ಕೊಪ್ಪಳ: ಮಾಲಿನ್ಯಕಾರಕ ಕಾರ್ಖಾನೆ ತೊಲಗಬೇಕು ಎಂದು ನಗರಸಭಾ ಮಾಜಿ ಅಧ್ಯಕ್ಷ ಅಕ್ಬರ್ ಪಾಶ ಪಲ್ಟನ್ ಹೇಳಿದರು.
ಮುಖ್ಯಮಂತ್ರಿಗಳು ಶೀಘ್ರ ಬಾಧಿತ ಹಳ್ಳಿಗಳಿಗೆ ಭೇಟಿ ಮಾಡಿ ಜನರ ನಿಜ ಸ್ಥಿತಿ ತಿಳಿದು ಬೇಗ ಆತಂಕ ದೂರ ಮಾಡಲಿ. ಕಳಕಳಿಯಿಂದ ಯೋಚಿಸುವ ಗುಣ ಹೊಂದಿರುವ ಮುಖ್ಯಮಂತ್ರಿಗಳು ಈ ವಿಚಾರದಲ್ಲಿ ಕೊಪ್ಪಳ ಜನರ ಆತಂಕ ದೂರ ಮಾಡುತ್ತಾರೆ ಎನ್ನುವ ವಿಶ್ವಾಸವಿದೆ.ಈ ಹೋರಾಟ ತಡ ಮಾಡದೆ ತೀವ್ರಗೊಳಿಸಲು ಮುಂದಾದರೆ ಸರ್ಕಾರದ ಮೇಲೆ ಒತ್ತಡ ಬೀಳಲಿದೆ ಎಂದರು.
ಜಂಟಿ ಕ್ರಿಯಾ ವೇದಿಕೆಯ ತಂಡದಿಂದ ನಗರದಲ್ಲಿ ಗವಿಶ್ರೀನಗರ, ಸದಾಶಿವನಗರ, ಕಿನ್ನಾಳ ರಸ್ತೆಯ ಅಗಡಿ ಲೇಔಟ್ ಏರಿಯಾಕ್ಕೆ ತೆರಳಿ ಕರಿಬೂದಿಯ ದರ್ಶನ ಮಾಡಿತು.ಅಲ್ಲಿನ ಗೃಹಿಣಿಯರಿಂದ ನೆಲಹಾಸು ತೊಳೆದು,ತಿಳಿ ನೀರು ಕರಿ ನೀರಿಗೆ ಬದಲಾಗುವ ದೃಶ್ಯ ಕಂಡು ಬಂತು. ಅಲ್ಲಿನ ಗೃಹಿಣಿಯರು ಅಕ್ಟೋಬರ್, ಎಪ್ರೀಲ್ ಕೊನೆವರೆಗೆ ಇದೆ ಧೂಳು, ಕರಿಬೂದಿ ಮನೆಯ ಪ್ರತಿ ಜಾಗದಲ್ಲಿ ಮೆತ್ತಿಕೊಳ್ಳುತ್ತದೆ ಎನ್ನುತ್ತಾರೆ. ಹೊರಗೆ ಕಾಣುವುದಿಷ್ಟು ದಿನಾಲು ಉಸಿರಾಟ ಮಾಡಿ ಎಷ್ಟು ಸೇವಿಸುತ್ತೇವೊ ಗೊತ್ತಾಗುವುದಿಲ್ಲ. ನಮ್ಮ ರೋಗಗಳಿಗೆ ಇದೆ ಧೂಳು, ಕರಿಬೂದಿ ಹೆಚ್ಚಿನ ಕಾರಣ ಎಂದರು.ಪ್ರಧಾನ ಸಂಚಾಲಕ ಅಲ್ಲಮಪ್ರಭು ಬೆಟ್ಟದೂರು ಮಾತನಾಡಿ, ಮಹಿಳೆಯರು ಜಾಗೃತರಾಗಿ ಹೋರಾಟ ಮಾಡಲು ಮುಂದೆ ಬರಬೇಕು. ಪರಿಸ್ಥಿತಿ ಕಳೆದುಕೊಂಡು ಮರುಗುವದಕ್ಕಿಂತ ಮುಂಜಾಗ್ರತೆಯ ಯೋಚನೆ ಮಾಡಿ ಎಂದು ಆಂದೋಲನ ನಡೆಸಲಾಯಿತು.
ಧರಣಿಯಲ್ಲಿ ಯುವ ಮುಖಂಡ ಗ್ಯಾನೇಶ ಹ್ಯಾಟಿ ಭಾಗ್ಯನಗರ, ನಿವೃತ್ತ ಪ್ರಾಚಾರ್ಯ ಎಸ್. ಬಿ.ರಾಜೂರು, ಮಹಾದೇವಪ್ಪ ಮಾವಿನಮಡು, ಶಿವಪ್ಪ ಜಲ್ಲಿ, ರತ್ನಮ್ಮ ದೊಡ್ಡಮನಿ, ಗಂಗಮ್ಮ ಕೊಡೇಕಲ್, ರವಿ ಕಾಂತನವರ, ಮಹಾಂತೇಶ ಕೊತಬಾಳ, ನಾಗರಾಜ ಕುಷ್ಟಗಿ, ಮಕ್ಬುಲ್ ರಾಯಚೂರು, ಎಂ.ಎಸ್. ಗಂಟಿ, ಶಂಭುಲಿಂಗಪ್ಪ ಹರಗೇರಿ, ಪಂಪಣ್ಣ ಚಿಂತಪಲ್ಲಿ, ಅಯ್ಯಪ್ಪ ಹಳ್ಳಿ, ಫೈಯಾಜ್ ಅಮೀದ್, ಭೀಮಪ್ಪ ಯಲಬುರ್ಗಾ, ಸುಂಕಮ್ಮ ಪಡಚಿಂತಿ ಮುಂತಾದವರು ಇದ್ದರು.