ಚುನಾವಣೆಯಲ್ಲಿ ಮಾತ್ರ ರಾಜಕಾರಣಕ್ಕೆ ಅವಕಾಶ

KannadaprabhaNewsNetwork |  
Published : Jun 23, 2026, 02:00 AM IST
ಫೋಟೋ 19ಪಿವಿಡಿ6ತಾಲೂಕಿನ ಬಿ.ಹೊಸಹಳ್ಳಿಯಲ್ಲಿ ಕೃಷಿ ಇಲಾಖೆಯ ವತಿಯಿಂದ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ರೈತರಿಗೆ ಉಚಿತ ಶೇಂಗಾ ಬಿತ್ತನೆ ಬೀಜ ಪಾಕೇಟ್‌ಗಳನ್ನು ಶಾಸಕ ಎಚ್‌.ವಿ.ವೆಂಕಟೇಶ್‌ ವಿತರಿಸಿದರು.ಫೋಟೋ 19ಪಿವಿಡಿ7ಮರಿದಾಸನಹಳ್ಳಿ ಗ್ರಾಮದ ವಿಎಸ್‌ಎಸ್‌ಎನ್‌ ಕಟ್ಟಡಕ್ಕೆ 25 ಲಕ್ಷ ವೆಚ್ಚದ ಕಾಂಪೌಂಡ್ ನಿರ್ಮಾಣಕ್ಕೆ ಶಾಸಕ ಎಚ್‌.ವಿ.ವೆಂಕಟೇಶ್‌ ಗುದ್ದಲಿಪೂಜೆ ನೆರೆವೇರಿಸಿದರು. | Kannada Prabha

ಸಾರಾಂಶ

ಕೃಷಿ ಇಲಾಖೆಯ ವತಿಯಿಂದ ತಾಲೂಕಿನ ಬಿ.ಹೊಸಹಳ್ಳಿ ಹಾಗೂ ಮರಿದಾಸನಹಳ್ಳಿ ಗ್ರಾಮಗಳಲ್ಲಿ ಉಚಿತ ಶೇಂಗಾ ಬಿತ್ತನೆ ಬೀಜ ವಿತರಣೆಗೆ ಚಾಲನೆ

ಕನ್ನಡಪ್ರಭ ವಾರ್ತೆ ಪಾವಗಡಜಮೀನುಗಳಲ್ಲಿ ಮುಂಗಾರು ಬಿತ್ತನೆ ಹಿನ್ನಲೆಯಲ್ಲಿ ತಾಲೂಕು ಕೃಷಿ ಇಲಾಖೆ ವತಿಯಿಂದ ಗ್ರಾಮೀಣ ರೈತರಿಗೆ ಉಚಿತ ಶೇಂಗಾ ಬೀಜ ವಿತರಣೆಗೆ ಚಾಲನೆ ನೀಡಿದ್ದು ಪ್ರತಿಯೊಬ್ಬ ರೈತರಿಗೂ ಬಿತ್ತನೆ ಬೀಜ ವಿತರಿಸುವಂತೆ ಶಾಸಕ ಹಾಗೂ ತುಮುಲ್‌ ಅಧ್ಯಕ್ಷ ಎಚ್‌.ವಿ.ವೆಂಕಟೇಶ್‌ ಅಧಿಕಾರಿಗಳಿಗೆ ತಾಕೀತು ಮಾಡಿದರು. ತಾಲೂಕು ಕೃಷಿ ಇಲಾಖೆಯ ವತಿಯಿಂದ ತಾಲೂಕಿನ ಬಿ.ಹೊಸಹಳ್ಳಿ ಹಾಗೂ ಮರಿದಾಸನಹಳ್ಳಿ ಗ್ರಾಮಗಳಲ್ಲಿ ಉಚಿತ ಶೇಂಗಾ ಬಿತ್ತನೆ ಬೀಜ ವಿತರಣೆಗೆ ಚಾಲನೆ ನೀಡಿ ಅವರು ಮಾತನಾಡಿದರು. ಪಾವಗಡ ಬಯಲು ಸೀಮೆ ವ್ಯಾಪ್ತಿಗೆ ಒಳಪಟ್ಟ, ಕೃಷಿ ಪ್ರಧಾನ ತಾಲೂಕಾಗಿದೆ. ಬರದ ಹಿನ್ನೆಲೆಯಲ್ಲಿ ರೈತರು ಅನೇಕ ಸಂಕಷ್ಟಗಳಿಗಿಡಾಗಿದ್ದಾರೆ. ಚುನಾವಣೆಯಲ್ಲಿ ಮಾತ್ರ ರಾಜಕಾರಣ ಮಾಡಬೇಕು. ಬಳಿಕ ಎಲ್ಲರೂ ನಮ್ಮವರೆ ಎಂದು ಕಾಣಬೇಕು. ನನ್ನದು ಅಭಿವೃದ್ಧಿಯ ಮಂತ್ರ ಚುನಾವಣೆಯಲ್ಲಿ ಶಕ್ತಿ ಮೀರಿ ಹೋರಾಟ ಮಾಡುತ್ತೇನೆ. ಜನತೆಯ ಅಶೀರ್ವಾದ ಖಂಡಿತ ನನ್ನ ಮೇಲೆ ಇದ್ದೆ ಇರುವ ವಿಶ್ವಾಸ ವ್ಯಕ್ತಪಡಿಸಿದರು.

ಗಡಿ ಪ್ರಾಂತ್ಯದ ವಿದ್ಯಾರ್ಥಿಗಳ ಶೈಕ್ಷಣಿಕ ಪ್ರಗತಿ ಹಾಗೂ ಖಾಸಗಿ ಕಾನ್ವೆಂಟ್‌ಗಳ ವಿಪರೀತ ಸುಲಿಗೆ ತತಪ್ಪಿಸುವ ಹಿನ್ನಲೆಯಲ್ಲಿ ಕರ್ನಾಟಕ ಪಬ್ಲಿಕ್‌ ಶಾಲೆ ಮಂಜೂರಾತಿಯಾಗಿದ್ದು, ಪ್ರಯೋಗಿಕವಾಗಿ ಕೋಟ್ಯಂತರ ರು.ವೆಚ್ಚದಲ್ಲಿ ನಮ್ಮ ಸ್ವ ಗ್ರಾಪಂ ಕೇಂದ್ರ, ಮರಿದಾಸನಹಳ್ಳಿ ಗ್ರಾಮದಲ್ಲಿ ತೆರೆಯಲಿದ್ದು ಗ್ರಾಪಂಗೆ ಒಳಪಟ್ಟ 6ಗ್ರಾಮಗಳ ಸರ್ಕಾರಿ ಶಾಲೆಗಳನ್ನು ಮುಚ್ಚಿಸುವ ಮೂಲಕ,ಅಲ್ಲಿನ ವಿದ್ಯಾರ್ಥಿಗಳನ್ನು ಕೆಪಿಎಸ್‌ ಶಾಲೆಗೆ ಸ್ಥಳಾಂತರಿಸಿ . ಮನೆಯಿಂದ ಶಾಲೆಯ ವಿದ್ಯಾರ್ಥಿಗಳ ಓ ಡಾಟಕ್ಕೆ ಶಾಸಕರ ಅನುದಾನದಲ್ಲಿ ಎರಡು ಬಸ್‌ ನಿಯೋಜಿಸಲಾಗುವುದು. ಆ ಶಾಲೆಗಳ ಶಿಕ್ಷಕರನ್ನು ಇದೇ ಶಾಲೆಗೆ ನಿಯೋಜಿಸಲಾಗುವುದಾಗಿ ತಿಳಿಸಿದ ಅವರು, ಹಂತಹಂತವಾಗಿ ತಾಲೂಕಿನ ಅನೇಕ ಗ್ರಾಪಂ ಕೇಂದ್ರ ಸ್ಥಾನಗಳಲ್ಲಿ ಕೆಪಿಎಸ್‌ ಶಾಲೆ ತೆರೆಯುವ ಭರವಸೆ ವ್ಯಕ್ತಪಡಿಸಿದರು.

ಹುಟ್ಟು ಸಾವು ಸಹಜ, ದ್ವೇಷದ ರಾಜಕಾರಣ ಮಾಡಲ್ಲ. ಬಹುತೇಕ ಎಲ್ಲರ ಬಳಿಯು ಹಣವಿದೆ. ಚುನಾವಣೆಗಳಲ್ಲಿ ದುಡ್ಡು, ದರ್ಪದಿಂದ ಗೆಲ್ಲಲು ಸಾಧ್ಯವಿಲ್ಲ. ಅಭಿವೃದ್ಧಿ ಹಾಗೂ ಜನತೆಯ ಪ್ರೀತಿ ವಿಶ್ವಾಸದಿಂದ ಮಾತ್ರ ಜಯಸಾಧಿಸಲು ಸಾಧ್ಯ. ಪ್ರಗತಿಗೆ ಹೆಚ್ಚು ಒತ್ತು ನೀಡಿ ಕೆಲಸ ಮಾಡುತ್ತಿದ್ದೇನೆ. ಇದೇ ಗ್ರಾಮದಲ್ಲಿ ಬ್ಯಾಂಕಿಂಗ್‌ ವ್ಯವಸ್ಥೆ ಜಾರಿಗೆ ತರುವ ನಿಟ್ಟಿನಲ್ಲಿ 25ಲಕ್ಷ ವೆಚ್ಚದ ವಿಎಸ್‌ಎಸ್‌ ಎನ್‌ ನೂತನ ಕಟ್ಟಡ ನಿರ್ಮಾಣಕ್ಕೆ ಗುದ್ದಲಿ ಪೂಜೆ ನೆರೆವೇರಿಸಿದ್ದು, ಹೈನುಗಾರಿಕೆ ಉತ್ತೇಜನ ನೀಡುವ ಮೂಲಕ ಸೀಮೆ ಹಸು ಖರೀದಿಗೆ ಹಣ ಕಲ್ಪಿಸಿಕೊಡುವಂತೆ ಸೊಸೈಟಿ ಕಾರ್ಯದರ್ಶಿಗೆ ತಾಕೀತು ಮಾಡಿದರು.

ಈ ವೇಳೆ ಭೂಸೇನಾ ನಿಗಮದ ಎಇಇ ಸಿಂಧು, ತುಮುಲ್‌ ನಿರ್ದೇಶಕ ಚಂದ್ರಶೇಖರರೆಡ್ಡಿ, ರವಿ,ಈರಕ್ಯಾತಪ್ಪ,ಜಗನ್ನಾಥಪ್ಪ,ಹೆಂಜಾರಪ್ಪ,ಟಿಪಿಎಸ್‌ ಹನುಮಂತರಾಯಪ್ಪ, ಗುಡಿಪಲ್ಲಿ ರಂಗಪ್ಪ, ತಿಪ್ಪೇಸ್ವಾಮಿ, ಕೃಷಿ ಇಲಾಖೆ ಎಡಿ ಅಜಯ್‌ ಕುಮಾರ್,ಬಾಲಾಜಿ,ಮಲ್ಲಣ್ಣ, ವೆಂಕಟೇಶ್,ಆನಂದ್,ಕೇಶವರೆಡ್ಡಿ,ಮಂಜುನಾಥ ರೆಡ್ಡಿ,ವಸಂತರೆಡ್ಡಿ, ಭೀಮರೆಡ್ಡಿ ಮಾರಣ್ಣ ರವಿಕುಮಾರ್‌ ಇತರೆ ಅನೇಕ ಮುಖಂಡರು ಉಪಸ್ಥಿತರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಹುಲಿಗಿ ಕ್ರಾಸ್ ಮೇಲ್ಸೇತುವೆ ಲೋಕಾರ್ಪಣೆ
ಅಡವಿಟ್ಟ ಚಿನ್ನ ಕೇಳಿದ್ದಕ್ಕೆ ಗುಂಡಿನ ದಾಳಿ