ಕುಶಾಲನಗರ : ರಾಜಕಾರಣ ಎಂದರೆ ಸತ್ಯದ ನಿಲುವು ತೋರಿಸುವುದು, ಪ್ರಜಾಪ್ರಭುತ್ವ ಗಟ್ಟಿಗೊಳಿಸುವುದು ಎಂದು ವಿರಾಜಪೇಟೆ ಅರಮೇರಿ ಕಳಂಚೇರಿ ಮಠದ ಶ್ರೀ ಶಾಂತಮಲ್ಲಿಕಾರ್ಜುನ ಸ್ವಾಮೀಜಿ ಪ್ರತಿಪಾದಿಸಿದರು.ಸಮಾನ ಮನಸ್ಕರು ಹಾಗೂ ಹಿತೈಷಿಗಳ ಬಳಗದ ವತಿಯಿಂದ ಇಲ್ಲಿನ ಬೈಚನಹಳ್ಳಿ ಎಸ್.ಎಲ್.ಎನ್ ಸಭಾಂಗಣದಲ್ಲಿ ನಡೆದ 35 ವರ್ಷದ ರಾಜಕೀಯ ಜೀವನ ಪೂರೈಸಿದ ಹೋರಾಟಗಾರ ವಿ.ಪಿ.ಶಶಿಧರ್ ಅವರಿಗೆ ನಾಗರಿಕ ಸನ್ಮಾನ ನೆರವೇರಿಸಿ ಅವರು ಮಾತನಾಡಿದರು.ನೈತಿಕಯನ್ನು ಕಳೆದುಕೊಂಡ ರಾಜಕೀಯ ಸಮಾಜಕ್ಕೆ ವಿನಾಶಕಾರಿ-ಯಾಗುತ್ತದೆ ಎಂದು ಅವರು ಇದೇ ವೇಳೆ ಎಚ್ಚರಿಸಿದರು.
ಶಾಸಕ ಡಾ.ಮಂತರ್‌ಗೌಡ ಮಾತನಾಡಿ, ಎಂಜಿನಿಯರ್ ವಿದ್ಯಾಭ್ಯಾಸ ಮಾಡಿಕೊಂಡು ಬಂದು ಗ್ರಾಮೀಣ ಭಾಗದಲ್ಲಿ ಸಾರ್ವಜನಿಕ ಸೇವೆ ಮಾಡುವುದು ಅಪರೂಪ ಎಂದರು.
ಕೊಡಗು ವಿಶ್ವವಿದ್ಯಾಲಯದ ಕುಲಪತಿ ಅಶೋಕ್ ಸಂಗಪ್ಪ ಆಲೂರ ಮಾತನಾಡಿ, ನಾಯಕರಾದವರು ಧೈರ್ಯ ಕಳೆದು ಕೊಳ್ಳಬಾರದು, ತತ್ವ ಸಿದ್ಧಾಂತದಿಂದ ಸಾಗಿದರೆ ನಾಗರಿಕರಿಂದ ಪ್ರೀತಿ, ಗೌರವ ಸಿಗುತ್ತದೆ ಎಂದರು.35 ವರ್ಷಗಳ ರಾಜಕೀಯ ಜೀವನದಲ್ಲಿ ಶಶಿಧರ್ ತಮ್ಮನ್ನು ಸಮಾಜದ ಸೇವೆಗೆ ಅರ್ಪಿಸಿಕೊಂಡು ಅಭಿವೃದ್ಧಿಗೆ ಶ್ರಮಿಸಿದ್ದಾರೆ ಎಂದು ಹೇಳಿದರು.ಸನ್ನಡತೆ, ಶಿಸ್ತು, ಸಮಯ ಪ್ರಜ್ಞೆ, ಸಂಸ್ಕಾರ, ಸಂಯಮವನ್ನು ಮೈಗೂಡಿಸಿಕೊಂಡಲ್ಲಿ ಯಶಸ್ಸು ಮನೆ ನಿವೃತ್ತ ಮುಖ್ಯ ಶಿಕ್ಷಕ ಎಂ.ಎಚ್. ನಜೀರ್ ಅಹಮದ್ ಕಾರ್ಯಕ್ರಮ ಉದ್ಘಾಟಿಸಿ ಶುಭ ಕೋರಿದರು. ಪತ್ರಿಕೋದ್ಯಮಿ ಜಿ.ಚಿದ್ವಿಲಾಸ್, ಕೆಪಿಸಿಸಿ ವಕ್ತಾರ ಎಂ.ಲಕ್ಷ್ಮಣ್ ಮಾತನಾಡಿದರು.ಮಹಾನಗರ ಸಂಸ್ಥೆಯ ಅಧ್ಯಕ್ಷ ನಿಕೇತ್ ರಾಜ್ ಮೌರ್ಯ, ಸಾಮಾಜಿಕ ಕೆಪಿಸಿಸಿ ವಕ್ತಾರ ಪತ್ರಿಕೋದ್ಯಮಿ ಬೆಂಗಳೂರು ಸಾರಿಗೆ ಚಿಂತಕ ಎಚ್.ಕೆ.ವಿವೇಕಾನಂದ, ಸಿಂಚನಾ ಶಶಿಧರ್, ಹೈಕೋರ್ಟ್ ಹಿರಿಯ ವಕೀಲ ಎಚ್.ಎಸ್.ಚಂದ್ರಮೌಳಿ, ವೀರಶೈವ ಮಹಾಸಭಾದ ಜಿಲ್ಲಾಧ್ಯಕ್ಷಎಚ್.ವಿ.ಶಿವಪ್ಪ, ವಿ.ಎಸ್.ಆನಂದ್ ಕುಮಾರ್, ಕೆ.ಎಸ್.ಕೃಷ್ಣಗೌಡ, ಉ.ರಾ.ನಾಗೇಶ್, ನಂಜುಂಡಸ್ವಾಮಿ ಪಾಲ್ಗೊಂಡಿದ್ದರು.