ಪಕ್ಷನಿಷ್ಠರಿಗೆ ಒಲಿದ ವಿವಿಧ ಪದಾಧಿಕಾರಿಗಳ ಸ್ಥಾನ

KannadaprabhaNewsNetwork |  
Published : Mar 09, 2024, 01:33 AM IST
ಶಿರ್ಷಿಕೆ-೮ಕೆ.ಎಂ.ಎಲ್.ಅರ್.೧-ಮಾಲೂರಿನ ಹೆಚ್.ಅರ್.ಪಿ.ಕಲ್ಯಾಣ ಮಂಟಪದಲ್ಲಿ ಬಿಜೆಪಿ ಅಧ್ಯಕ್ಷ ಟಿ.ಬಿ.ಕೃಷ್ಣಪ್ಪ ಪತ್ರಿಕಾಗೋಷ್ಠಿ  ನಡೆಸಿ ಪಕ್ಷದ ವಿವಿಧ ಮೋರ್ಚಾಗಳ ನೂತನ ಪದಾಧಿಕಾರಿಗಳ ಪಟ್ಟಿಯನ್ನು ಬಿಡುಗಡೆ ಮಾಡಿ ಅಭಿನಂದಿಸಿದರು. | Kannada Prabha

ಸಾರಾಂಶ

ಮೂರು ವರ್ಷಗಳಿಗೊಮ್ಮೆ ಎಲ್ಲ ಪದಾಧಿಕಾರಿಗಳ ಬದಲಾವಣೆಯಾಗಬೇಕಾಗಿದ್ದು, ಈ ಹಿಂದಿನ ಚುನಾವಣೆಗಳಲ್ಲಿ ಉತ್ತಮ ಸಂಘಟಕರಾಗಿ ದುಡಿದವರನ್ನೇ ವಿವಿಧ ಮೋರ್ಚಾಗಳ ಪದಾಧಿಕಾರಿಗಳನ್ನಾಗಿ ಆಯ್ಕೆ ಮಾಡಲಾಗಿದೆ.

ಕನ್ನಡಪ್ರಭ ವಾರ್ತೆ ಮಾಲೂರು

ತಾಲೂಕಿನಲ್ಲಿ ಬಿಜೆಪಿ ಪಕ್ಷವನ್ನು ಶಕ್ತಿಯುತವಾಗಿ ಸಂಘಟಿಸಲು ಪಕ್ಷದ ಎಲ್ಲ ಮೋರ್ಚಾಗಳಿಗೆ ಪದಾಧಿಕಾರಿಗಳನ್ನು ಆಯ್ಕೆಮಾಡಲಾಗಿದೆ ಎಂದು ತಾಲೂಕು ಬಿಜೆಪಿ ಅಧ್ಯಕ್ಷ ಟಿ.ಬಿ.ಕೃಷ್ಣಪ್ಪ ಹೇಳಿದರು.

ಅರಳೇರಿ ರಸ್ತೆಯ ಎಚ್.ಆರ್.ಪಿ.ಕಲ್ಯಾಣ ಮಂಟಪದಲ್ಲಿ ಆಯೋಜಿಸಲಾಗಿದ್ದ ಪತ್ರಿಕಾಗೋಷ್ಠಿಯಲ್ಲಿ ಪಕ್ಷದ ಎಲ್ಲ ಮೋರ್ಚಾಗಳ ಪದಾಧಿಕಾರಿ ಪಟ್ಟಿಯನ್ನು ಬಿಡುಗಡೆಗೊಳಿಸಿ ಮಾತನಾಡಿದ ಅವರು, ಮೂರು ವರ್ಷಗಳಿಗೊಮ್ಮೆ ಎಲ್ಲ ಪದಾಧಿಕಾರಿಗಳ ಬದಲಾವಣೆಯಾಗಬೇಕಾಗಿದ್ದು, ಈ ಹಿಂದಿನ ಚುನಾವಣೆಗಳಲ್ಲಿ ಉತ್ತಮ ಸಂಘಟಕರಾಗಿ ದುಡಿದವರನ್ನೇ ವಿವಿಧ ಮೋರ್ಚಾಗಳ ಪದಾಧಿಕಾರಿಗಳನ್ನಾಗಿ ಆಯ್ಕೆ ಮಾಡಲಾಗಿದೆ ಎಂದರು.

ನಮ್ಮೆಲ್ಲರ ಆಯ್ಕೆಗೆ ಮಾರ್ಗದರ್ಶನ ನೀಡಿದ ಸಂಸದ ಮುನಿಸ್ವಾಮಿ,ಮಾಜಿ ಶಾಸಕ ಮಂಜುನಾಥ್ ಗೌಡ ಹಾಗೂ ಜಿಲ್ಲಾಧ್ಯಕ್ಷ ಡಾ.ವೇಣುಗೋಪಾಲ್ ಅವರಿಗೆ ಕೃತಜ್ಞತೆ ಸಲ್ಲಿಸುವುದಾಗಿ ತಿಳಿಸಿದ ಅವರು, ಅಲ್ಪಸಂಖ್ಯಾತ ಮೋರ್ಚಾದ ಪಟ್ಟಿ ಸಿದ್ಧವಾಗುತ್ತಿದ್ದು, ಮುಂದಿನ ದಿನದಲ್ಲಿ ಪಟ್ಟಿ ಬಿಡುಗಡೆ ಮಾಡುವುದಾಗಿ ತಿಳಿಸಿದರು.

ವಿವಿಧ ಮೋರ್ಚಾದ ಪದಾಧಿಕಾರಿಗಳು:

ತಾಲೂಕು ಉಪಾಧ್ಯಕ್ಷರಾಗಿ ಎಚ್.ಅರ್.ಪಂಚಾಕ್ಷರಿ, ಅಲೂ ಮಂಜುನಾಥ್, ಸದಾನಂದ, ಲಿಂಗೇಶ್, ಭಾಗ್ಯಮ್ಮ, ಭಾರತಮ್ಮ ನಂಜುಂಡಪ್ಪ.ಪ್ರಧಾನ ಕಾರ‍್ಯದರ್ಶಿ- ಅಂಚೆ ಮುಸ್ಕೂರು ಸಂತೋಷ್, ಚಿಕ್ಕಕುಂತೂರು ಆನಂದರೆಡ್ಡಿ, ಕಾರ‍್ಯದರ್ಶಿಗಳು- ಲಕ್ಕೂರು ಸಂತೋಷ್,ತಿಪ್ಪಸಂದ್ರ ಗಿರೀಶ್,ಹುಂಗೇನಹಳ್ಳಿ ನಾಗೇಶ್,ಮುನಿಕೃಷ್ಣ,ಸುಪ್ರಿಯ,ಸಂಧ್ಯಾರೆಡ್ಡಿ ಹಾಗೂ ಖಜಾಂಚಿ-ಎಂ.ಎನ್.ವೇಣುಗೋಪಾಲ್.

ಎಸ್.ಸಿ.ಮೋರ್ಚಾ: ಅಧ್ಯಕ್ಷ ಕೊರಂಡಹಳ್ಳಿ ರಾಜಪ್ಪ ,ಉಪಾಧ್ಯಕ್ಷರು-ನಾಗರಾಜ್ ,ಮಾಕರಹಳ್ಳಿ ಮಂಜುನಾಥ್,ವಿ.ರಾಮಾಂಜನೇಯ,ಚೂಕ್ಕೊಂಡಹಳ್ಳಿ ವೆಂಕಟೇಶ್. ಪ್ರಧಾನ ಕಾರ‍್ಯದರ್ಶಿ-ಅಂಗಸಗಿರಿಯಪ್ಪ,ಅನಮಿಟ್ಟಹಳ್ಳಿ ರವೀಂದ್ರ ,ಕಾರ‍್ಯದರ್ಶಿಗಳು-ಯಟ್ಟಕೋಡಿ ಶಂಕರ್,ಕೊಮ್ಮನಹಳ್ಳಿ ಲೋಕೇಶ್,ಮಾರಸಂದ್ರ ನಂಜುಂಡಪ್ಪ,ಕಂಬಿಪುರ ಮಹೇಶ್,ಖಜಾಂಚಿ-ಮಿಟ್ಟಗಾನಹಳ್ಳಿ ಕೃಷ್ಣ ಮೂರ್ತಿ.

ರೈತ ಮೋರ್ಚಾ: ಅಧ್ಯಕ್ಷ ಮುನಿರೆಡ್ಡಿ ,ಉಪಾಧ್ಯಕ್ಷರು-ಪಡವನಹಳ್ಳಿ ಶ್ರೀರಾಮಪ್ಪ,ಕ್ಷೇತ್ರನ ಹಳ್ಳಿ ರಾಮಕೃಷ್ಣಪ್ಪ,ತಿಪ್ಪಸಂದ್ರ ಹರೀಶ್,ಅಹನ್ಯ ಶ್ರೀನಾಥ್ ರೆಡ್ಡಿ. ಕಾರ‍್ಯದರ್ಶಿಗಳು-ಚಿಕ್ಕಕಲ್ಲಹಳ್ಳಿ ಸಂಪಂತ್,ಆಂಜಿನಪ್ಪ,ಸುಂದರ್ ರೆಡ್ಡಿ, ಲಕ್ಷಣ್ ಗೌಡ, ಖಜಾಂಚಿ- ಜಯರಾಜ್

ನಗರಮೋರ್ಚಾ: ಅಧ್ಯಕ್ಷ- ರಾಮಮೂರ್ತಿ, ಉಪಾಧ್ಯಕ್ಷರು-ಬಾಬು, ಶ್ರೀನಿವಾಸ್, ಮಾ.ಕೃ.ಸುರೇಶ್, ಧನರಾಜ್. ಪ್ರಧಾನ ಕಾರ‍್ಯದರ್ಶಿ-ಎಂ.ಎನ್.ವಿಜಯಕುಮಾರ್, ಚಲಪತಿ. ಕಾರ‍್ಯದರ್ಶಿಗಳು- ಮಂಜುನಾಥ್, ವೆಂಕಟೇಶ್, ರಾಮಣ್ಣ, ಜಯರಾಮ್, ಖಜಾಂಚಿ- ಪ್ರಸನ್ನ.

ಎಸ್.ಟಿ.ಮೋರ್ಚಾ: ಅಧ್ಯಕ್ಷ - ಜಲಾಂಧರ್ ,ಉಪಾಧ್ಯಕ್ಷರು - ನಾರಾಯಣಸ್ವಾಮಿ, ಮುನಿಯಪ್ಪ, ವೈ.ಎಂ.ತಿಮ್ಮರಾಯಪ್ಪ, ಸಂಪತ್ ಕುಮಾರ್, ಪ್ರಧಾನ ಕಾರ‍್ಯದರ್ಶಿಗಳು- ಮಂಜುನಾಥ್, ಆದಿತ್ಯ.ಕಾರ‍್ಯದರ್ಶಿಗಳು- ಮಂಜುನಾಥ್, ತರ‍್ನಹಳ್ಳಿ ಮಂಜುನಾಥ್, ಭರತ್ ನಾಯಕ್, ನಾರಾಯಣಸ್ವಾಮಿ, ಖಜಾಂಚಿ-ನಾಗರಾಜ್.

ಯುವ ಮೋರ್ಚಾ: ಅಧ್ಯಕ್ಷ - ವಿನೋದ್, ಉಪಾಧ್ಯಕ್ಷರು- ಮಂಜುನಾಥ್ ರೆಡ್ಡಿ , ನಂದೀಶ್, ಮಂಜುನಾಥ್, ಸಾಯಿ ವೆಂಕಟೇಶ್, ಪ್ರಧಾನ ಕಾರ‍್ಯದರ್ಶಿ-ಶ್ರವಣ್, ಪ್ರಶಾಂತ್, ಕಾರ‍್ಯದರ್ಶಿಗಳು- ಲಘುಮೇಶ್, ಸಿ.ವಿ.ಹರೀಶ್, ಶಿವು, ರಾಮೇಗೌಡ. ಖಜಾಂಚಿ- ನಕ್ಕನಹಳ್ಳಿ ವೆಂಕಟೇಶ್.

ಮಹಿಳಾ ಮೋರ್ಚಾ: ಅಧ್ಯಕ್ಷೆ- ಅನಿತಾ ನಾಗರಾಜ್, ಉಪಾಧ್ಯಕ್ಷರು -ಸವಿತಾ , ವಿಜಯಲಕ್ಷ್ಮೀ, ಮಾಲ, ಗೀತಾ, ಪ್ರಧಾನ ಕಾರ‍್ಯದರ್ಶಿಗಳು-ಭಾಗ್ಯಮ್ಮ, ಪ್ರೀತಿ. ಕಾರ‍್ಯದರ್ಶಿಗಳು- ಮಂಜುಳ, ಯಶೋಧಮ್ಮ, ಪ್ರತಿಮಾ, ಚಂದ್ರಕಾಂತಮ್ಮ, ಖಜಾಂಚಿ- ಉಮಾದೇವಿ.

ಹಿಂದುಳಿಂದ ವರ್ಗ ಮೋರ್ಚಾ: ಅಧ್ಯಕ್ಷ - ಅಬ್ಬೇನಹಳ್ಳಿ ಮಂಜುನಾಥ್,ಉಪಾಧ್ಯಕ್ಷರು- ಬಾಲಕೃಷ್ಣಪ್ಪ, ಎಲ್.ಚಂದ್ರಪ್ಪ, ಶ್ರೀಧರ ಮೂರ್ತಿ, ಆನಂದ್, ಪ್ರಧಾನ ಕಾರ‍್ಯದರ್ಶಿ- ಎನ್.ಶ್ರೀನಿವಾಸ್, ಜಗನ್ನಾಥ್. ಕಾರ‍್ಯದರ್ಶಿಗಳು- ರಂಗನಾಥ್, ಮುನಿರಾಜು, ಚೆನ್ನಕೃಷ್ಣ, ವಿಶಾಲಾಕ್ಷಿ, ಖಜಾಂಚಿ- ಗೋಪಾಲ್.

ಹೋಬಳಿವಾರು ಮಹಾಶಕ್ತಿ ಕೇಂದ್ರಗಳು;

ಲಕ್ಕೂರು ಹೋಬಳಿ-ರಾಜಣ್ಣ , ಮಾಸ್ತಿ ಹೋಬಳಿ-ಶೇಖರ್, ಕುಡಿಯನೂರು ಹೋಬಳಿ-ಮಿಥುನ್, ಟೇಕಲ್ ಹೋಬಳಿ-ಗೋಪಾಲ್ ,ತರ‍್ನಹಳ್ಳಿ ಹೋಬಳಿ-ಸುನಿಲ್ , ಮಾಲೂರು ಪಟ್ಟಣ- ರಾಮಚಂದ್ರ.

ಪತ್ರಿಕಾ ಕಾರ‍್ಯದರ್ಶಿ- ನಟರಾಜ್, ವಕ್ತಾರ-ಜಿ.ಮಂಜುನಾಥ್ ಗೌಡ. ಸಾಮಾಜಿಕ ಜಾಲತಾಣ ಸದಸ್ಯರು- ಮಂಜುನಾಥ್, ಪ್ರಸನ್ನ ಗೌಡ, ಕಿರಣ್, ಅಂಬರೀಶ್ ಆಯ್ಕೆಯಾಗಿದ್ದಾರೆ.

PREV

Recommended Stories

ಸಾರಿಗೆ ನೌಕರರ ಜತೆ ಸರ್ಕಾರ ಸಂಧಾನ ವಿಫಲ
ಸುಹಾಸ್ ಶೆಟ್ಟಿ ಹ* ಕೇಸಲ್ಲಿ ಎನ್‌ಐಎನಿಂದ 18 ಕಡೆ ದಾಳಿ