ರಾಮನಗರ: ನಗರಸಭೆ ವತಿಯಿಂದ ಭಾನುವಾರ ಆಯೋಜಿಸಿದ್ದ ಅಂಬೇಡ್ಕರ್ ಜಯಂತಿ ಸಮಾರಂಭದಲ್ಲಿ ಅಂಬೇಡ್ಕರ್ ಭಾವಚಿತ್ರದ ಮೆರವಣಿಗೆ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳು ಜನರ ಮನಸೂರೆಗೊಂಡವು.
ಆನಂತರ ವೇದಿಕೆಯಲ್ಲಿ ನಡೆದ ಅಂಬೇಡ್ಕರ್ ಬದುಕು ಕುರಿತ ಚಿತ್ರಪ್ರದರ್ಶನ, ಅಂಬೇಡ್ಕರ್ ಕುರಿತ ಶತಕಂಠ ಗಾಯನ, ವೈವಿಧ್ಯಮಯ ಸಾಂಸ್ಕೃತಿಕ ಕಾರ್ಯಕ್ರಮಗಳು ನೋಡುಗರ ಕಣ್ಮನ ಸೆಳೆದವು. ಪುಸ್ತಕಗಳ ಪ್ರದರ್ಶನ ಮತ್ತು ಮಾರಾಟಕ್ಕೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಯಿತು.
ಪದ್ಮಶ್ರೀ ಪುರಸ್ಕೃತ ಡಾ.ಹಾಸನ ರಘು ಹಾಗೂ ಅಂತಾರಾಷ್ಟ್ರೀಯ ಟೇಕ್ವಾಂಡೋ ಸ್ಪರ್ಧೆಯಲ್ಲಿ ಚಿನ್ನದ ಪದಕ ಗಳಿಸಿದ ಶಾನ್ವಿ ಸತೀಶ್ ಅವರಿಗೆ ನಗರದ ನಾಗರಿಕರ ಪರವಾಗಿ ಸನ್ಮಾನಿಸಲಾಯಿತು. ಎಸ್ಸೆಸ್ಸೆಲ್ಸಿ ಮತ್ತು ಪಿಯುಸಿ ಪರೀಕ್ಷೆಗಳಲ್ಲಿ ಶೇ.90ಕ್ಕಿ ಹೆಚ್ಚಿ ಅಂಕ ಪಡೆದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಿ ಗೌರವಿಸಲಾಯಿತು.ಬೀದಿ ಬದಿ ವ್ಯಾಪಾರಿಗಳಿಗೆ ನೆರಳಿಗಾಗಿ ಒಂದು ಸಾವಿರ ಛತ್ರಿಗಳು, ಪ್ಲಾಸ್ಟಿಕ್ ಬಳೆಕೆಯನ್ನು ನಿಲ್ಲಸುವಂತೆ ಪ್ರೋತ್ಸಾಹಿಸಿ ಸುಮಾರು 10 ಸಾವಿರ ಬಟ್ಟೆ ಬ್ಯಾಗ್‌ಗಳು, ಸವಿತಾ ಸಮಾಜದ ವೃತ್ತಿನಿರತರಿಗೆ 5 ಸಾವಿರ ಬೆಳೆ ಬಾಳುವ 115 ಕಿಟ್, ಮಡಿವಾಳ ಸಮುದಾಯದವರಿಗೆ ಅವರ ಮೂಲ ವೃತ್ತಿಗೆ ಅನ್ವಯಿಸುವಂತೆ ಕಿಟ್‌ಗಳನ್ನು ವಿತರಣೆ ಮಾಡಲಾಯಿತು.
ವಿಶೇಷ ಚೇತನರಿಗೆ ತ್ರಿಚಕ್ರ ಮೋಟಾರ್ ಸೈಕಲ್ , ಮಹಿಳಾ ಸ್ವಸಹಾಯ ಗುಂಪುಗಳಿಗೆ ಸಾಲ, ರಸಪ್ರಶ್ನೆ ಸ್ಪರ್ಧೆಯಲ್ಲಿ ವಿಜೇತರಿಗೆ ಬಹುಮಾನ ನೀಡಲಾಯಿತು.11ಕೆಆರ್ ಎಂಎನ್ 10.ಜೆಪಿಜಿ
ರಾಮನಗರದ ಜ್ಯೂನಿಯರ್ ಕಾಲೇಜು ಮೈದಾನದಲ್ಲಿ ನಡೆದ ಅಂಬೇಡ್ಕರ್ ಜಯಂತಿ ಸಮಾರಂಭದಲ್ಲಿ ಕಲಾವಿದರು ಸಾಂಸ್ಕೃತಿಕ ಕಾರ್ಯಕ್ರಮ ಪ್ರದರ್ಶಿಸಿದರು.