ಉಪ್ಪಾರ ವೆಂಕಟೇಶನಿಗೆ ಪೊಲೀಸರಿಂದ ಹುಡುಕಾಟ

KannadaprabhaNewsNetwork |  
Published : Sep 14, 2026, 01:30 AM IST
ಫೋಟೋ 13ಪಿವಿಡಿ4ಪಾವಗಡ,ಬೆದರಿಕೆ ಹಾಗೂ ಬ್ಲಾಕ್‌ ಮೇಲ್‌ ಹಿನ್ನಲೆ ಉಪ್ಪಾರ ವೆಂಕಟೇಶ್‌ಗಾಗಿ ಪೊಲೀಸರಿಂದ ತೀವೃ ಕಾರ್ಯಾಚರಣೆ ನಡೆಸಿದರು. | Kannada Prabha

ಸಾರಾಂಶ

ತುಮಕೂರು ಅಡಿಷನಲ್ ಎಸ್ಪಿ ಹಾಗೂ ಮಧುಗಿರಿ ಡಿವೈಎಸ್ಪಿ ನೇತೃತ್ವದಲ್ಲಿ 120ಮಂದಿ ವಿಶೇಷ ಪೂಲೀಸ್ ತಂಡ ರಚಿಸಿ ತಾಲೂಕಿನ ಕನಿಕಲಬಂಡೆ ಗಂಗಸಾಗರ ಹಾಗೂ ಸುತ್ತಮುತ್ತ ಗ್ರಾಮಗಳಲ್ಲಿ ಶೋಧ ಕಾರ್ಯಚರಣೆ ನಡೆಸಿತು.

ಕನ್ನಡಪ್ರಭ ವಾರ್ತೆ ಪಾವಗಡ ತಾಲೂಕಿನ ಪೊನ್ನಸಮುದ್ರ ಗ್ರಾಪಂ ವ್ಯಾಪ್ತಿಯ ಗಂಗಸಾಗರದ ಗ್ರಾಮದ ಮುತ್ತುಕುಂಟ್ಲ ಭೂಷಪ್ಪರಿಗೆ 11ರಂದು 5 ಲಕ್ಷ ರು. ಬೆದರಿಕೆವೊಡ್ಡಿದ ಪತ್ರವೊಂದನ್ನು ಅವರ ತೋಟದ ಮನೆ ಗೇಟಿಗೆ ಅಂಟಿಸಿ ಪರಾರಿಯಾಗಿದ್ದ ಘಟನೆಯನ್ನು ಗಂಭೀರವಾಗಿ ಪರಿಗಣಿಸಿರುವ ಗೃಹ ಇಲಾಖೆ ಶನಿವಾರ ತುಮಕೂರು ಅಡಿಷನಲ್ ಎಸ್ಪಿ ಹಾಗೂ ಮಧುಗಿರಿ ಡಿವೈಎಸ್ಪಿ ನೇತೃತ್ವದಲ್ಲಿ 120ಮಂದಿ ವಿಶೇಷ ಪೂಲೀಸ್ ತಂಡ ರಚಿಸಿ ತಾಲೂಕಿನ ಕನಿಕಲಬಂಡೆ ಗಂಗಸಾಗರ ಹಾಗೂ ಸುತ್ತಮುತ್ತ ಗ್ರಾಮಗಳಲ್ಲಿ ಶೋಧ ಕಾರ್ಯಚರಣೆ ನಡೆಸಿತು.

ಕನಿಕಲಬಂಡೆ ಗ್ರಾಮದ ಉಪ್ಪಾರ ವೆಂಕಟೇಶ್ ಕಳೆದ ಎರಡು ಮೂರು ವರ್ಷದಿಂದ ಗ್ರಾಮದ ಹೊರವಲಯಗಳಲಿನ ಬೆಟ್ಟ ಹಾಗೂ ದಟ್ಟ ಪೊದೆಗಳಲ್ಲಿ ಅಡಗಿ ರಸ್ತೆಯಲ್ಲಿ ಓಡಾಡುವ ವಾಹನ ಸಾವರರನ್ನು ಅಡ್ಡಗಟ್ಟಿ ಬೆದರಿಕೆವೊಡ್ಡಿ ಹಣ ಪಡೆಯುತ್ತಿದ್ದರೆನ್ನಲಾಗಿದೆ. ಈತನ ದೌರ್ಜನ್ಯ ಹಾಗೂ ಬೆದರಿಕೆಗಳಿಗೆ ಗ್ರಾಮದ ಜನತೆ ಠಾಣೆಗೆ ದೂರು ನೀಡಲು ಸಹ ಮುಂದೆ ಬರಲು ಹಿಂಜರಿಯುತ್ತಿದ್ದರು. ಜಮೀನಿನ ವಿಚಾರವಾಗಿ ತಗಾದೆ ತೆಗೆದಿದ್ದು, ಕಳೆದ ಆ. 29ರಂದು ಪಂಪ್ ಸೆಟ್ ಹೌಸ್‌ ಗೆ ನಾಡಬಾಂಬ್ ಪಿಟ್ ಮಾಡಿದ್ದ ಎನ್ನಲಾಗಿದ್ದು ಬಾಂಬ್ ಸ್ಪೋಟವಾಗಿತ್ತು. ಆದ್ರೆ ರೈತ ಕರಿಯಣ್ಣ ಪ್ರಾಣಪಾಯದಿಂದ ಪಾರಾಗಿದ್ದರು. ಈ ಘಟನೆ ಮಾಸುವ ಮುನ್ನವೇ ಕನಿಕಲಬಂಡೆ ಗ್ರಾಮದ ಪಕ್ಕದ ಊರಾದ ಗಂಗಸಾಗರಕ್ಕೆ ಲಗ್ಗೆಯಿಟ್ಟು ತೆಲುಗಿನಲ್ಲಿ ಬರೆದಿದ್ದ ಪೀಪಲ್ಸ್ ವಾರ್ ಜನಶಕ್ತಿ ಪಾರ್ಟಿ ದೇವನ್ನ ದಳಂ ಹೆಸರಿನಲ್ಲಿ ಚೀಟಿ ಬರೆದು ಇದೇ ಗ್ರಾಮದ ಇದೇ ಗ್ರಾಮದ ವಾಸಿ ರೈತ ಮುತ್ತಕುಂಟ್ಲ ಭೂಷಪ್ಪನಿಗೆ 5ಲಕ್ಷ ಬೇಡಿಕೆ ಇಟ್ಟಿದ್ದರು. ಇದೆಲ್ಲ ಕನಿಕಲಬಂಡೆ ಉಪ್ಪಾರವೆಂಕಟೇಶ್ ಕುತಂತ್ರ ಇರಬಹುದೆಂಬ ಶಂಕೆ ವ್ಯಕ್ತಪಡಿಸಿ 120ಮಂದಿ ಪೊಲೀಸರು ಹಾಗೂ ಡ್ರೋಣ್ ಮೂಲಕ ಕಾರ್ಯಾಚರಣೆ ಕೈಗೊಳ್ಳಲಾಗಿದೆ. ಉಪ್ಪಾರ ವೆಂಕಟೇಶ್‌ನಿಗಾಗಿ ಶೋಧ ಕಾರ್ಯ ನಡೆಸಿದ್ದು, ಪೊಲೀಸರು ತಾಲೂಕಿನ ಕನಿಕಲಬಂಡೆ, ಗಂಗಸಾಗರ, ಕಡಪಲಕರೆ, ಅಚ್ಚಮ್ಮನಹಳ್ಳಿ ಹಾಗೂ ಪಳವಳ್ಳಿಯಲ್ಲಿ ಹುಡುಕಾಟ ನಡೆಸಿದ್ದಾರೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಕೇಂದ್ರ ಸರ್ಕಾರ ರೈತರ ಸಾಲ ಮನ್ನಾ ಮಾಡಲಿ: ಬಸವಂತಪ್ಪ
ಮನುಷ್ಯನ ಅಸಹನೆಯೇ ಜಗತ್ತಿನ ಸಂಘರ್ಷಗಳಿಗೆ ಕಾರಣ