಗರಿಗೆ ಪೊಲೀಸರು ಧೈರ್ಯ ತುಂಬಿ ಸಮಾಧಾನಪಡಿಸಿದ್ದಾರೆ. ಬಳಿಕ ಪೊಲೀಸ್ ವಾಹನದಲ್ಲಿ ಪ್ರವಾಸಿಗರನ್ನು ಸುರಕ್ಷಿತವಾಗಿ ಕುಡ್ಲೆ ಬೀಚ್‌ನಲ್ಲಿರುವ ರೆಸಾರ್ಟಗೆ ಕರೆತಂದಿದ್ದಾರೆ.

ಸಾಮಾಜಿಕ ಜಾಲತಾಣದಲ್ಲಿ ಗೋಕರ್ಣ ಪೊಲೀಸರು ಸಹಾಯ ಮಾಡಿರುವುದನ್ನು ಪ್ರವಾಸಿಗರು ವಿವರಿಸಿ ಅಭಿನಂದಿಸಿದ್ದಾರೆ. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯವರು ಸಿಬ್ಬಂದಿ ಕಾರ್ಯವನ್ನು ಶ್ಲಾಘಿಸಿ ಬಹುಮಾನ ಘೋಷಿಸಿದ್ದಾರೆ. ವಿದ್ಯುತ್ ಶಾಕ್: ಯುವಕ ಸಾವು

ಮುಂಡಗೋಡ: ಫ್ರಿಡ್ಜ್ ರಿಪೇರಿ ಮಾಡುವಾಗ ವಿದ್ಯುತ್ ತಗುಲಿ ೨೧ ವರ್ಷದ ಯುವಕ ಮೃತಪಟ್ಟ ಘಟನೆ ಪಟ್ಟಣದ ಹಳೂರ ಬಡಾವಣೆಯಲ್ಲಿ ಬುಧವಾರ ನಡೆದಿದೆ.ಶಾಕೀಬ್ ಬಸೀರ್ ಬಂಡಿ(೨೧) ಎಂಬಾತನೇ ಮೃತಪಟ್ಟ ಯುವಕ. ಮನೆಯಲ್ಲಿ ಫ್ರಿಡ್ಜ್ ರಿಪೇರಿ ಮಾಡುತ್ತಿದ್ದಾಗ ಏಕಾಏಕಿ ವಿದ್ಯುತ್ ಪ್ರವಹಿಸಿ ಸಾವು ಕಂಡಿದ್ದಾನೆ. ಮೃತ ಸಾಕೀಬ್ ಕೆಎಸ್ಆರ್‌ಟಿಸಿ ಕಂಡಕ್ಟರ್ ಬಸೀರ್ ಬಂಡಿ ಎಂಬವರ ಪುತ್ರ. ಮುಂಡಗೋಡ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ದೀಪಾವಳಿಲೀ ರಾಕೆಟ್‌ನಂತೆ ಹಾರಿದ ವಾಯು ಮಾಲಿನ್ಯ!
ಕೌಟುಂಬಿಕ ಕೇಸಲ್ಲಿ ಕುಟುಂಬ ಸಿಲುಕಿಸುವುದು ತರವಲ್ಲ: ಕೋರ್ಟ್‌