ಚಿತ್ರದುರ್ಗ: ರೈತರಿಗೆ ವಿತರಿಸಿರುವ ಕಳಪೆ ಹಾಗೂ ಅವಧಿ ಮೀರಿದ ಗೊಬ್ಬರ ಸರಬರಾಜಿನಲ್ಲಿ ಭ್ರಷ್ಟ ಅಧಿಕಾರಿಗಳು ಶಾಮೀಲಾಗಿದ್ದು, ಸಂಪೂರ್ಣ ತನಿಖೆ ನಡೆಸುವ ಮೂಲಕ ಜಂಟಿ ನಿರ್ದೆಶಕರನ್ನು ಅವನತ್ತುಗೊಳಿಸಬೇಕೆಂದು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರುಸೇನೆ ಜಿಲ್ಲಾಧಿಕಾರಿಗಳ ಮೂಲಕ ಕೃಷಿ ಸಚಿವರನ್ನು ಒತ್ತಾಯಿಸಿತು.
ರೈತರು ಬೆಳೆಗೆ ಗೊಬ್ಬರ ಹಾಕಿದ ಮೇಲೆ ಚೀಲದ ಮೇಲೆ ಇರುವ ದಿನಾಂಕವನ್ನು ನೋಡಿ ಚಿತ್ರದುರ್ಗ ಜಂಟಿ ಕೃಷಿ ನಿರ್ದೇಶಕರನ್ನು ವಿಚಾರಸಲು ಹೋದಾಗ ರೈತರಿಗೆ ಅವಾಚ್ಯ ಶಬ್ದಗಳಿಂದ ಅವಮಾನ ಮಾಡಿದ್ದು, ಈ ಬಗ್ಗೆ ಜಿಲ್ಲಾಧಿಕಾರಿಯ ಗಮನಕ್ಕೂ ತಂದಿದ್ದರೂ ಅಧಿಕಾರಿ ವಿರುದ್ಧ ಯಾವುದೇ ಶಿಸ್ತು ಕ್ರಮ ತೆಗೆದು ಕೊಂಡಿಲ್ಲ. ಅವಧಿ ಮೀರಿದ ಗೊಬ್ಬರ ಹಾಕಿ ರೈತರಿಗೆ ಬೆಳೆ ನಷ್ಟವಾಗುತ್ತಿದ್ದರೂ ಸ್ಥಳ ಪರೀಶೀಲನೆ ಮಾಡಲು ಅಧಿಕಾರಿಗಳು ಭೇಟಿ ನೀಡಿಲ್ಲ. ಸೊಸೈಟಿಯಲ್ಲಿ ದಾಸ್ತನು ಇರುವ ಗೊಬ್ಬರ ಮಾತ್ರ ವಾಪಾಸ್ಸು ಪಡೆದಿದ್ದಾರೆ ಎಂದು ದೂರಿದರು.
ಭರಮಸಾಗರ ಹೋಬಳಿ, ಚಿಕ್ಕಬೆನ್ನೂರು, ಕೋಗುಂಡೆ, ಕೊಡಿಹಳ್ಳಿ, ಬಹದ್ದೂರುಘಟ್ಟ, ಬಿತ್ತನೆ ಮಾಡಿದ ಮೇಕ್ಕೆಜೋಳ ಪೈನ್ ಇಯರು 34-07 ಹಾಗೂ ಅಡ್‍ವಂಟ ಕಂಪನಿಯ ಬೀಜ ಹುಟ್ಟಿರುವುದಿಲ್ಲ. ಆದರಿಂದ ತಕ್ಷಣ ಬೀಜ, ಗೊಬ್ಬರ ಮತ್ತು ಪರಿಹಾರ ನೀಡಬೇಕು. ಮತ್ತು ಕಳಪೆ ಬೀಜ ಮಾರಾಟ ಮಾಡಿರುವವರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳಬೇಕು ಎಂದು ಒತ್ತಾಯಿಸಿದರು.ಡಿ.ಎ.ಪಿ.ಗೊಬ್ಬರ ಕೇಳಿದರೆ ರೈತನಿಗೆ ಬೇಕಿಲ್ಲದ ಬೀಜ ತೆಗೆದುಕೊಂಡರೆ ಮಾತ್ರ ಅಂಗಡಿಯವರು ಡಿ.ಎ.ಪಿ ಗೊಬ್ಬರ ಕೊಡುತ್ತೇವೆ ಎಂದು ಹೇಳುತ್ತಾರೆ. ಇದರ ವಿರುದ್ಧ ಇಲಾಖೆಯವರು ಕ್ರಮವಹಿಸಬೇಕು ಎಂದು ಆಗ್ರಹಿಸಿದರು.
ಪ್ರತಿಭಟನೆಯ ನೇತೃತ್ವವನ್ನು ಜಿಲ್ಲಾಧ್ಯಕ್ಷ ಡಿ.ಎಸ್.ಹಳ್ಳಿ ಮಲ್ಲಿಕಾರ್ಜನ್ ವಹಿಸಿದ್ದರು. ಚಿಕ್ಕಹಳ್ಳಿ ತಿಪ್ಪೇಸ್ವಾಮಿ, ರವಿಕೊಗುಂಡೆ, ಸೂರಪ್ಪ ನಾಯಕ, ಮಾಲಮ್ಮ, ಉಮ್ಮಕ್ಕ, ಸರೋಜಮ್ಮ, ಜಯ್ಯಮ್ಮ, ಪೆದ್ದಮ್ಮ, ಅಂಜಿನಮ್ಮ, ಕುಶಲಮ್ಮ, ಬೇಡರೆಡ್ಡಿಹಳ್ಳಿ ಬಸವರೆಡ್ಡಿ, ಚಂದ್ರೇಶೇಖರ್ ನಾಯ್ಕ್, ಮಲಸಮುದ್ರ ಗಂಗಾಧರ, ಪ್ರಶಾಂತ ರೆಡ್ಡಿ, ತಿಮ್ಮಯ್ಯ, ಚಂದ್ರಣ್ಣ, ಕೋಡಿಹಳ್ಳಿ ಹನುಮಂತಪ್ಪ, ಕೆಂಚವೀರಮ್ಮ ಈಶ್ವರಮ್ಮ, ರವಿಕುಮಾರ್, ಹನುಮಂತಪ್ಪ, ಮಂಜುನಾಥ್, ವಿನಾಯಕ ಇತರರಿದ್ದರು.