ಕನ್ನಡಪ್ರಭ ವಾರ್ತೆ ಮುದ್ದೇಬಿಹಾಳ
ನೂತನ ಅಧ್ಯಕ್ಷ ಮೈಬೂಬ ಗೊಳಸಂಗಿ ಅಧಿಕಾರ ಸ್ವೀಕರಿಸಿ ಮಾತನಾಡಿ, ಶಾಸಕರು ಹಾಗೂ ಕರ್ನಾಟಕ ರಾಜ್ಯ ಸಾಬೂನು ಮಾತ್ತು ಮಾರ್ಜಕ ನಿಗಮದ ಅಧ್ಯಕ್ಷ ಸಿ.ಎಸ್.ನಾಡಗೌಡ(ಅಪ್ಪಾಜಿ) ಅವರ ಆಶೀರ್ವಾದ ಹಾಗೂ ಪಟ್ಟಣದ ಬಹುತೇಕ ಕಾಂಗ್ರೆಸ್ ಮುಖಂಡರು, ಕಾರ್ಯಕರ್ತರು, ಸ್ನೇಹಿತರು ಸಂಪೂರ್ಣ ಸಹಕಾರ ನೀಡಿದ್ದರಿಂದ ಅಧ್ಯಕ್ಷ, ಉಪಾಧ್ಯಕ್ಷರಾಗಿ ಆಯ್ಕೆಯಾಗಲು ಸಾಧ್ಯವಾಗಿದೆ. ಎಲ್ಲರಿಗೂ ಧನ್ಯವಾದಗಳು ಎಂದರು.
ಚುನಾವಣೆಯಲ್ಲಿ ಅವರವರ ಪಕ್ಷ ಮತ್ತು ಸ್ವಾಭಿಮಾನಕ್ಕಾಗಿ ಅಧಿಕಾರದ ಗದ್ದುಗೆ ಹಿಡಿಯುವ ಪ್ರಯತ್ನದಲ್ಲಿ ಸದಸ್ಯರು ಬೇರೆಬೇರೆಯಾಗಿ ರಾಜಕಾರಣ ಮಾಡುವುದು ಸ್ವಾಭಾವಿಕ. ಇನ್ನು ಮುಂದೆ ನಾವೆಲ್ಲರೂ ಒಂದೇ ಎಂದು ತಿಳಿದು ವೈಮನಸುಗಳನ್ನು ಮರೆತು ಜಾತ್ಯಾತೀತವಾಗಿ, ಪಕ್ಷಾತೀತವಾಗಿ ಪಟ್ಟಣದ ಅಭಿವೃದ್ಧಿಗಾಗಿ, ಸಮಸ್ಯೆಗಳ ನಿವಾರಣೆಗೆ ಕೆಲಸ ಮಾಡೋಣ. ಇದಕ್ಕೆ ಎಲ್ಲರ ಸಹಕಾರ ನೀಡುವಂತೆ ಕೋರಿದರು.ಈ ವೇಳೆ ಕಾಂಗ್ರೆಸ್ ಮುಖಂಡ ಸಿ.ಬಿ.ಅಸ್ಕಿ ನೂತನ ಅಧ್ಯಕ್ಷ, ಉಪಾಧ್ಯಕ್ಷರನ್ನು ಸನ್ಮಾನಿಸಿ ಮಾತನಾಡಿದರು. ಒಂದೂವರೆ ವರ್ಷದಿಂದ ಪುರಸಭೆಗೆ ಅಧಿಕಾರವಿಲ್ಲದೇ ಅಭಿವೃದ್ಧಿ ಕುಂಠಿತವಾಗಿತ್ತು. ಕಳೆದ 20 ವರ್ಷಗಳ ಹಿಂದೆ ಮುಸ್ಲಿಂ ಸಮುದಾಯದ ರಸೂಲ ದೇಸಾಯಿ ಅಧ್ಯಕ್ಷರಾಗಿದ್ದರು. ಅದಾದ ಬಳಿಕ, ಮುಸ್ಲಿಂ ಸಮಾಜದವರು ಅಧ್ಯಕ್ಷರಾಗಿರಲಿಲ್ಲ. ಸದ್ಯ ಸಾಮಾನ್ಯ ವರ್ಗಕ್ಕೆ ಮೀಸಲಾತಿ ಇದ್ದರೂ ಸ್ಥಳೀಯ ಶಾಸಕರುಮೈಬೂಬ ಗೊಳಸಂಗಿ ಅವರನ್ನು ಅಧ್ಯಕ್ಷರನ್ನಾಗಿ ಮಾಡಿ ಸಮುದಾಯಕ್ಕೆ ಗೌರವ ನೀಡಿದ್ದಾರೆ. ಅವರ ಜನಪರ ಕಾಳಜಿ ಹಾಗೂ ಸಲಹೆ ಸೂಚನೆ ಮೇರೆಗೆ ಪಟ್ಟಣದ ಅಭಿವೃದ್ಧಿಗೆ ಹೆಚ್ಚು ಒತ್ತು ನೀಡಿ ನಾಡಗೌಡ ಹೆಸರಿಗೆ ಕಳಂಕ ಬರದಂತೆ ಕೆಲಸ ಮಾಡುವಂತೆ ಸಲಹೆ ನೀಡಿದರು.
ಈ ಸಂದರ್ಭದಲ್ಲಿ ಪ್ರತಿಭಾ ಅಂಗಡಗೇರಿ, ಭಾರತಿ ಪಾಟೀಲ, ಸಂಗಮ್ಮ ದೇವರಳ್ಳಿ, ಚನ್ನಪ್ಪ ಕಂಠಿ, ವಿರೇಶ ಹಡಲಗೇರಿ, ಹಣಮಂತ ಭೋವಿ, ಯಲ್ಲಪ್ಪ ನಾಯಕಮಕ್ಕಳ, ಅಶೋಕ ವನಹಳ್ಳಿ, ಸಹನಾ ಬಡಿಗೇರ, ಶಾಹಾಜಾದಬಿ ಹುಣಸಗಿ, ಸದಾಶಿವ ಮಾಗಿ, ಮುಖಂಡರಾದ ಸಿ.ಬಿ.ಅಸ್ಕಿ, ರುದ್ರುಗೌಡ ಅಂಗಡಗೇರಿ ಕಾಮರಾಜ ಬಿರಾದಾರ, ವಾಯ್ ಎಚ್ ವಿಜಯಕರ, ಸಂಗಪ್ಪ ಮೇಲಿನಮನಿ, ಸದಾಶಿವ ಮಠ, ಬಾಪ್ ಢವಳಗಿ, ಮುನ್ನಾ ಮಕಾಂದಾರ, ಹರೀಶ ಬೇವೂರ,ನೀಲಮ್ಮ ಬೋರಾವತ್ ಇತರರಿದ್ದರು.--------------
ಕುಡಿಯುವ ನೀರು ಯೋಜನೆಗೆ ಟೆಂಡರ್