ಸಮಾಜ ಕಡೆಯ ವ್ಯಕ್ತಿಗೂ ಲಭಿಸಲಿದೆ ಅಂಚೆ ಇಲಾಖೆ ಸೇವೆ: ಮ್ಯಾಗೇರಿ

KannadaprabhaNewsNetwork |  
Published : Oct 25, 2026, 02:30 AM IST
ಡಾಕ್ ಚೌಪಾಲ್ ಅಭಿಯಾನ ಕಾರ್ಯಕ್ರಮಕ್ಕೆ ಸಸಿ ನೆಡುವ ಮೂಲಕ ಚಾಲನೆ ನೀಡಲಾಯಿತು. | Kannada Prabha

ಸಾರಾಂಶ

ರಾಜ್ಯ ಹಾಗೂ ಕೇಂದ್ರ ಸರ್ಕಾರ ಅಂಚೆ ಇಲಾಖೆಯ ಮೂಲಕ ವಿವಿಧ ಸೇವೆಗಳನ್ನು ಜನರ ಮನೆ ಬಾಗಿಲಿಗೆ ತಲುಪಿಸುವ ಕೆಲಸವನ್ನು ಮಾಡುತ್ತಿದೆ. ಅವುಗಳನ್ನು ಗ್ರಾಹಕರು ನೀಡುವ ಸಲುವಾಗಿ ಡಾಕ್ ಚೌಪಾಲ್ ಅಭಿಯಾನ ಆರಂಭಿಸಲಾಗಿದೆ.

ಕನ್ನಡಪ್ರಭ ವಾರ್ತೆ ಗದಗ

ರಾಜ್ಯ ಹಾಗೂ ಕೇಂದ್ರ ಸರ್ಕಾರ ಅಂಚೆ ಇಲಾಖೆಯ ಮೂಲಕ ವಿವಿಧ ಸೇವೆಗಳನ್ನು ಜನರ ಮನೆ ಬಾಗಿಲಿಗೆ ತಲುಪಿಸುವ ಕೆಲಸವನ್ನು ಮಾಡುತ್ತಿದೆ. ಅವುಗಳನ್ನು ಗ್ರಾಹಕರು ನೀಡುವ ಸಲುವಾಗಿ ಡಾಕ್ ಚೌಪಾಲ್ ಅಭಿಯಾನ ಆರಂಭಿಸಲಾಗಿದೆ ಎಂದು ಪ್ರಧಾನ ಅಂಚೆ ಪಾಲಕ ಡಿ.ಜಿ. ಮ್ಯಾಗೇರಿ ಹೇಳಿದರು.

ನಗರದ ಪ್ರಧಾನ ಅಂಚೆ ಕಚೇರಿ ಆವರಣದಲ್ಲಿ ಡಾಕ್ ಚೌಪಾಲ್ ಅಭಿಯಾನ ಕಾರ್ಯಕ್ರಮಕ್ಕೆ ಸಸಿ ನೆಡುವ ಮೂಲಕ ಚಾಲನೆ ನೀಡಿ ಮಾತನಾಡಿದ ಅವರು, ಗ್ರಾಹಕರ ನಿರೀಕ್ಷೆಗೆ ತಕ್ಕಂತೆ ಸೇವೆ ನೀಡುವುದರಿಂದ ಗ್ರಾಹಕರು ತಮ್ಮ ದಿನನಿತ್ಯದ ಅಗತ್ಯಗಳಿಗೆ ಅಂಚೆ ಇಲಾಖೆ ಸೇವೆಗಳನ್ನು ಪಡೆಯಲು ಸಾಧ್ಯವಾಗುತ್ತದೆ. ಅಂಚೆ ಇಲಾಖೆ ಕೇವಲ ಪತ್ರ ವ್ಯವಹಾರಕ್ಕೆ ಸೀಮಿತವಾಗದೆ ಬ್ಯಾಂಕಿಂಗ್, ಉಳಿತಾಯ ಯೋಜನೆಗಳು, ವಿಮೆ, ಪಿಂಚಣಿ ವಿತರಣೆ, ಆನ್‌ಲೈನ್ ಪಾವತಿ, ಪಾರ್ಸೆಲ್ ವಿತರಣಾ ಸೇವೆ ಸೇರಿದಂತೆ ಹಲವು ಸೇವೆ ನೀಡಲಾಗುತ್ತದೆ. ಅವುಗಳನ್ನು ಸದುಪಯೋಗ ಪಡೆಯಬೇಕು ಎಂದರು.

ವಿದ್ಯುನ್ಮಾನ ಹಣಕಾಸು ವಹಿವಾಟು ಸೇವೆ ಕ್ಷೇತ್ರದಲ್ಲಿ ಹೊಸ ಭಾಷ್ಯ ಐಪಿಪಿಬಿ (ಇಂಡಿಯಾ ಪೊಸ್ಟ್ ಮೆಂಟ್ ಬ್ಯಾಂಕ್) ಪಡೆದುಕೊಂಡಿದೆ. ಇನ್ನೂ ಕೇವಲ10 ವರ್ಷದಲ್ಲಿ ದೇಶದ 10 ಕೋಟಿ ಜನರಿಗೆ ಡಿಬಿಟಿ ಸೇವೆ ಕಲ್ಪಿಸಿದೆ. ಹಾಗಾಗಿ 10 ವರ್ಷದಲ್ಲಿ ಈ ಮಹತ್ವದ ಸಾಧನೆ ತೋರಿದ ಡಿಬಿಟಿ ಬ್ಯಾಂಕ್ ಆಫ್ ಇಂಡಿಯಾ ಎಂಬ ಮಹತ್ವದ ಯೋಜನೆಗೆ ಅನುಷ್ಠಾನ ಆಗಲಿದೆ ಎಂದರು.

ಈ ವೇಳೆ ಉಪ ಅಂಚೆ ಪಾಲಕರಾದ ವಾಣಿ ಯಳಗಂಟಿ, ಮಂಜುನಾಥ ಪಾಮೇನಹಳ್ಳಿ, ವೆಂಕಟೇಶ ಆಕಳವಾಡಿ, ಶರಣಪ್ಪ ಬೆನಾಳ, ಅಂಕಿತಕುಮಾರ, ಕವಿತಾ ರಡ್ಡೇರ, ಸೌಮ್ಯ ಹುಯಿಲಗೋಳ, ವಿನೋತಾ ಕಪ್ಪತ್ತನವರ, ಸಿದ್ಧಲಿಂಗೇಶ ಯಂಡಿಗೇರಿ, ರವಿ ಜಾಧವ, ಮಂಜುನಾಥ ಟಿ, ಶಿವಯ್ಯ ಪೂಜಾರ, ಪ್ರಕಾಶ.ಬಿ ಮತ್ತಿತರರು ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಕುಷ್ಟಗಿ ತಾಯಿ ಮತ್ತು ಮಕ್ಕಳ ಆಸ್ಪತ್ರೆಯಲ್ಲಿ ಸಮಸ್ಯೆಗಳ ತಾಂಡವ!
ಮನೆ-ಮನೆಗೂ ವಿಜ್ಞಾನ ಮುಟ್ಟಿಸುವ ಕೆಲಸವಾಗಲಿ: ಪ್ರೊ. ಸಿ.ಎಸ್. ಅರಸನಾಳ