ಜನರ ದಾರಿ ತಪ್ಪಿಸಲು ರಾಜಕೀಯವಾಗಿ ಪಾದಯಾತ್ರೆ : ಅಬಕಾರಿ ಸಚಿವ ಆರ್‌.ಬಿ.ತಿಮ್ಮಾಪುರ ಕಿಡಿ

KannadaprabhaNewsNetwork |  
Published : Aug 08, 2024, 01:41 AM ISTUpdated : Aug 08, 2024, 01:07 PM IST
ಸಚಿವ ಆರ್.ಬಿ.ತಿಮ್ಮಾಪುರ ಸುದ್ದಿಗೋಷ್ಠಿ | Kannada Prabha

ಸಾರಾಂಶ

 ಬಿಜೆಪಿ ಹಾಗೂ ಜೆಡಿಎಸ್‌ನವರು ಏನಕ್ಕೆ ಪಾದಯಾತ್ರೆ ಮಾಡುತ್ತಿದಾರೋ ಗೊತ್ತಿಲ್ಲ. ಅವರು ಜನರ ದಾರಿ ತಪ್ಪಿಸಲು ರಾಜಕೀಯವಾಗಿ ಪಾದಯಾತ್ರೆ ಮಾಡುತ್ತಿದ್ದಾರೆ ಎಂದು ಅಬಕಾರಿ ಸಚಿವ ಆರ್‌.ಬಿ.ತಿಮ್ಮಾಪುರ ಕಿಡಿಕಾರಿದರು.  

  ವಿಜಯಪುರ :  ಬಿಜೆಪಿ ಹಾಗೂ ಜೆಡಿಎಸ್‌ನವರು ಏನಕ್ಕೆ ಪಾದಯಾತ್ರೆ ಮಾಡುತ್ತಿದಾರೋ ಗೊತ್ತಿಲ್ಲ. ಅವರು ಜನರ ದಾರಿ ತಪ್ಪಿಸಲು ರಾಜಕೀಯವಾಗಿ ಪಾದಯಾತ್ರೆ ಮಾಡುತ್ತಿದ್ದಾರೆ ಎಂದು ಅಬಕಾರಿ ಸಚಿವ ಆರ್‌.ಬಿ.ತಿಮ್ಮಾಪುರ ಕಿಡಿಕಾರಿದರು. 

ನಗರದ ಕಾಂಗ್ರೆಸ್ ಕಚೇರಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜನಪರವಾದ ಕೆಲಸ ಮಾಡುವ ಸಿಎಂ ಸಿದ್ದರಾಮಯ್ಯನವರಿಗೆ ಕಳಂಕ ತರಲು ಸುಳ್ಳು ಆರೋಪ ಮಾಡುತ್ತಿದ್ದಾರೆ. ಇವರ ಪಾದಯಾತ್ರೆ ಜನರ ಅನುಕೂಲಕ್ಕಾಗಿ ಅಲ್ಲ. ದಿನಾಲು ಬೆಳಗ್ಗೆ ಎದ್ದಕೂಡಲೇ ರಾಜಕಾರಣ ಮಾಡುತ್ತಾರೆ. 

ಇದರಿಂದ ಅವರಿಗೆ ಭಾರೀ ಹಿನ್ನೆಡೆ ಆಗುತ್ತದೆ ಎಂದರು.ಸಿದ್ದರಾಮಯ್ಯನವರನ್ನು ಕೆಳಗಿಳಿಸಿ ಡಿಕೆಶಿ ಸಿಎಂ ಆಗಲು ಹೀಗೆ ಮಾಡುತ್ತಿದ್ದಾರೆ ಎಂದು ಶಾಸಕ ಯತ್ನಾಳ ಆರೋಪ ವಿಚಾರಕ್ಕೆ ಪ್ರತಿಕ್ರಿಯಸಿದ ಅವರು, ಬಸನಗೌಡ ಪಾಟೀಲ ಯತ್ನಾಳ ಅವರಿಗೆ ನಮ್ಮ ಸಿಎಂ ಸಿದ್ದರಾಮಯ್ಯನವರ ಮೇಲೆ ಕಾಳಜಿ ಇರುವುದಕ್ಕೆ ತುಂಬಾ ಧನ್ಯವಾದಗಳು. 

ಇನ್ನು ತಮ್ಮ ಪಕ್ಷದ ಭ್ರಷ್ಟಾಚಾರದ ಬಗ್ಗೆ ಯತ್ನಾಳ ಅವರೇ ಮಾತನಾಡಿದ್ದಾರೆ, ಅವರು ಹಾಗೆ ಮಾತನಾಡುತ್ತಾರೆ ಎಂದರೆ ಅವರಿಗೆ ಬ್ರಷ್ಟಾಚಾರದ ಮಾಹಿತಿ ಇದೆಂದು ಅರ್ಥ. ಹಾಗಾಗಿ ಬಿಜೆಪಿ ಅಧಿಕಾರದಲ್ಲಿನ ಭ್ರಷ್ಟಾಚಾರದ ಬಗ್ಗೆ ತನಿಖೆಯಾಗಬೇಕು ಎಂದು ತಿಳಿಸಿದರು.ಸಚಿವರ ಕಾರ್ಯವೈಖರಿ ಇಲ್ಲದಿದ್ದರೇ ಬದಲಾವಣೆ ವಿಚಾರದ ಬಗ್ಗೆ ಮಾತನಾಡಿ, ಸಚಿವರು ಸರಿಯಾಗಿ ಕೆಲಸ ಮಾಡದಿದ್ದರೆ ಬದಲಾವಣೆ ಮಾಡುತ್ತಾರೋ ಇಲ್ಲವೋ ಗೊತ್ತಿಲ್ಲ, ಅದನ್ನೆಲ್ಲ ಹೈಕಮಾಂಡ್ ನೋಡಿಕೊಳ್ಳುತ್ತೆ. ಸದ್ಯಕ್ಕೆ ಸಂಪುಟ ವಿಸ್ತರಣೆ, ಬದಲಾವಣೆ ಯಾವುದೂ ಇಲ್ಲ ಎಂದರು.

ಸಿಐಡಿ ತನಿಖೆಗೆ

ಯಾದಗಿರಿ ಪಿಎಸೈ ಅವರ ಸಾವಿನ ಕುರಿತು ಈಗಾಗಲೇ ಸಿಐಡಿ ತನಿಖೆಗೆ ಕೊಡಲಾಗಿದೆ. ತನಿಖೆ ಆಗುತ್ತಿದೆ, ತನಿಖೆ ಬಳಿಕ ತಪ್ಪಿತಸ್ತರ ಮೇಲೆ ಕ್ರಮ ಆಗುತ್ತದೆ. ಸಿಐಡಿ ರಿಪೋರ್ಟ್ ಬಂದಮೇಲೆ ಯಾರದ್ದು ತಪ್ಪುಕೇನು ವಿಚಾರ ಎಂಬುವುದು ಗೊತ್ತಾಗುತ್ತದೆ. ಅದು ಬಿಟ್ಟು ಶಾಸಕರೇ ಕೊಂದಿದ್ದಾರೆ ಎನ್ನುವ ರೀತಿಯಲ್ಲಿ ಬಿಜೆಪಿ ಮಾತನಾಡುವುದು ತಪ್ಪು. ತಪ್ಪು ಯಾರೇ ಮಾಡಿದ್ದರೂ ಕ್ರಮ ಆಗೆ ಆಗುತ್ತೆ ಎಂದರು.ಕಾಲುವೆಗಳ ಕೊನೆ ಭಾಗದಲ್ಲಿನ ಕೆರೆಗಳನ್ನು ಮೊದಲ ಆದ್ಯತೆಯಲ್ಲಿ ತುಂಬಬೇಕೆಂದು ಈಗಾಗಲೇ ಆದೇಶಿಸಲಾಗಿದೆ‌. ಆದರೆ, ಕಾಲುವೆಗಳಿಗೆ ನೀರು ಬಿಟ್ಟಾಗ ಮಧ್ಯಭಾಗದ ರೈತರು ಕಾಲುವೆಗಳಿಗೆ ಪಂಪಸೆಟ್ ಅಳವಡಿಸದೇ ಮುಂದಿನ ಕಾಲುವೆಗಳ ಕೊನೆ ಭಾಗಕ್ಕೆ ನೀರು ಹೋಗಲು ಸಮೀಪದ ರೈತರು ಸಹಕಾರ ಮಾಡಬೇಕು. ಕೊನೆ ಭಾಗಕ್ಕೆ ನೀರು ಹೋಗಲು ಸಹಕರಿಸಬೇಕು ಎಂದು ಮನವಿ ಮಾಡಿದರು.

ಬಾಕ್ಸ್‌..ನೂತ ಅಧ್ಯಕ್ಷರಿಗೆ ಅಭಿನಂದನೆ ಸಲ್ಲಿಸಿದ ಸಚಿವ ತಿಮ್ಮಾಪುರವಿಜಯಪುರ-ಬಾಗಲಕೋಟೆ ಹಾಲು ಒಕ್ಕೂಟದ ಅಧ್ಯಕ್ಷರ ಚುನಾವಣೆಯಲ್ಲಿ ಬಾಗಲಕೋಟೆ ಜಿಲ್ಲೆ ಬಾದಾಮಿಯ ಈರನಗೌಡ ಸಿದ್ಧನಗೌಡ ಕರಿಗೌಡರ ಅವರು ಅವಿರೋಧವಾಗಿ ಅಧ್ಯಕರಾಗಿ ಆಯ್ಕೆಯಾಗಿದ್ದಾರೆ. ಸಚಿವರಾದ ಎಂ.ಬಿ.ಪಾಟೀಲ, ಶಿವಾನಂದ ಪಾಟೀಲ, ಎಚ್.ವೈ.ಮೇಟಿ, ವಿಜಯಾನಂದ ಕಾಶಪ್ಪನವರ, ಭೀಮಸೇನ ಚಿಮ್ಮನಕಟ್ಟಿ, ಸಂಯುಕ್ತಾ ಪಾಟೀಲ ಸೇರಿದಂತೆ ಅವಳಿ ಜಿಲ್ಲೆಗಳ ಎಲ್ಲ ಶಾಸಕರು ಹಾಗೂ ಸಚಿವರು ಮತ್ತು ಎಲ್ಲರ ಒಕ್ಕೋರಲಿನಿಂದ ಆಯ್ಕೆ ಮಾಡಲಾಗಿದೆ. ಸೂಕ್ತ ಮಾರ್ಗದರ್ಶನ ನೀಡಿದ ಮುಖ್ಯಮಂತ್ರಿಗಳು ಹಾಗೂ ಅಧ್ಯಕ್ಷರಿಗೆ ಅಭಿನಂದನೆ ಸಲ್ಲಿಸುತ್ತೇನೆ ಎಂದು ಸಚಿವ ಆರ್.ಬಿ.ತಿಮ್ಮಾಪುರ ಹೇಳಿದರು.ಬಾದಾಮಿ ಶಾಸಕ ಭೀಮಸೇನ ಚಿಮ್ಮನಕಟ್ಟಿ ಮಾತನಾಡಿ, ಅವಳಿ ಜಿಲ್ಲೆಗಳ ಸಚಿವರು, ಶಾಸಕರ ಸಹಮತ ಹಾಗೂ ಸಹಾಯದಿಂದ ಈ ಬಾರಿ ಬಾದಾಮಿ ತಾಲೂಕಿಗೆ ಕೆಎಂಎಫ್ ಅಧ್ಯಕ್ಷ ಸ್ಥಾನ ಕೊಟ್ಟಿದ್ದಾರೆ. ಎಲ್ಲರಿಗೂ ಅಭಿನಂದನೆ ಸಲ್ಲಿಸುತ್ತೇನೆ ಎಂದರು.ಗೋಷ್ಠಿಯಲ್ಲಿ ಕಾಂಗ್ರೆಸ್‌ ಮುಖಂಡರಾದ ಅಬ್ದುಲ ಹಮೀದ್ ಮುಶ್ರಿಫ್, ಎಸ್.ಎಂ.ಪಾಟೀಲ್ ಗಣಿಹಾರ, ಸೋಮನಾಥ ಕಳ್ಳಿಮನಿ, ವಸಂತ ಹೊನಮೊಡೆ, ಜಮೀರ ಭಕ್ಷಿ, ಸಿದ್ದುಗೌಡ ಸೇರಿದಂತೆ ಇತರರು ಉಪಸ್ಥಿತರಿದ್ದರು.

ಕೋಟ್‌...ಎಲ್ಲ ರಾಜ್ಯಗಳಿಗಿಂತಲೂ ನಮ್ಮಲ್ಲಿ ಚೀಪ್ ಲಿಕ್ಕರ್ ಕಡಿಮೆ ಇದೆ(ಜನಸಾಮಾನ್ಯರ ಬಳಸುವ ಮದ್ಯ). ಪ್ರಿಮಿಯಂ ದರ ಹೆಚ್ಚಿಗೆ ಇದೆ. ಅದಕ್ಕೆ ಮುಖ್ಯ ಕಾರಣಗಳೆಂದರೇ ಲಿಕ್ಕರಗಿಂತಲೂ ಬೀಯರ್ ಹೆಚ್ಚಿಗೆ ಮಾರಾಟವಾಗುತ್ತಿದೆ. ಅದರಲ್ಲಿ ಶುಗರ್ ಕಂಟೆಂಟ್ ಹೆಚ್ಚಿಗೆ ಮಾಡಿದ್ದರು. ಅದನ್ನು ಕಂಟ್ರೋಲ್ ಮಾಡಲು ಬಿಯರ್‌ ದರ ಹೆಚ್ಚಿಸಲಾಗಿದೆ.

-ಆರ್‌.ಬಿ.ತಿಮ್ಮಾಪುರ, ಸಚಿವರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಲಕ್ಷ್ಮೀ ಹೆಬ್ಬಾಳಕರ್‌ ಬ್ಯಾಟಿಂಗ್‌ಗೆ ಶಾಸಕ ಆಸೀಫ್ ಸೇಠ್ ಬೋಲ್ಡ್‌
ಮೆಟ್ರೋ ದರ ಏರಿಸಿದ್ದು ನಾವಲ್ಲ, ಕೇಂದ್ರ : ಸಿಎಂ ಸಿದ್ದರಾಮಯ್ಯ