ಕನ್ನಡಪ್ರಭ ವಾರ್ತೆ ಮದ್ದೂರು
ಪಟ್ಟಣದ ಎಂ.ಎಂ.ಸಭಾಂಗಣದಲ್ಲಿ ತಾಲೂಕು ಹಾಲು ಉತ್ಪಾದಕರ ಸಹಕಾರ ಸಂಘದ ನೌಕರರ ಒಕ್ಕೂಟದ ಸರ್ವ ಸದಸ್ಯರ ವಾರ್ಷಿಕ ಸಾಮಾನ್ಯ ಸಭೆಯಲ್ಲಿ ನಿವೃತ್ತಿ ಹೊಂದಿದ ನೌಕರರನ್ನು ಅಭಿನಂದಿಸಿ ಮಾತನಾಡಿದರು.
ಈ ಹಿಂದೆ ಹಾಲು ಉತ್ಪಾದಕರ ಸಹಕಾರ ಸಂಘಗಳಲ್ಲಿ ನಾನು ಅಧ್ಯಕ್ಷರಾಗಿ ಅಧಿಕಾರ ಸ್ವೀಕಾರಕ್ಕೆ ಮುನ್ನ ಸಂಘಗಳಿಂದ ಒಕ್ಕೂಟಕ್ಕೆ ಕಳಪೆ ಗುಣಮಟ್ಟದ ಹಾಲು ಪೂರೈಕೆಯಾಗುತ್ತಿದ್ದು, ಇದರಿಂದ ತಾಲೂಕು ಸಂಘಗಳು 7ನೇ ಸ್ಥಾನದಲ್ಲಿದ್ದವು. ಗುಣಮಟ್ಟದ ಹಾಲು ಪೂರೈಕೆಗೆ ಒಕ್ಕೂಟ ಕೆಲವೊಂದು ಕಟ್ಟುನಿಟ್ಟಿನ ನಿಬಂಧನೆಗಳು ಮತ್ತು ತಾಂತ್ರಿಕತೆ ಅಳವಡಿಸಿದ ಹಿನ್ನೆಲೆಯಲ್ಲಿ ಗುಣಮಟ್ಟದ ಹಾಲು ಪೂರೈಕೆಯಲ್ಲಿ ಮೊದಲನೇ ಸ್ಥಾನ ಪಡೆಯುವಂತಾಗಿದೆ ಎಂದು ಪ್ರಸಂಸೆ ವ್ಯಕ್ತಪಡಿಸಿದರು.ಸಹಕಾರ ಸಂಘಗಳಿಗೆ ಕೊಬ್ಬಿನಾಂಶ ಇಲ್ಲದ ಕಲಬೆರಕೆ ಹಾಲನ್ನು ಸರಬರಾಜು ಮಾಡಿದಾಗ ರೈತರು ಮತ್ತು ಸಂಘದ ನೌಕರರ ನಡುವೆ ಕೆಲವೊಂದು ವಾಗ್ವಾದಗಳು ನಡೆಯುವುದು ಸಹಜವಾಗಿತ್ತು. ಆನಂತರ ಹಾಲಿನ ಗುಣಮಟ್ಟ ಪರೀಕ್ಷೆಗೆ ಒಕ್ಕೂಟ ಆನ್ ಲೈನ್ ವ್ಯವಸ್ಥೆ ಮೂಲಕ ಕೆಲವೊಂದು ಕಟ್ಟುನಿಟ್ಟಿನ ಕ್ರಮ ಕೈಗೊಂಡ ನಂತರ ಸಂಘಗಳು ಲಾಭದಲ್ಲಿ ಪ್ರಗತಿ ಸಾಧಿಸಿರುವುದರ ಜೊತೆಗೆ ಗ್ರಾಹಕರಿಗೆ ಗುಣಮಟ್ಟದ ಹಾಲು ಮಾರಾಟ ಸಾಧ್ಯವಾಗಿದೆ ಎಂದರು.
ಸಭೆಯಲ್ಲಿ ನೌಕರರ ಯೂನಿಯನ್ ಅಧ್ಯಕ್ಷ ಕೆ.ಎಸ್.ಸುಧಾಕರ್ ಅಧ್ಯಕ್ಷತೆ ವಹಿಸಿದ್ದರು. ವ್ಯವಸ್ಥಾಪಕ ನಿರ್ದೇಶಕ ಎಚ್.ಆರ್ ರಘು, ನಾಮನಿರ್ದೇಶಕ ಎ.ಎಸ್.ರಾಜೀವ್, ಜಿಲ್ಲಾ ನೌಕರರ ಯೂನಿಯನ್ ಅಧ್ಯಕ್ಷ ಜಿ.ಕೆ.ಶಿವಕುಮಾರ್, ಉಪ ವ್ಯವಸ್ಥಾಪಕ ಡಾ.ಎ ಎನ್.ಮಂಜೇಶ್ವರ, ಸಹಾಯಕ ವ್ಯವಸ್ಥಾಪಕರಾದ ಡಾ.ಹೊನ್ನೇಶ್, ಡಾ.ಗೋವರ್ಧನ್, ಡಾ.ದೀಪಕ್, ವಿಸ್ತರಣಾಧಿಕಾರಿ ಭವ್ಯಶ್ರೀ, ಸೌಮ್ಯ, ರತ್ನಮ್ಮ, ಹರೀಶ ಹೆಗ್ಗಡೆ, ಅಫಶಾದ್, ದಿಲ್ವಾರ ಮಸ್ತಾನ, ಮಂಜುನಾಥ್, ಮಹದೇವಪ್ಪ ಲೀಲಾವತಿ ಮತ್ತಿತರರು ಇದ್ದರು.ನೌಕರರ ನಿವೃತ್ತಿ ವೇತನ, ಪ್ರೋತ್ಸಾಹ ಧನ ಹೆಚ್ಚಳಕ್ಕೆ ಮನವಿ ಸಲ್ಲಿಕೆ
ಪಟ್ಟಣದ ಎಂ.ಎಂ.ಸಭಾಂಗಣದಲ್ಲಿ ನಡೆದ ನೌಕರರ ವಾರ್ಷಿಕ ಸಾಮಾನ್ಯ ಸಭೆಯಲ್ಲಿ ಅಧ್ಯಕ್ಷ ಕೆ.ಎಸ್. ಸುಧಾಕರ್ ಮನವಿ ಮಾಡಿ, ಸಂಘದಲ್ಲಿ 25 ವರ್ಷ ಸೇವೆ ಸಲ್ಲಿಸಿ ನಿವೃತ್ತರಾದ ಕಾರ್ಯದರ್ಶಿಗಳಿಗೆ ಕನಿಷ್ಠ 10 ಲಕ್ಷ, ಹಾಲು ಪರೀಕ್ಷಕರಿಗೆ 7.5 ಲಕ್ಷ, ಸಹಾಯಕರಿಗೆ 5 ಲಕ್ಷ ನಿವೃತ್ತಿ ವೇತನ ನೀಡುವಂತೆ ಮನವಿ ಮಾಡಲಾಗಿದೆ.
ಈ ವೇಳೆ ನೌಕರರ ಸಂಘದ ಗೌರವಾಧ್ಯಕ್ಷರಾದ ಕೋಣಸಾಲೆ ಜಯರಾಮು, ಸಿ.ನಾಗಣ್ಣ, ಪ್ರಧಾನ ಕಾರ್ಯದರ್ಶಿ ಟಿ.ಎಂ.ದೇವರಾಜು, ಉಪಾಧ್ಯಕ್ಷೇ ಲಕ್ಷ್ಮಮ್ಮ, ಕಾರ್ಯಾಧ್ಯಕ್ಷ ಟಿ.ರಾಜಣ್ಣ, ಖಜಾಂಚಿ ಎ.ಎನ್.ರವಿ, ಸಹ ಕಾರ್ಯದರ್ಶಿ ಸಂಧ್ಯಾರಾಣಿ, ಮುಖಂಡರಾದ ಲಕ್ಷ್ಮಿ ಚನ್ನರಾಜು, ಸಿ.ಟಿ.ಲತಾ ಮತ್ತು ನೌಕರರ ಒಕ್ಕೂಟದ ಪದಾಧಿಕಾರಿಗಳು ಇದ್ದರು.