ಕನ್ನಡಪ್ರಭ ವಾರ್ತೆ ಉಡುಪಿ
ಪ್ರಕರಣವೊಂದರಲ್ಲಿ ಬೆಳ್ತಂಗಡಿ ಪೊಲೀಸರು ತಪ್ಪಿತಸ್ಥ ಆರೋಪಿಗಳನ್ನು ಬಂಧಿಸಿದ್ದನ್ನು ನೆಪವಾಗಿಸಿಕೊಂಡ ಶಾಸಕರು, ಠಾಣೆಗೆ ನುಗ್ಗಿ ಪೊಲೀಸರನ್ನು ಏರುಧ್ವನಿಯಿಂದ ಬೈದು ಅವಾಚ್ಯ ಶಬ್ದದಿಂದ ಅವಹೇಳನಗೈದಿದ್ದಾರೆ. ಪೊಲೀಸರು ಕಾನೂನು ಸುವ್ಯವಸ್ಥೆ ಕಾಪಾಡಲು ಇರುವವರು. ಅವರಿಗೆ ಅವಾಚ್ಯ ಶಬ್ದಗಳಿಂದ ನಿಂದಿಸಿ ಅವರ ಕಾಲರ್ ಹಿಡಿಯುತ್ತೇನೆ ಎಂದು ಹೇಳುವುದು ಒಬ್ಬ ಜನಪ್ರತಿನಿಧಿಗೆ ಶೋಭೆ ತರುವುದಿಲ್ಲ ಎಂದವರು ಹೇಳಿದ್ದಾರೆ.
ಅಧಿಕಾರ ಯಾವತ್ತೂ ಶಾಶ್ವತವಲ್ಲ. ಜನಸೇವೆ ಮಾಡಲು ಕ್ಷೇತ್ರದ ಜನರು ಶಾಸಕರನ್ನು ಆಯ್ಕೆಮಾಡಿದ್ದಾರೆ. ಇಂದು ಗೆಲ್ಲಿಸಿದ ಜನರು ನಾಳಿನ ದಿನ ತಿರುಗಿಬೀಳಬಹುದು. ಶಾಸಕರಾದವರಿಗೆ, ಸಾಮಾನ್ಯರಿಗೆ ಈ ನೆಲದ ಕಾನೂನು ಒಂದೇ ಎನ್ನುವ ಕನಿಷ್ಠ ಜ್ಞಾನ ಇರದೇ ಇರುವುದು ನಾಚಿಕೆಗೇಡು. ಕಳೆದ ಬಾರಿ ಕೂಡ ಶಾಸಕ ಹರೀಶ್ ಪೂಂಜ, ಇಂತಹ ವರ್ತನೆ ತೋರಿಸಿ ಸಮಾಜದಲ್ಲಿ ಶಾಂತಿ ಕದಡುವ ಕೆಲಸ ಮಾಡಿದ್ದು, ಮತ್ತೆ ಇದೇ ವರ್ತನೆ ಪುನರಾವರ್ತನೆ ತೋರಿಸಿದ್ದು ಅವರ ಕೆಟ್ಟ ವರ್ತನೆಗೆ ಪೊಲೀಸ್ ಕ್ರಮ ಅಗತ್ಯವಾಗಿ ಎಂದು ರಮೇಶ್ ಕಾಂಚನ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.