ಕನ್ನಡಪ್ರಭ ವಾರ್ತೆ ಮೈಸೂರುಮೈಸೂರು ರಾಣಿ ಯುವಕರ ಬಳಗದಿಂದ ಹಳ್ಳಿಕಾರ್ ತಳಿ ನೆನಪಿನಾರ್ಥ ತಾಲೂಕಿನ ಹಂಚ್ಯಾ ಗ್ರಾಮದಲ್ಲಿ ನಡೆದ ರಾಸುಗಳ ಸ್ಪರ್ಧೆ ಮತ್ತು ಗಾಡಿ ಓಟದ ಸ್ಪರ್ಧೆಯಲ್ಲಿ ಮಾರುತಿ ಆರಂಜ್ಯೋತಿ ತಂಡ ಪ್ರಥಮ ಸ್ಥಾನ ಪಡೆಯುವ 50 ಸಾವಿರ ನಗದು ಬಹುಮಾನದ ಮೂಲಕ ಚಾಂಪಿಯನ್ ಶಿಪ್ ಪಟ್ಟಕ್ಕೇರಿತು.ಎರಡು ದಿನಗಳ ಕಾಲ ನಡೆದ ಸ್ಪರ್ಧೆಯಲ್ಲಿ ಹಸುಗಳ ಗಾಡಿ ಒಟದ ಸ್ಪರ್ಧೆಯಲ್ಲಿ 50 ತಂಡ ಭಾಗವಹಿಸಿದ್ದವು. ಈ ಪೈಕಿ ಮಾರುತಿ ಆರಂಜ್ಯೋತಿ (ಪ್ರ) 50 ಸಾವಿರ ನಗದು, ಆರ್ ಎಸ್ ಜಗ್ಗು ಪಟ್ಲಿ (ದ್ವಿ) 30 ಸಾವಿರ ನಗದು, ಕೆಂದ ಗದ್ದೆ ಮಾಸ್ತಮ್ಮ (ತೃ) 20 ಸಾವಿರ ನಗದು ಮತ್ತು ಅರುರೂ ವಂಡಳ್ಳಿ ರುಕ್ಕು (ನಾಲ್ಕನೇ) 10000 ಬಹುಮಾನ ಪಡೆದುಕೊಂಡವು.ಮೊದಲನೇ ವರ್ಷದ ರಾಜ್ಯ ಮಟ್ಟದ ಜೋಡಿ ಹಸುಗಳ ಮತ್ತು ಚಕ್ಕಡಿ ಓಟದ ಸ್ಪರ್ಧೆಯಲ್ಲಿ ರೇವಣಿ ಶಿವುಕರ ಕುಳ್ಳಿ ಪ್ರಥಮ ಬಹುಮಾನ ಗೆದ್ದು 35000 ನಗದು ಬಹುಮಾನ ಪಡೆದುಕೊಂಡಿತು.ಹಾಲು ಹಲ್ಲು ಮತ್ತು ಎರಡು ಹಲ್ಲು ಚಕ್ಕಡಿ ಸ್ಪರ್ಧೆಯಲ್ಲಿ ರಾಜ್ಯದ ವಿವಿಧ ಜಿಲ್ಲೆಗಳಿಂದ ಬರೋಬ್ಬರಿ 69 ಜೋಡಿಗಳು ಭಾಗವಹಿಸಿದ್ದವು. ಈ ಪೈಕಿ ರೇವಣಿ ಶಿವುಕರ ಕುಳ್ಳಿ (ಪ್ರ), ಛೋಟಾ ಜೀವ ಕಿಂಗ್ ಕುಳ್ಳ ದ್ವೀತಿಯ ಸ್ಥಾನದೊಂದಿಗೆ 25 ಸಾವಿರ ನಗದು ಬಹುಮಾನ ಗೆದ್ದಿತು. ಕ್ಯಾಪ್ಷನ್ ರಾಕಿ ರಾಣಿ ಜೇನು ತೃತೀಯ ಸ್ಥಾನ ಪಡೆದು 15000 ಪಡೆದುಕೊಂಡಿದೆ.ರಚ್ಚುಸಿರಿ ಕುಡ್ಲುಕುಪ್ಪೆ (ನಾಲ್ಕನೇ), ಜಾವ ಮುಬಾರಕ್, ಡಾನ್ ಕುಳ್ಳಿ ಡಾನ್ ಗಾಂಧಿ, ಡಾನ್ ಜಗ್ಗು ಮೈಸೂರು ಚಾಮುಂಡಿ, ಆಪಲ್ ರಾಣಾ ನಾಗಮಣಿ, ಮುರುಗ ಹೈ ಸ್ಪೀಡ್ ರಚ್ಚು ಕ್ರಮವಾಗಿ ಗೆದ್ದು ಬಹುಮಾನ ಪಡೆದುಕೊಂಡವು.ಗೆದ್ದ ರಾಸುಗಳ ತಂಡಕ್ಕೆ ಶಾಸಕ ಜಿ.ಡಿ. ಹರೀಶ್ ಗೌಡ ಬಹುಮಾನ ವಿತರಿಸಿ ಮಾತನಾಡಿ, ರಾಸುಗಳ ಸ್ಪರ್ಧೆ ಬಹಳ ಹಿಂದಿನಿಂದಲೂ ನಡೆದುಕೊಂಡು ಬಂದಿರುವ ನಮ್ಮ ಗ್ರಾಮೀಣ ಕ್ರೀಡೆಯಾಗಿದೆ. ರಾಜ್ಯ ಮಟ್ಟದಲ್ಲಿ ಮಾತ್ರವಲ್ಲದೆ ರಾಷ್ಟ್ರೀಯ ಮಟ್ಟದಲ್ಲಿ ಆಯೋಜಿಸುವ ಮೂಲಕ ದೇಸೀಯ ಆಟವನ್ನು ಬೆಳೆಸಿ ಉಳಿಸುವ ಕೆಲಸ ಆಗಬೇಕಿದೆ ಎಂದರು.ಗ್ರಾಪಂ ಮಾಜಿ ಅಧ್ಯಕ್ಷ ಜಿ.ಟಿ. ಮಂಜು, ನೇಗಿಲಯೋಗಿ ರವಿಕುಮಾರ್, ಗ್ರಾಮದ ಮುಖಂಡರಾದ ತಮ್ಮೇಗೌಡ, ಬೋರೇಗೌಡ, ವೆಂಕಟೇಶ್, ಮಹದೇವು, ನಂದೀಶ್, ಶ್ರೀಧರ್ ಗೌಡ, ಚಂದ್ರು, ಮನು, ಹರ್ಷ ಇತರರು ಇದ್ದರು.
ಗಾಡಿ ಓಟದ ಸ್ಪರ್ಧೆ: ಮಾರುತಿ ಆರಂಜ್ಯೋತಿ ತಂಡ ಪ್ರಥಮ
ಎರಡು ದಿನಗಳ ಕಾಲ ನಡೆದ ಸ್ಪರ್ಧೆಯಲ್ಲಿ ಹಸುಗಳ ಗಾಡಿ ಒಟದ ಸ್ಪರ್ಧೆಯಲ್ಲಿ 50 ತಂಡ ಭಾಗವಹಿಸಿದ್ದವು.
Latest Videos
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.