ಕನ್ನಡಪ್ರಭ ವಾರ್ತೆ ಕೊಲ್ಹಾರ
ತಾಲೂಕಿನ ಮಟ್ಟಿಹಾಳ ಕ್ರಾಸ್ ಬಳಿಯಿರುವ ಕೃಷ್ಣಾ ಭಾಗ್ಯ ಜಲ ನಿಗಮ ನಿಯಮಿತದ ಮುಳವಾಡ ಏತ ನೀರಾವರಿ ವಿಭಾಗ-ನಂ.1ರ ಕಾರ್ಯನಿರ್ವಾಹಕ ಅಭಿಯಂತರ ಕಚೇರಿ ಮುಂದೆ ಸಂಘಟನೆ ನೇತೃತ್ವದಲ್ಲಿ ನಡೆದ ರೈತರ ಪ್ರತಿಭಟನೆಯಲ್ಲಿ ಅವರು ಮಾತನಾಡಿದರು. ರೈತರ ಜಮೀನುಗಳಲ್ಲಿ ಕಾಲುವೆಗಳು ಹಾಯ್ದು ಹೋಗಿವೆ. ಅದರಿಂದ ರೈತರು ಜಮೀನು ಕಳೆದುಕೊಂಡಿದ್ದಾರೆ. ಅನೇಕ ರೈತರಿಗೆ ಪರಿಹಾರ ದೊರಕಿಲ್ಲ. ಶೀಘ್ರವಾಗಿ ಪರಿಹಾರ ನೀಡಬೇಕು. ಕಾಲುವೆಗಳಲ್ಲಿ ಹೂಳು ತುಂಬಿದ್ದು, ಏ.24 ನಂತರ ಜೂನ್ ವರೆಗೆ ಎಲ್ಲ ಕಾಲುವೆಗಳ ಹೂಳು ತೆಗೆಯುವ ಕಾರ್ಯ ಆಗಬೇಕು ಎಂದರು.
ತಾಲೂಕು ಅಧ್ಯಕ್ಷ ಸೋಮು ಬಿರಾದಾರ ಮಾತನಾಡಿ, ಕಾಲುವೆಗಳಿಗೆ ಸತತವಾಗಿ 8 ರಿಂದ 9 ತಿಂಗಳವರೆಗೆ ನೀರು ಹರಿಸಬೇಕು. ಎರಡ್ಮೂರು ವರ್ಷಗಳಿಂದ ಅಧಿಕಾರಿಗಳು ಕಾಲುವೆ ನೀರನ್ನು ಹಂತ ಹಂತವಾಗಿ ಬಂದ್ ಮಾಡುತ್ತಾ ಬಂದ್ರು ಅದಕ್ಕಾಗಿ ನಾವು ರೈತರೊಂದಿಗೆ ಸಂಘಟನೆ ಮಾಡಿಕೊಂಡು ರಸ್ತೆಗೆ ಇಳಿಯಬೇಕಾದ ಪರಿಸ್ಥಿತಿ ಬಂದಿದೆ ಎಂದರು.ಡಿವೈಎಸ್ಪಿ ಬಲ್ಲಪ್ಪ ನಂದಗಾವಿ, ಕೆಬಿಜೆಎನ್ಎಲ್ ಎಸ್ಇ ಗೋವಿಂದ ರಾಠೋಡ, ಸಿಪಿಐ ಶರಣಗೌಡ ಗೌಡರ, ಪಿಎಸ್ಐ ಅಶೋಕ ನಾಯಕ, ಎನ್ ಟಿಪಿಸಿ ಕೂಡಗಿ ಪಿಎಸ್ಐ ಯತೀಶ್ ಕೆ.ಎನ್, ಸಂಘದ ಉಪಾಧ್ಯಕ್ಷ ಕಲ್ಲಪ್ಪ ಸೋನ್ನದ, ರಾಹುಲ್ ಕುಬಕಡ್ಡಿ, ಸಂಗಮೇಶ ಸಗರ, ಟಿ.ಟಿ. ಹಗೆದಾಳ, ಶ್ರೀಶೈಲ ಅಂಗಡಿ, ಜಗದೀಶ ಸುನಗದ, ಕಲ್ಲಪ್ಪ ಗಿಡ್ಡಪ್ಪಗೋಳ, ವಿಜಯಮಾಂತೇಶ ಗಿಡ್ಡಪ್ಪಗೋಳ, ಮಂಜುನಾಥ ದ್ಯಾವಾಪೂರ, ಮಲ್ಲಪ್ಪ ಗಾಣಗೇರ, ಕೆಬಿಜೆಎನ್ಎಲ್ ಅಧಿಕಾರಿಗಳು ಸೇರಿದಂತೆ ತಾಲೂಕಿನ ಸುತ್ತಮುತ್ತಲಿನ ರೈತರು ಭಾಗವಹಿಸಿದ್ದರು.